ನವದೆಹಲಿ: ಹೆಚ್ಚಿನ ಸಂಖ್ಯೆಯಲ್ಲಿ ನೌಕರರನ್ನು ವಜಾಗೊಳಿಸಿರುವ ಇತರ ವಿಮಾನಯಾನ ಸಂಸ್ಥೆಗಳಂತೆ ಏರ್ ಇಂಡಿಯಾ, ತನ್ನ ಯಾವುದೇ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸುವುದಿಲ್ಲ ಎಂದು ರಾಷ್ಟ್ರೀಯ ವಾಹಕ ಸ್ಪಷ್ಟನೆ ನೀಡಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದಾಗಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೊ, ತನ್ನ ಒಟ್ಟಾರೆ ಸಿಬ್ಬಂದಿ ಪೈಕಿ ಶೇ 10ರಷ್ಟು ವಜಾಗೊಳಿಸುವುದಾಗಿ ಸೋಮವಾರ ಪ್ರಕಟಿಸಿತು.
ಇಂದು ಸಂಜೆ ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ನಡೆದ ಸಭೆಯಲ್ಲಿ ಸಿಬ್ಬಂದಿ ವೆಚ್ಚದ ತಗ್ಗಿಸುವ ಸಂಬಂಧ, ಏರ್ ಇಂಡಿಯಾ ಮಂಡಳಿಯ ಇತ್ತೀಚಿನ ನಿರ್ಧಾರ ಪರಿಶೀಲಿಸಲಾಗಿದೆ. ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನು ವಜಾಗೊಳಿಸಿರುವ ಇತರ ಸಂಸ್ಥೆಗಳಿಗೆ ಪ್ರತಿಯಾಗಿ, ಏರ್ ಇಂಡಿಯಾ ಯಾವುದೇ ಉದ್ಯೋಗಿಯನ್ನು ವಜಾಗೊಳಿಸುವುದಿಲ್ಲ ಎಂದು ಸಭೆಯಲ್ಲಿ ಮತ್ತೆ ಹೇಳಲಾಗಿದೆ ಎಂದು ಸಂಸ್ಥೆಯು ಟ್ವಿಟರ್‌ನಲ್ಲಿ ತಿಳಿಸಿದೆ.
-
There has been no reduction in the Basic pay, DA and HRA of any category of employees. The rationalization of allowances had to be implemented on account of the difficult financial condition of the airline that were exacerbated by COVID-19.(2/3)
— Air India (@airindiain) July 23, 2020 " class="align-text-top noRightClick twitterSection" data="
">There has been no reduction in the Basic pay, DA and HRA of any category of employees. The rationalization of allowances had to be implemented on account of the difficult financial condition of the airline that were exacerbated by COVID-19.(2/3)
— Air India (@airindiain) July 23, 2020There has been no reduction in the Basic pay, DA and HRA of any category of employees. The rationalization of allowances had to be implemented on account of the difficult financial condition of the airline that were exacerbated by COVID-19.(2/3)
— Air India (@airindiain) July 23, 2020
25 ಸಾವಿರ ರೂ.ಗಳಿಗಿಂತ ಹೆಚ್ಚಿನ ಮಾಸಿಕ ವೇತನ ಹೊಂದಿರುವ ತನ್ನ ನೌಕರರ ಭತ್ಯೆಯನ್ನು ಶೇ 50ರಷ್ಟು ಕಡಿತಗೊಳಿಸುವುದಾಗಿ ಏರ್ ಇಂಡಿಯಾ ಬುಧವಾರ ಪ್ರಕಟಿಸಿದೆ.
ಯಾವುದೇ ವರ್ಗದ ನೌಕರರ ಮೂಲ ವೇತನ, ಡಿಎ (ಪ್ರಿಯ ಭತ್ಯೆ) ಮತ್ತು ಎಚ್‌ಆರ್‌ಎಯಲ್ಲಿ (ಮನೆ ಬಾಡಿಗೆ ಭತ್ಯೆ) ಯಾವುದೇ ಕಡಿತವಿಲ್ಲ. ಕೋವಿಡ್-19ನಿಂದ ಉಲ್ಬಣಗೊಂಡ ವಿಮಾನಯಾನ ಸಂಸ್ಥೆಯ ಕಠಿಣ ಆರ್ಥಿಕ ಸ್ಥಿತಿಯ ಕಾರಣದಿಂದಾಗಿ ಭತ್ಯೆಗಳ ತರ್ಕಬದ್ಧಗೊಳಿಸುವಿಕೆ ಜಾರಿಗೊಳಿಸಬೇಕಾಗಿತ್ತು ಎಂದು ಮತ್ತೊಂದು ಟ್ವಿಟರ್‌ನಲ್ಲಿ ಹೇಳಿದೆ.