ETV Bharat / business

ಶಿಯೋಮಿ ಸೇರಿ ಚೀನಾದ 9 ಕಂಪನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿದ ಅಮೆರಿಕ

author img

By

Published : Jan 15, 2021, 7:43 PM IST

ಶಿಯೋಮಿ ಮತ್ತು ಸರ್ಕಾರಿ ಸ್ವಾಮ್ಯದ ವಿಮಾನ ತಯಾರಕ ಕಮರ್ಷಿಯಲ್ ಏರ್‌ಕ್ರಾಫ್ಟ್ ಕಾರ್ಪೊರೇಷನ್ ಆಫ್ ಚೀನಾ (ಕೋಮಾಕ್) ಸೇರಿದಂತೆ ಮಿಲಿಟರಿ ಸಂಪರ್ಕ ಹೊಂದಿರುವ ಚೀನಾದ ಒಂಬತ್ತು ಕಂಪನಿಗಳನ್ನು ರಕ್ಷಣಾ ಇಲಾಖೆ ಕಪ್ಪುಪಟ್ಟಿಗೆ ಸೇರಿಸಿದೆ.

Xiaomi
ಶಿಯೋಮಿ

ಹಾಂಗ್​ಕಾಂಗ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರದಲ್ಲಿ ಕಳೆದ ವಾರ ಬೀಜಿಂಗ್ ಮೇಲೆ ಒತ್ತಡ ಹೇರಿ, ಮಿಲಿಟರಿ ಸಂಪರ್ಕವಿದೆ ಎಂದು ಆರೋಪಿಸಿ ಚೀನಾದ ಸ್ಮಾರ್ಟ್​​ಫೋನ್​ ತಯಾರಕ ಶಿಯೋಮಿ ಕಾರ್ಪೊರೇಷನ್ ಮತ್ತು ಮೂರನೇ ಅತಿದೊಡ್ಡ ರಾಷ್ಟ್ರೀಯ ತೈಲ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಿದೆ.

ಅಮೆರಿಕ ಹೂಡಿಕೆದಾರರು ಈ ವರ್ಷದ ನವೆಂಬರ್ ವೇಳೆಗೆ ಮಿಲಿಟರಿ ಪಟ್ಟಿಯಲ್ಲಿ ಚೀನಾದ ಕಂಪನಿಗಳಲ್ಲಿನ ತಮ್ಮ ಪಾಲು ಬಿಟ್ಟುಕೊಡಬೇಕಾಗುತ್ತದೆ ಎಂದು ಟ್ರಂಪ್ ನವೆಂಬರ್‌ನಲ್ಲಿ ಸಹಿ ಮಾಡಿದ ಕಾರ್ಯನಿರ್ವಾಹಕ ಆದೇಶದಲ್ಲಿ ಸೂಚಿಸಲಾಗಿತ್ತು.

ಪ್ರತಿಕ್ರಿಯೆಯ ಕೋರಿಕೆಗೆ ಶಿಯೋಮಿ ತಕ್ಷಣವೇ ಪ್ರತಿಕ್ರಿಯಿಸಲಿಲ್ಲ.

ಗಾರ್ಟ್​ನರ್ ಮಾಹಿತಿಯ ಪ್ರಕಾರ, 2020ರ ಮೂರನೇ ತ್ರೈಮಾಸಿಕದಲ್ಲಿ ಮಾರಾಟದಿಂದ ವಿಶ್ವದ ನಂ. 3ನೇ ಸ್ಥಾನದಲ್ಲಿರುವ ಸ್ಮಾರ್ಟ್​ಫೋನ್​ ತಯಾರಕ ಶಿಯೋಮಿ ಕಾರ್ಪ್ ಆ್ಯಪಲ್ ಇಂಕ್ ಅನ್ನು ಹಿಂದಿಕ್ಕಿದೆ. ಅಮೆರಿಕದಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ ನಂತರ ಹುವಾಯ್​ ಮಾರಾಟವು ನಷ್ಟ ಅನುಭವಿಸಿತು. ಅದರ ಸ್ಮಾರ್ಟ್‌ಫೋನ್‌ಗಳನ್ನು ಗೂಗಲ್‌ನಿಂದ ಅಗತ್ಯ ಸೇವೆಗಳಿಂದ ಕಡಿತಗೊಳಿಸಿದ್ದರಿಂದ ಶಿಯೋಮಿಯ ಮಾರುಕಟ್ಟೆ ಪಾಲು ಹೆಚ್ಚಾಗಿದೆ.

ಇದನ್ನೂ ಓದಿ: HCLನಿಂದ 20 ಸಾವಿರ ಉದ್ಯೋಗಿಗಳ ನೇಮಕ: ಈಗಲೇ ಸಿದ್ಧರಾಗಿ..

ಪ್ರತ್ಯೇಕವಾಗಿ ವಾಣಿಜ್ಯ ಇಲಾಖೆಯು ಚೀನಾ ನ್ಯಾಷನಲ್ ಆಫ್‌ಶೋರ್ ಆಯಿಲ್ ಕಾರ್ಪೊರೇಷನ್​ (ಸಿಎನ್‌ಒಒಸಿ) ಅನ್ನು ಕಪ್ಪುಪಟ್ಟಿಯಲ್ಲಿ ಸೇರಿಸಿದೆ. ಸರ್ಕಾರದಿಂದ ಅನುಮತಿ ಪಡೆಯದ ಹೊರತು ಪಟ್ಟಿಯಲ್ಲಿ ಹೆಸರಿಸಲಾದ ಕಂಪನಿಗಳೊಂದಿಗೆ ತಂತ್ರಜ್ಞಾನ ರಫ್ತು ಅಥವಾ ವರ್ಗಾವಣೆ ಮಾಡುವುದನ್ನು ನಿಷೇಧಿಸಲಾಗುತ್ತದೆ.

ಡ್ರೋನ್ ತಯಾರಕ ಡಿಜೆಐ ಮತ್ತು ಅರೆವಾಹಕ ಸಂಸ್ಥೆ ಎಸ್‌ಎಂಐಸಿ ಸೇರಿದಂತೆ ಡಿಸೆಂಬರ್‌ನಲ್ಲಿ ಸುಮಾರು 60 ಚೀನಿ ಕಂಪನಿಗಳನ್ನು ಈ ಪಟ್ಟಿಗೆ ಸೇರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ದಕ್ಷಿಣ ಚೀನಾ ಸಮುದ್ರದ ವಿವಾದದಲ್ಲಿ ಬೀಜಿಂಗ್ ತೊಡಗಿಸಿಕೊಂಡಿದ್ದು ವಿಯೆಟ್ನಾಂ, ಫಿಲಿಪೈನ್ಸ್, ಬ್ರೂನಿ, ತೈವಾನ್ ಮತ್ತು ಮಲೇಷ್ಯಾ ಸೇರಿದಂತೆ ಇತರ ದೇಶಗಳೊಂದಿಗೆ ಪ್ರಾದೇಶಿಕ ಹಕ್ಕುಗಳನ್ನು ಅತಿಕ್ರಮಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.