ETV Bharat / business

ಬೈಕ್​ಗಳ ಖರೀದಿಗೆ ಇದೇ ಸಕಾಲ: ಇನ್ಯಾಕೆ ತಡ- 11,000 ರೂ.ವರೆಗಿನ ಡಿಸ್ಕೌಂಟ್​ಗೆ ಯಾವೆಲ್ಲ ಬೈಕ್​ ಸಿಗಲಿವೆ?

ದೇಶಿ ವಾಹನೋದ್ಯಮದಲ್ಲಿನ ಮಾರಾಟ ಕುಸಿತವು ದ್ವಿಚಕ್ರ ವಾಹನಗಳಿಗೂ ತಟ್ಟಿದೆ. ಸಾಲು-ಸಾಲು ಹಬ್ಬಗಳ ಸೀಸನ್​ ಮುಂದಿಟ್ಟುಕೊಂಡ ಬಹುತೇಕ ಬೈಕ್​ ಕಂಪನಿಗಳು ವಿಶೇಷ ರಿಯಾಯಿತಿ ನೀಡುತ್ತಿವೆ. ಹೋಂಡಾ ಆಕ್ಟಿವಾ 5ಜಿ ಸ್ಕೂಟರ್​ ಮೇಲೆ ₹ 11,000 ವರೆಗೆ ರಿಯಾಯಿತಿ ನೀಡುತ್ತಿದೆ. ಕನಿಷ್ಠ ಡೌನ್ ಪೇಮೆಂಟ್​ ಮತ್ತು ಪೇಟಿಎಂ ಕ್ಯಾಶ್​ಬ್ಯಾಕ್​ ಆಫರ್​ ಸಹ ಪ್ರಕಟಿಸಿದೆ. ಕವಾಸಕಿ ಇಂಡಿಯಾ, ಟ್ರಯಂಫ್ ಮೋಟರ್ ಸೈಕಲ್ಸ್ ಸೇರಿದಂತೆ ಇತರೆ ಕೆಲವು ದ್ವಿಚಕ್ರ ವಾಹನ ಕಂಪನಿಗಳು ಆಫರ್​ ಒದಗಿಸುತ್ತಿವೆ.

ಸಾಂದರ್ಭಿಕ ಚಿತ್ರ
author img

By

Published : Oct 19, 2019, 7:41 PM IST

ನವದೆಹಲಿ: ದೇಶಿ ವಾಹನೋದ್ಯಮದಲ್ಲಿನ ಮಾರಾಟ ಕುಸಿತವು ದ್ವಿಚಕ್ರ ವಾಹನಗಳಿಗೂ ತಟ್ಟಿದೆ. ಸಾಲು - ಸಾಲು ಹಬ್ಬಗಳ ಸೀಸನ್​ ಮುಂದಿಟ್ಟುಕೊಂಡ ಬಹುತೇಕ ಬೈಕ್​ ಕಂಪನಿಗಳು ವಿಶೇಷ ರಿಯಾಯಿತಿ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿವೆ.

ಟಿವಿಎಸ್ ತನ್ನ ರೇಡಿಯನ್, ವಿಕ್ಟರ್, ಸ್ಪೋರ್ಟ್ ಮತ್ತು ಸ್ಟಾರ್ ಸಿಟಿ ಪ್ಲಸ್ ಮೋಟರ್​ ಸೈಕಲ್​ಗಳು ಕನಿಷ್ಠ ಮೊತ್ತದ ಡೌನ್ ಪೇಮೆಂಟ್​ಗೆ ಸಿಗಲಿವೆ. ಇದರಲ್ಲಿ ಸರ್ಕಾರಿ ನೌಕರರಿಗೆ ಹೆಚ್ಚುವರಿ ಪ್ರಯೋಜನ ಸಹ ಲಭ್ಯವಾಗಲಿದೆ. ಹೀರೋ ಮೋಟಾರ್​ಕಾರ್ಪ್ ತನ್ನ 100-125 ಸಿಸಿ ಬೈಕ್​ಗಳಾದ ಸ್ಪ್ಲೆಂಡರ್ ಮತ್ತು ಪ್ಯಾಷನ್ ಪ್ರೊನಲ್ಲಿ ₹ 1,500ಯಷ್ಟು ನಗದು ಲಾಭ ನೀಡುತ್ತಿದೆ.

