ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆ್ಯಪಲ್ ಕಂಪನಿಯು ಐಫೋನ್‌ನಲ್ಲಿನ ಹೋಮ್ ಬಟನ್ ತೆಗೆದಿದ್ದರ ಕುರಿತು ಟ್ವಿಟರ್ ಮೂಲಕ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.
ವಿಶ್ವದ ಅತಿದೊಡ್ಡ ಆರ್ಥಿಕತೆ ರಾಷ್ಟ್ರದ ಅಧ್ಯಕ್ಷ ಟ್ರಂಪ್, ತಮ್ಮ ಟ್ವಿಟರ್ ಖಾತೆಯಲ್ಲಿ ಆ್ಯಪಲ್ ಸಿಇಒ ಟಿಮ್ ಕುಕ್ ಅವರ ಹೆಸರನ್ನು ಉಲ್ಲೇಖಿಸಿ 'ಆ್ಯಪಲ್ ಕಂಪನಿಯ ಸ್ಮಾರ್ಟ್‌ಫೋನ್‌ಗಳಲ್ಲಿನ ಹೋಮ್ ಬಟನ್ ನಷ್ಟವಾಗಿದೆ' ಎಂದು ವಿಷಾದಿಸಿದರು.
-
To Tim: The Button on the IPhone was FAR better than the Swipe!
— Donald J. Trump (@realDonaldTrump) October 25, 2019 " class="align-text-top noRightClick twitterSection" data="
">To Tim: The Button on the IPhone was FAR better than the Swipe!
— Donald J. Trump (@realDonaldTrump) October 25, 2019To Tim: The Button on the IPhone was FAR better than the Swipe!
— Donald J. Trump (@realDonaldTrump) October 25, 2019
'ಟಿಮ್‌ಗೆ: ಐಫೋನ್‌ನಲ್ಲಿನ ಬಟನ್ ಸ್ವೈಪ್‌ಗಿಂತ ಉತ್ತಮವಾಗಿದೆ' ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಮುಂಬರಲಿರುವ ಆ್ಯಪಲ್ ಐಫೋನ್‌ಗಳಲ್ಲಿ ಹೋಮ್ ಬಟನ್‌ನ ಮರಳಿ ಪಡೆಯಲು ಅಧ್ಯಕ್ಷರು ಇಷ್ಟಪಡುತ್ತಾರೆ ಎಂಬುದರ ಸೂಚಕವಾಗಿದೆ.
ಈ ಟ್ವೀಟ್ಗೆ ನೆಟ್ಟಿಗರು ಭಾರೀ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಸುಮಾರು 25 ಸಾವಿರ ಮಂದಿ ರಿಟ್ವೀಟ್ ಮಾಡಿದ್ದಾರೆ. 25 ಸಾವಿರಾರು ಮಂದಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿ 12 ಲಕ್ಷ ಲೈಕ್ ಮಾಡಿದ್ದಾರೆ. ಪ್ರಸ್ತುತ ಟ್ರಂಪ್ ಐಫೋನ್ನ ಯಾವ ಮಾದರಿ ಬಳಸುತ್ತಿದ್ದಾರೆಂಬುದು ತಿಳಿದಿಲ್ಲ. ಆದರೆ, ಅವರು ಕೆಲವು ಹಳೆಯ ಮಾದರಿ (ಐಫೋನ್ 8 ಅಥವಾ ಅದಕ್ಕಿಂತ ಹಳೆಯದು) ಬಳಸುತ್ತಿದ್ದಾರೆ ಎಂದು ಊಹಿಸಬಹುದು.