ನವದೆಹಲಿ: ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ಸ್ಥಳೀಯ ನೆಲದ ನಿರ್ವಹಣಾ ಕಾರ್ಯಾಚರಣೆಗೆ ಅನುಮತಿಸುವ ಅಮೆರಿಕಾ ಸರ್ಕಾರದ ಯೋಜನೆ ಒಂದು ಅವಕಾಶ. ಭವಿಷ್ಯದಲ್ಲಿ ಅಗತ್ಯ ಬಿದ್ದರೆ ಅದನ್ನು ಸದುಪಯೋಗಪಡಿಸಿಕೊಳ್ಳುತ್ತದೆ ಎಂದು ಏರ್ ಇಂಡಿಯಾ ಹೇಳಿದೆ.
ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ಸ್ವಯಂ ನಿರ್ವಹಣೆಗೆ ಏರ್ ಇಂಡಿಯಾದ ಹಕ್ಕನ್ನು ಅಮಾನತುಗೊಳಿಸುವ ಅಮೆರಿಕಾ ಸಾರಿಗೆ ಇಲಾಖೆಯ (ಯುಎಸ್ಟಿಒಟಿ) 2019ರ ಜುಲೈ ನಿರ್ಧಾರದಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಏಐ ಸ್ಪಷ್ಟಪಡಿಸಿದೆ.
ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ವಿಮಾನಯಾನ ನೆಲದ ನಿರ್ವಹಣಾ ಸೇವೆಗಳನ್ನು ಮತ್ತೊಂದು ಕಂಪನಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಅಮೆರಿಕಾದ ವಿಮಾನ ನಿಲ್ದಾಣಗಳಲ್ಲಿ ತನ್ನ ನೆಲದ ನಿರ್ವಹಣಾ ಕಾರ್ಯಾಚರಣೆಯನ್ನು ಸ್ವಯಂ ನಿರ್ವಹಿಸಲು ಏರ್ ಇಂಡಿಯಾದ ಸಾಮರ್ಥ್ಯವನ್ನು ಮರು ಸ್ಥಾಪಿಸಲು ಯೋಜಿಸಿದೆ ಎಂದು ಯುಎಸ್‌ಡಿಒಟಿ ತಿಳಿಸಿದೆ.
ನೆಲದ ನಿರ್ವಹಣಾ ಸೇವೆಗಳಲ್ಲಿ ವಿಮಾನದಲ್ಲಿ ಸರಕುಗಳ ಲೋಡ್ ಮತ್ತು ಅನ್ಲೋಡ್, ಡಿ-ಐಸಿಂಗ್, ಚೆಕ್-ಇನ್ ಮತ್ತು ಟಿಕೆಟಿಂಗ್ನಂತಹ ಸೇವೆಗಳು ಸೇರಿವೆ.
ಅಮೆರಿಕಾ ವಿಮಾನ ನಿಲ್ದಾಣಗಳಲ್ಲಿ ಸ್ವಯಂ ನಿರ್ವಹಣೆಗೆ ಅಮೆರಿಕಾ ಸಾರಿಗೆ ಇಲಾಖೆ ಈ ನಿರ್ಬಂಧದಿಂದ ಏರ್ ಇಂಡಿಯಾದ ಮೇಲ ಯಾವುದೇ ಪರಿಣಾಮ ಬೀರಲಿಲ್ಲ. ಏರ್ ಇಂಡಿಯಾ ಯುಎಸ್ಎಯಲ್ಲಿ ತನ್ನ ವಿಮಾನಗಳ ಯಾವುದೇ ಸ್ವಯಂ ನಿರ್ವಹಣೆ ನಡೆಸಲಿಲ್ಲ ಎಂದು ಏರ್ ಇಂಡಿಯಾ ತಿಳಿಸಿದೆ.
ಅಮೆರಿಕಾದಲ್ಲಿನ ಭಾರತೀಯ ರಾಯಭಾರಿ ತಾರಂಜಿತ್ ಸಿಂಗ್ ಸಂಧು ಅವರು ಅಮೆರಿಕಾ ಸಾರಿಗೆ ಕಾರ್ಯದರ್ಶಿ ಎಲೈನ್ ಚಾವೊ ಅವರೊಂದಿಗೆ ಮಾತುಕತೆ ನಡೆಸಿದ ಒಂದು ದಿನದ ನಂತರ ಯುಎಸ್‌ಡಿಒಟಿ ಪ್ರಕಟಣೆ ಹೊರಬಿದ್ದಿದೆ.
ಈ ಕಷ್ಟದ ಸಮಯದಲ್ಲಿ ಭಾರತ ಮತ್ತು ಯುಎಸ್ ವಿಮಾನಯಾನ ಕ್ಷೇತ್ರದಲ್ಲಿ ಪಾಲುದಾರಿಕೆ ಹೊಂದಿವೆ ಎಂದು ರಾಯಭಾರಿ ಟ್ವೀಟ್ ಮಾಡಿದ್ದಾರೆ.