ಹೋಂಡಾ ಮೋಟರ್ ಕಂಪನಿಯು ₹ 8,900ಯಷ್ಟು ಉಳಿತಾಯ ಹಾಗೂ ₹ 1,100 ಕನಿಷ್ಠ ಡೌನ್ ಪೇಮೆಂಟ್​ನಂತಹ ಆಫರ್​ಗಳನ್ನು ನೀಡುತ್ತಿದೆ. ಅಪಾಚೆ ಆರ್‌ಟಿಆರ್ 160 4-ವಿ ಬೈಕ್​ ಮೇಲೆ ₹ 8,800 ಮೌಲ್ಯದ ಐದು ವರ್ಷಗಳ ಉಚಿತ ವಿಮಾ ಸೌಲಭ್ಯ ಒದಗಿಸುತ್ತಿದೆ. ಹೀರೋ, ತನ್ನ ಎಕ್ಸ್​​ಟ್ರಿಮ್- 200 ಆರ್ ಮತ್ತು ಎಕ್ಸ್​​ಟ್ರೀಮ್- 200ಎಸ್ ನಂತಹ 200ಸಿಸಿ ಬೈಕ್​ಗಳ ಮೇಲೆ ₹ 2,000 ನಗದು ರಿಯಾಯಿತಿ, ₹ 5000 ಎಕ್ಸ್​ಚೆಂಜ್​ ಮತ್ತು ₹ 4,000 ಕನಿಷ್ಠ ಡೌನ್ ಪೇಮೆಂಟ್​ ಪರಿಚಯಿಸಿದೆ.

ಇತ್ತೀಚೆಗೆ ಬಿಡುಗಡೆಯಾದ ಸುಜುಕಿ ಗಿಕ್ಸ್‌ಸರ್ ಎಸ್‌ಎಫ್- 250 ಬೈಕ್​ ಝೀರೋ ಡೌನ್ ಪೇಮೆಂಟ್, ಝೀರೋ ಪ್ರೊಸೆಸಿಂಗ್ ಶುಲ್ಕ, ಪ್ರತಿ ಲಕ್ಷ ರೂ. ಸಾಲಕ್ಕೆ ಮಾಸಿಕ ₹ 3,042 ಇಎಂಐ ವಿಧಿಸಲಿದೆ. ಬಜಾಜ್ ಆಟೋ ತನ್ನ ಎಲ್ಲ ಪ್ರಮುಖ ಉತ್ಪನ್ನಗಳ ಮೇಲೆ ₹ 7,200ವರೆಗೆ ಆಫರ್​ಗಳನ್ನು ನೀಡುತ್ತಿದೆ.

ಹೋಂಡಾ ಆಕ್ಟಿವಾ 5ಜಿ ಸ್ಕೂಟರ್​ ಮೇಲೆ ₹ 11,000 ವರೆಗೆ ರಿಯಾಯಿತಿ ನೀಡುತ್ತಿದೆ. ಕನಿಷ್ಠ ಡೌನ್ ಪೇಮೆಂಟ್​ ಮತ್ತು ಪೇಟಿಎಂ ಕ್ಯಾಶ್​ಬ್ಯಾಕ್​ ಆಫರ್​ ಸಹ ಪ್ರಕಟಿಸಿದೆ. ಕವಾಸಾಕಿ ಇಂಡಿಯಾ, ಟ್ರಯಂಫ್ ಮೋಟರ್ ಸೈಕಲ್ಸ್ ಸೇರಿದಂತೆ ಇತರ ಕೆಲವು ದ್ವಿಚಕ್ರ ವಾಹನ ಕಂಪನಿಗಳು ರಿಯಾಯಿತಿ ನೀಡುತ್ತಿವೆ. ಈ ರಿಯಾಯಿತಿಯು ರಾಜ್ಯದಿಂದ ರಾಜ್ಯಕ್ಕೆ ಹಾಗೂ ಜಿಲ್ಲೆಯಿಂದ ಜಿಲ್ಲೆಗಳಿಗೆ ವ್ಯತ್ಯಾಸ ಕಂಡುಬರಲಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.