ETV Bharat / business

ಚೀನಾ ಆ್ಯಪ್​ಗೆ ಇಂಡಿಯಾ ಗೇಟ್​ ಬಂದ್: ದೇಶದಿಂದ ಅಧಿಕೃತವಾಗಿ ಕಾಲ್ಕಿತ್ತ ಟಿಕ್​ಟಾಕ್​! - ಟಿಕ್​ಟಾಕ್​ ನಿಷೇಧ

ನಾವು ಭಾರತದಲ್ಲಿ ಯಾವಾಗ ಪುನರಾಗಮನ ಮಾಡುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಆದರೂ ನಮ್ಮ ಕೆಲಸದ ಮೇಲೆ ನಮಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಹಾಗೆ ಮಾಡಲು ನಾವು ಬಯಸುತ್ತೇವೆ ಎಂದು ಇಮೇಲ್​ನಲ್ಲಿ ಹೇಳಿದೆ.

Tiktok
Tiktok
author img

By

Published : Jan 27, 2021, 2:43 PM IST

ನವದೆಹಲಿ: ಯುವಕರ ಹಾಗೂ ಆಂಟಿಯರ ನೆಚ್ಚಿನ ಕಿರಿ ವಿಡಿಯೋ ಆ್ಯಪ್​​ ಟಿಕ್​ಟಾಕ್​ ನಿಷೇಧದ ಬಳಿಕ ಚೀನಾದ ಬೈಟ್​​ ಡ್ಯಾನ್ಸ್​ ಭಾರತದಲ್ಲಿನ ತನ್ನ ವ್ಯವಹಾರದ ಬಾಗಿಲು ಮುಚ್ಚಿದೆ.

ಟಿಕ್​ಟಾಕ್ ಮತ್ತು ಹೆಲೋ ಆ್ಯಪ್‌ ಹೊಂದಿರುವ ಚೀನಾದ ಸಾಮಾಜಿಕ ಮಾಧ್ಯಮ ಸಂಸ್ಥೆ ಬೈಟ್​ಡ್ಯಾನ್ಸ್, ದೇಶದಲ್ಲಿ ತನ್ನ ಸೇವೆಗಳ ಮೇಲೆ ನಿರಂತರ ನಿರ್ಬಂಧಗಳು ಬಂದಿದ್ದರಿಂದ ಭಾರತದಲ್ಲಿನ ವ್ಯವಹಾರವನ್ನು ಮುಚ್ಚುವುದಾಗಿ ಘೋಷಿಸಿದೆ.

ಟಿಕ್​ಟಾಕ್​ನ ಮಧ್ಯಂತರ ಅವಧಿಯ ಗ್ಲೋಬಲ್​ ಮುಖ್ಯಸ್ಥ ವನೆಸ್ಸಾ ಪಪ್ಪಾಸ್ ಮತ್ತು ಉಪಾಧ್ಯಕ್ಷ ಬ್ಲೇಕ್ ಚಾಂಡ್ಲೀ ಅವರು ಜಂಟಿ ಇಮೇಲ್​ನಲ್ಲಿ ಉದ್ಯೋಗಿಗಳಿಗೆ ಕಂಪನಿಯ ನಿರ್ಧಾರ ತಿಳಿಸಿದ್ದಾರೆ. ನಮ್ಮ ನಿರ್ಧಾರದಿಂದ ಉದ್ಯೋಗಿಗಳ ಸಂಖ್ಯೆ ತಗ್ಗಲಿದೆ ಮತ್ತು ಭಾರತದಲ್ಲಿನ ಎಲ್ಲ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಕಂಪನಿಯು ಭಾರತಕ್ಕೆ ಪುನರಾಗಮನದ ಬಗ್ಗೆ ಕಾರ್ಯನಿರ್ವಾಹಕರು ಅನಿಶ್ಚಿತತೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕಾಲ ಕೂಡಿ ಬಂದರೆ ಮತ್ತೆ ಹಿಂದಿರುಗುವ ಭರವಸೆ ಇರಿಸಿಕೊಂಡಿದ್ದಾರೆ.

