ನವದೆಹಲಿ: 2021-22ನೇ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪನಿಯು ತನ್ನ ನೌಕರರ ವೇತನ ಹೆಚ್ಚಿಸಲಿದೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಎಲ್ಲ ಉದ್ಯೋಗಿಗಳ ವೇತನ ಹೆಚ್ಚಿಸುತ್ತಿದ್ದು, ಈ ಏರಿಕೆಯು ಏಪ್ರಿಲ್ನಿಂದ ಜಾರಿಗೆ ಬರಲಿದೆ. ಮುಂದಿನ ಹಣಕಾಸು ವರ್ಷಕ್ಕೆ ವೇತನ ಹೆಚ್ಚಿಸುವ ಮೊದಲ ಕಂಪನಿ ಟಿಸಿಎಸ್ ಆಗಿದೆ. ಇದರಿಂದ ಕಂಪನಿಯ 4.7 ಲಕ್ಷ ಜನರಿಗೆ ಅನುಕೂಲವಾಗಲಿದೆ.
ಇದನ್ನೂ ಓದಿ: 'ಭಾರತೀಯ ಕಂಪನಿಯಲ್ಲಿ ಅನಿವಾಸಿ ಭಾರತೀಯರು ಹೂಡಿಕೆ ದೇಶೀಯ ಇನ್ಸೆಸ್ಟ್ ಅಲ್ಲ'
ಸಾಗರೋತ್ತರ ನೌಕರರು ಸರಾಸರಿ 6-7 ಪ್ರತಿಶತದಷ್ಟು ಹೆಚ್ಚಳ ವೇತನ ಪಡೆಯಲಿದ್ದಾರೆ. ಇದು ಆರು ತಿಂಗಳಲ್ಲಿ ಟಿಸಿಎಸ್‌ನ ಎರಡನೇ ವೇತನ ಹೆಚ್ಚಳವಾಗಿದೆ. ಇದರ ಪರಿಣಾಮವಾಗಿ, ಆರು ತಿಂಗಳ ಅವಧಿಯಲ್ಲಿ ನೌಕರರು ಸರಾಸರಿ 12-14ರಷ್ಟು ಹೆಚ್ಚಳ ಜೇಬಿಗೆ ಇಳಿಸಿಕೊಳ್ಳಲಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಂಪನಿಯು ತನ್ನ ಉದ್ಯೋಗಿಗಳಿಗೆ ವೇತನ ಹೆಚ್ಚಳ ಘೋಷಿಸಿತ್ತು. ಕಂಪನಿಯು ಏಪ್ರಿಲ್ 2021ರಿಂದ ಎಲ್ಲಾ ಪ್ರದೇಶಗಳಲ್ಲಿನ ಉದ್ಯೋಗಿಗಳಿಗೆ ವೇತನ ಹೆಚ್ಚಳ ನೀಡುವ ಪ್ರಕ್ರಿಯೆಯಲ್ಲಿದೆ. ಕಂಪನಿಯು ಪ್ರಚಾರಗಳನ್ನು ಸಹ ಮುಂದುವರಿಸಲಿದೆ ಎಂದು ಟಿಸಿಎಸ್ ವಕ್ತಾರರು ತಿಳಿಸಿದ್ದಾರೆ.