ಬೆಂಗಳೂರು: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಸೋಮವಾರ ಇಂಗ್ಲೆಂಡ್ನ ಪ್ರಮುಖ ಮೊಬೈಲ್ ನೆಟ್ವರ್ಕ್ ವಾಹಕಗಳಲ್ಲಿ ಒಂದಾದ ಟೆಲಿಕಮ್ಯೂನಿಕೇಷನ್ ಕಂಪನಿ ತ್ರೀ ಯುಕೆ ಜತೆ ಒಪ್ಪಂದ ಮಾಡಿಕೊಂಡಿದ್ದು, ಈಗ ನಡೆಯುತ್ತಿರುವ 5ಜಿ ನೆಟ್ವರ್ಕ್ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ ಎಂದು ತಿಳಿಸಿದೆ.
ತ್ರೀ ಯುಕೆ ಹೊಸ 5ಜಿ ರೆಡಿಯೋ ಪ್ರವೇಶ ಜಾಲ ನಿಯೋಜಿಸುವ ಪ್ರಕ್ರಿಯೆಯಲ್ಲಿದೆ. ಇದು ಈಗಾಗಲೇ ಯುಕೆನ 175 ಪಟ್ಟಣ ಮತ್ತು ನಗರಗಳಲ್ಲಿ 1,000ಕ್ಕೂ ಹೆಚ್ಚು ತಾಣಗಳಲ್ಲಿ ಸೇವೆ ನಿರತವಾಗಿದೆ. ಮುಂದಿನ ಪೀಳಿಗೆಯ 5ಜಿ ಸಂಪರ್ಕಕ್ಕೆ ತನ್ನ ಗ್ರಾಹಕರಿಗೆ ಪ್ರವೇಶ ಒದಗಿಸುತ್ತದೆ.
ಇದನ್ನೂ ಓದಿ: ಡಿಸೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ ಗಳಿಕೆ ಏರಿಕೆ: ಶೇ 2ರಷ್ಟು ಜಿಗಿದ HDFC ಷೇರು ಮೌಲ್ಯ
ಹೊಸ ಕೋರ್ ಮುಂದಿನ ಪೀಳಿಗೆಯ ಮೊಬೈಲ್ ನೆಟ್‌ವರ್ಕ್‌ನ ಕಾನ್ಫಿಗರೇಶನ್ ನಿರ್ವಹಿಸಲು ಟಿಸಿಎಸ್ ಅನ್ನು ತನ್ನ ಪಾಲುದಾರನನ್ನಾಗಿ ಆಯ್ಕೆ ಮಾಡಿದೆ. ಇದು 5ಜಿ ರೇಡಿಯೊ ಪ್ರವೇಶ ನೆಟ್‌ವರ್ಕ್‌ನೊಂದಿಗೆ ಸರಿಯಾಗಿ ಸಂಯೋಜನೆಗೊಳ್ಳುತ್ತದೆ ಎಂದು ಟಿಸಿಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕಾರ್ಯವು ಹೊಸ ಸೈಟ್ ನಿಯೋಜನೆಗಳು, ಸೈಟ್ ನವೀಕರಣಗಳು, ಕಾರ್ಯಕ್ಷಮತೆ ನಿರ್ವಹಣೆ ಮತ್ತು 3ಜಿ ಮತ್ತು 4ಜಿ ಟ್ಯೂನಿಂಗ್ ಬದಲಾವಣೆಗಳಿಗಾಗಿ ಕೋರ್ ನೆಟ್‌ವರ್ಕ್ ಕಾನ್ಫಿಗರ್ ಒಳಗೊಂಡಿರುತ್ತದೆ ಎಂದು ಹೇಳಿದೆ.