ಲಂಡನ್: ಅಕ್ರಮ ಹಣ ಲೇವಾದೇವಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಭ್ರಷ್ಟ ವಿತ್ತಾಪರಾಧಿ ನೀರವ್ ಮೋದಿ ಅವರ ಜೈಲು ಬಂಧನ ಅವಧಿಯನ್ನು ಮೇ 24ರವರೆಗೆ ವಿಸ್ತರಿಸಲಾಗಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ವಂಚಿಸಿದ ಪ್ರಕರಣ ಸಂಬಂಧ ನಿಮೋ ಲಂಡನ್ನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಕಳೆದ ತಿಂಗಳು ದಕ್ಷಿಣ ಲಂಡನ್ನಲ್ಲಿ ಅವರು ಬಂಧನಕ್ಕೆ ಒಳಗಾಗಿದ್ದು, ವೆಸ್ಟ್ ಮಿನಿಸ್ಟರ್ ಕೋರ್ಟ್ನ ಮುಖ್ಯ ಮ್ಯಾಜಿಸ್ಟ್ರೇಟ್ ಎಮ್ಮಾ ಆರ್ಬುಥ್ನಾಟ್ ವಿಚಾರಣೆ ನಡೆಸಿ ವಂಡ್ಸ್‌ವರ್ಥ್ ಜೈಲಿನಲ್ಲಿ ಇರಿಸುವಂತೆ ಆದೇಶ ನೀಡಿದ್ದರು.
ನೀರವ್ ಮೋದಿದ ಜೈಲು ಬಂಧನದ ಅವಧಿಯನ್ನು ಮೇ 24ರ ವರೆಗೂ ವಿಸ್ತರಿಸಿದ್ದು, ಮೇ 30ರಂದು ಅರ್ಜಿಯ ಪೂರ್ಣ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.