ನ್ಯೂಯಾರ್ಕ್: ಕೊರೊನಾ ವೈರಸ್ ಪ್ರಯಾಣಿಕರ ಬೇಡಿಕೆಯನ್ನು ಕಸಿದುಕೊಂಡಿದ್ದರಿಂದ ಎರಡು ವಾರಗಳ ಅವಧಿಯಲ್ಲಿ ಉಬರ್, ಮತ್ತೆ 3,000 ಉದ್ಯೋಗಗಳನ್ನು ಕೆಲಸದಿಂದ ವಜಾಗೊಳಿಸಿದೆ.
ಈ ವರ್ಷ ಆರಂಭವಾದಾಗಿನಿಂದ ಸ್ಯಾನ್ಫ್ರಾನ್ಸಿಸ್ಕೊ ಕಂಪನಿಯು ತನ್ನ ಉದ್ಯೋಗಿಗಳ ಕಾಲು ಭಾಗವನ್ನು ಕಡಿತಗೊಳಿಸಿದೆ. ಈ ತಿಂಗಳ ಆರಂಭದಲ್ಲಿ 3,700 ಜನರನ್ನು ತೆಗೆದುಹಾಕಿತ್ತು. ಈ ಎರಡು ವಾರಗಳಲ್ಲಿ 3,700 ನೌಕರರನ್ನು ವಜಾಗೊಳಿಸಿದಂತಾಗಿದೆ.
ಉಬರ್ ತನ್ನ ಪ್ರಮುಖ ವ್ಯವಹಾರಗಳ ಮೇಲೆ ಮತ್ತೆ ಗಮನ ಹರಿಸುತ್ತಿದೆ. ಜನರನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಿಡುವುದು. ಆಹಾರ ಮತ್ತು ದಿನಸಿ ವಸ್ತುಗಳನ್ನು ತಲುಪಿಸುತ್ತದೆ ಎಂದು ಸಿಇಒ ದಾರಾ ಖೋಸ್ರೋಶಾಹಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕ ಸ್ಟಾರ್ಟ್ಅಪ್ ದೈತ್ಯ ಸಂಸ್ಥೆಯು ಜಾಗತಿಕವಾಗಿ 45 ಕಚೇರಿಗಳನ್ನು ಮುಚ್ಚುತ್ತಿದೆ. ಬಹುತೇಕ ಎಲ್ಲ ವಿಭಾಗಗಳಲ್ಲಿನ ಕೆಲ ನೌಕರರನ್ನು ವಜಾಗೊಳಿಸಲಾಗಿದೆ. ಕಂಪನಿಯು ತನ್ನ ಇನ್ಕ್ಯುಬೇಟರ್ ಮತ್ತು ಎಐ ಲ್ಯಾಬ್ಸ್ ಮುಚ್ಚುತ್ತಿದೆ. ನಮ್ಮ ಬ್ಯಾಲೆನ್ಸ್ ಶೀಟ್ ಪ್ರಬಲವಾಗಿದೆ. ಉಬರ್ ಈಟ್ಸ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉಬರ್‌ನ ಪ್ರಮುಖ ಲಾಭದಾಯಕದ ಪ್ರಯಾಣಿಕ ವ್ಯವಹಾರವು ಶೇ 80ರಷ್ಟು ಕುಸಿದಿದೆ ಎಂದು ಹೇಳಿದರು.