ತಿರುಪತಿ: ತೀವ್ರ ಹಣಕಾಸಿನ ಬಿಕ್ಕಟ್ಟಿಗೆ ಸಿಲುಕಿರುವ ಯೆಸ್ ಬ್ಯಾಂಕ್ನಿಂದ ದೇಶದ ಶ್ರೀಮಂತ ದೇವಸ್ಥಾನ ತಿರುಪತಿ ತಿರುಮಲನ ಪುರೋಹಿತರು ವರ್ಷದ ಹಿಂದಷ್ಟೇ ₹ 1,300 ಕೋಟಿ ಹಣವನ್ನು ಯೆಸ್ ಬ್ಯಾಂಕ್ನಿಂದ ಹಿಂತೆಗೆದುಕೊಂಡಿದ್ದರು.
ತಿರುಮಲ ದೇವಾಲಯದ ವ್ಯವಹಾರಗಳನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ), 2019ರ ಅಕ್ಟೋಬರ್ ತಿಂಗಳಲ್ಲಿ ಯೆಸ್ ಬ್ಯಾಂಕ್ನಲ್ಲಿ ಇರಿಸಿದ್ದ ಹಣವನ್ನು ಹಿಂದಕ್ಕೆ ಪಡೆದಿದೆ. ಬ್ಯಾಂಕ್ನಲ್ಲಿ ಈಗ ಉಂಟಾಗಿರುವ ಬಿಕ್ಕಟ್ಟು ದೇವಸ್ಥಾನಕ್ಕೆ ಬಾಧಿಸಿಲ್ಲ ಎಂದು ಪುರೋಹಿತರೊಬ್ಬರು ಹೇಳಿದರು.
ಬ್ಯಾಂಕ್ಗಳಲ್ಲಿನ ಠೇವಣಿ ಮತ್ತು ಮುಕ್ತಾಯ ಅವಧಿಯ ಮೇಲ್ವಿಚಾರಣೆ ಮಾಡಿದ್ದೇವು. ನಾವು ಇದ್ದಕ್ಕಿದ್ದಂತೆ ಮೊತ್ತವನ್ನು ಹಿಂತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು.
ಟಿಟಿಡಿ ಅಧಿಕಾರಿಗಳು ಬ್ಯಾಂಕ್ಗಳಲ್ಲಿ ಹಣ ಅಥವಾ ಚಿನ್ನವನ್ನು ಠೇವಣಿ ಇಡುವ ಬಗ್ಗೆ ಮಂಡಳಿಯ ನಿರ್ಧಾರಗಳ ಪ್ರಕಾರ ಕಾರ್ಯನಿರ್ವಹಿಸುತ್ತಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಮಂಡಳಿಯು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಮಾತ್ರ ಹಣವನ್ನು ಠೇವಣಿ ಇಡಲು ನಿರ್ಧರಿಸಿದೆ ಎಂದರು.
ಟಿಟಿಡಿ ನಗದು ರೂಪದಲ್ಲಿ ವಿವಿಧ ಬ್ಯಾಂಕ್ಗಳಲ್ಲಿ ಕಳೆದ ಏಪ್ರಿಲ್ನಲ್ಲಿ ₹ 12,000 ಕೋಟಿವರೆಗೂ ಠೇವಣಿ ಇರಿಸಿದೆ. 2020-21ರಲ್ಲಿ ಠೇವಣಿ ಇರಿಸಿದ ಮೊತ್ತದಿಂದಲೇ 706 ಕೋಟಿ ರೂ.ಯಷ್ಟು ಬಡ್ಡಿಯ ಆದಾಯ ಬರಲಿದೆ ಎಂದು ಅಂದಾಜು ಮಾಡಿದೆ.