ನವದೆಹಲಿ: ಅಮೆರಿಕ ಫೆಡರಲ್ ಬ್ಯಾಂಕ್ ತನ್ನ ಆರ್ಥಿಕ ನೀತಿಯನ್ನು ಘೋಷಿಸಲಿದೆ ಎಂಬ ವಿಚಾರ ಈಗ ವಿಶ್ವದ ಷೇರು ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರಿದೆ. ಮಾರ್ಚ್ನಿಂದ ಬಡ್ಡಿದರಗಳು ಏರಿಕೆ ಕಾಣಲಿವೆ ಎಂಬ ಮಾಹಿತಿ ಭಾರತೀಯ ಷೇರುಪೇಟೆ ಮೇಲೂ ಪರಿಣಾಮವನ್ನುಂಟು ಮಾಡಿದೆ.
ಗುರುವಾರದ ಮುಂಬೈ ಷೇರುಮಾರುಕಟ್ಟೆ 57,276 ಅಂಕಗಳೊಂದಿಗೆ ವ್ಯವಹಾರವನ್ನು ಮುಗಿಸಿದೆ. ಶೇ 1 ರಷ್ಟು ಕುಸಿದು ಅಂದರೆ 581 ಅಂಕಗಳ ನಷ್ಟ ಕಂಡಿದೆ. ಇನ್ನು ಗುರುವಾರದ ವ್ಯವಹಾರದ ಆರಂಭದಲ್ಲೇ 17 ಸಾವಿರದ ಗಡಿಯಿಂದ ಕೆಳಕ್ಕಿಳಿದಿದ್ದ ನಿಫ್ಟಿ, ದಿನದಾಂತ್ಯಕ್ಕೆ 167 ಅಂಕ ಕಳೆದುಕೊಂಡು 17110 ಪಾಯಿಂಟ್ಗಳೊಂದಿಗೆ ದಿನದ ವಹಿವಾಟು ಮುಗಿಸಿತು.
ಬುಧವಾರ ಸಭೆ ನಡೆಸಿದ ಫೆಡರಲ್ ಬ್ಯಾಂಕ್ ಅಧಿಕಾರಿಗಳು ಬಡ್ಡಿದರ ಏರಿಕೆ ಮಾಡುವ ಬಗ್ಗೆ ನಿರ್ಧರಿಸಿವೆ ಎನ್ನಲಾಗಿದೆ. ಇದು ಷೇರುಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಹಲವು ಕಂಪನಿಗಳು ನಷ್ಟ ಅನುಭವಿಸಿದರೆ, ಬ್ಯಾಂಕಿಂಗ್ ಕ್ಷೇತ್ರದ ಷೇರುಗಳ ಬೆಲೆಯಲ್ಲಿ ಭಾರಿ ಚೇತರಿಕೆ ಕಂಡು ಬಂದಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಇನ್ನು ಆಟೋ ಸೂಚ್ಯಂಕಗಳು ಸಹ ಲಾಭ ಮಾಡಿಕೊಂಡವು. ಆದರೆ ರಿಯಾಲ್ಟಿ, ಗ್ರಾಹಕ ಬೆಲೆಬಾಳುವ ವಸ್ತುಗಳು, ಟೆಲಿಕಾಂ, ಐಟಿ ಮತ್ತು ಆರೋಗ್ಯ ಕ್ಷೇತ್ರದ ಕಂಪನಿಗಳ ಷೇರುಗಳ ಬೆಲೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ.
ಏಷ್ಯನ್ ಮಾರುಕಟ್ಟೆಗಳು ಕಳೆದ 15 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿದವು. ಆದರೆ, ಯುರೋಪಿಯನ್ ಷೇರುಗಳು ದುರ್ಬಲ ಆರಂಬದ ಬಳಿಕ ಚೇತರಿಕೆ ಕಂಡವು. ಇನ್ನು ಭಾರತೀಯ ಷೇರು ಮಾರುಕಟ್ಟೆ ಸಹ ಆರಂಭಿಕವಾಗಿ ಭಾರಿ ಕುಸಿತ ಕಂಡಿತು. ಆದರೆ, ದಿನದ ವಹಿವಾಟಿನ ಅಂತ್ಯದ ವೇಳೆಗ ತುಸು ಚೇತರಿಕೆ ಕಂಡಿತಾದರೂ ಅಂತಿಮವಾಗಿ ನಷ್ಟದೊಂದಿಗೆ ವಹಿವಾಟನ್ನು ಅಂತ್ಯಗೊಳಿಸಿತು.
ಎಚ್‌ಸಿಎಲ್ ಟೆಕ್ನಾಲಜೀಸ್, ಟೆಕ್ ಮಹೀಂದ್ರಾ, ಡಾ ರೆಡ್ಡೀಸ್, ಟಿಸಿಎಸ್ ಮತ್ತು ವಿಪ್ರೋ ನಷ್ಟ ಅನುಭವಿಸಿದರೆ, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಸಿಪ್ಲಾ, ಮಾರುತಿ ಸುಜುಕಿ ಮತ್ತು ಕೋಟಕ್ ಮಹೀಂದ್ರಾ ಷೇರುಗಳು ಲಾಭ ಮಾಡಿಕೊಂಡವು.
Budget 2022: ಈ ಸಲವೂ ಕಾಗದ ರಹಿತ ಬಜೆಟ್, ಮೊಬೈಲ್ ಅಪ್ಲಿಕೇಶನ್ನಲ್ಲೂ ಲಭ್ಯ