ನಾವು ಭಾರತದಲ್ಲಿ ಯಾವಾಗ ಪುನರಾಗಮನ ಮಾಡುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಆದರೂ ನಮ್ಮ ಸ್ಥಿರತೆ ಮೇಲೆ ನಮಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಹಾಗೆ ಮಾಡಲು ನಾವು ಬಯಸುತ್ತೇವೆ ಎಂದು ಇಮೇಲ್​ನಲ್ಲಿ ಹೇಳಿದೆ.

ಬೈಟ್​ಡ್ಯಾನ್ಸ್‌ ಮೂಲವೊಂದರ ಪ್ರಕಾರ, ಕಂಪನಿಯು ಬುಧವಾರ ಸಮಾಲೋಚನೆ ನಡೆಸಿ, ಭಾರತದ ವ್ಯವಹಾರವನ್ನು ಮುಚ್ಚುವ ಬಗ್ಗೆ ಮಾತುಕತೆ ನಡೆಸಿದೆ.

ಇದನ್ನೂ ಓದಿ: ಕೇಂದ್ರ ಬಜೆಟ್​: 'ಸಾಲ ನೀಡುವಂತೆ ಬ್ಯಾಂಕ್​ಗಳನ್ನು ಕೇಳಬೇಡಿ'- ನಿರ್ಮಲಾಗೆ ಬ್ಯಾಂಕರ್​ ಮನವಿ

ಕಂಪನಿಯು 2020ರ ಜೂನ್ 29ರಂದು ಹೊರಡಿಸಿದ ಭಾರತ ಸರ್ಕಾರದ ಆದೇಶದ ಅನಸಾರ ದೃಢವಾಗಿ ಕೆಲಸ ಮಾಡುತ್ತಿದೆ. ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳನ್ನು ಅನುಸರಿಸಲು ನಮ್ಮ ಅಪ್ಲಿಕೇಷನ್‌ಗಳಲ್ಲಿ ಶ್ರಮಿಸುತ್ತಿದ್ದೇವೆ ಎಂದು ಟಿಕ್​ಟಾಕ್​ ವಕ್ತಾರರನ್ನು ಹೇಳಿದರು.

ಮುಂದಿನ ಏಳು ತಿಂಗಳಲ್ಲಿ ನಮ್ಮ ಪ್ರಯತ್ನಗಳ ಹೊರತಾಗಿಯೂ ನಮ್ಮ ಅಪ್ಲಿಕೇಷನ್‌ಗಳನ್ನು ಹೇಗೆ ಮತ್ತು ಯಾವಾಗ ಮರುಸ್ಥಾಪಿಸಬಹುದು ಎಂಬುದರ ಕುರಿತು ನಮಗೆ ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂಬುದು ನಿರಾಶಾದಾಯಕವಾಗಿದೆ. ಭಾರತದಲ್ಲಿ ನಮ್ಮ 2,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅರ್ಧ ವರ್ಷಕ್ಕೂ ಹೆಚ್ಚು ಕಾಲ ಉಳಿಸಿಕೊಂಡ ನಂತರ ಅವರನ್ನು ವಜಾಗೊಳಿಸುವ ಹೊರತು ನಮಗೆ ಬೇರೆ ದಾರಿಯಿಲ್ಲ ಎಂಬುದು ತೀವ್ರ ವಿಷಾದದ ಸಂಗತಿ ಎಂದರು.

ಟಿಕ್​ಟಾಕ್ ಮತ್ತು ಹೆಲೋ ಜೊತೆಗೆ 59 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಜೂನ್‌ನಲ್ಲಿ ನಿರ್ಬಂಧಿಸಿತ್ತು. ಅವುಗಳನ್ನು ನಿರ್ಬಂಧಿಸುವ ಆದೇಶವನ್ನು ಮುಂದುವರಿಸಲಾಗುವುದು ಎಂದು ಕಂಪನಿಗಳಿಗೆ ಭಾರತ ಸರ್ಕಾರ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.