ETV Bharat / business

ಟಾಟಾ ತೆಕ್ಕೆಗೆ ಹೊಸ ಸಂಸತ್ ಭವನ ನಿರ್ಮಾಣ​ದ ಗುತ್ತಿಗೆ: ಹೇಗಿರಲಿದೆ ನ್ಯೂ ಪಾರ್ಲಿಮೆಂಟ್ ಹೌಸ್​​? - ಸಂಸತ್​ ಭವನ ನಿರ್ಮಾಣ

861.90 ಕೋಟಿ ರೂ. ವೆಚ್ಚದಲ್ಲಿ ಹೊಸ ಸಂಸತ್​ ಕಟ್ಟಡ ನಿರ್ಮಿಸುವ ಟೆಂಡರ್​ ಅನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಎಲ್&ಟಿ ಲಿಮಿಟೆಡ್ ಇದಕ್ಕೆ ಸನಿಹದಲ್ಲಿ 865 ಕೋಟಿ ರೂ. ಮೊತ್ತದಷ್ಟು ಬಿಡ್ ಸಲ್ಲಿಸಿತ್ತು. ಕೊನೆಗೂ ಟಾಟಾ ಸಂಸ್ಥೆ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಗೆದ್ದುಕೊಂಡಿದೆ.

new parliament
ಹೊಸ ಪಾರ್ಲಿಮೆಂಟ್​
author img

By

Published : Sep 16, 2020, 7:44 PM IST

ನವದೆಹಲಿ: ನೂತನ ಸಂಸತ್​ ಭವನ ಕಟ್ಟಡ ನಿರ್ಮಾಣಕ್ಕೆ ಗುತ್ತಿಗೆ ಪಡೆಯಲು ಸ್ಪರ್ಧೆಯಲ್ಲಿದ್ದ ಕಂಪನಿಗಳ ಪೈಕಿ ಟಾಟಾ ಪ್ರಾಜೆಕ್ಟ್ಸ್​ ಲಿಮಿಟೆಡ್​ ಟೆಂಡರ್​ ಪಡೆದುಕೊಂಡಿದೆ.

861.90 ಕೋಟಿ ರೂ. ವೆಚ್ಚದಲ್ಲಿ ಹೊಸ ಸಂಸತ್ತಿನ ಕಟ್ಟಡ ನಿರ್ಮಿಸುವ ಟೆಂಡರ್​ ಅನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಎಲ್&ಟಿ ಲಿಮಿಟೆಡ್ ಇದಕ್ಕೆ ಸನಿಹದಲ್ಲಿ 865 ಕೋಟಿ ರೂ. ಮೊತ್ತದಷ್ಟು ಬಿಡ್ ಸಲ್ಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ಹೊಸ ಸಂಸತ್​ ಕಟ್ಟಡ ನಿರ್ಮಿಸುವ ಒಪ್ಪಂದವನ್ನು ಗೆದ್ದುಕೊಂಡಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸಂಸತ್ತಿನ ಕಟ್ಟಡವನ್ನು ಹೊಸದಾಗಿ ಈಗಿರುವ ಸಂಸತ್ ಭವನದ 118ನೇ ಫ್ಲಾಟ್​ನಲ್ಲಿ ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದನ್ನು ಕೇಂದ್ರ ವಿಸ್ಟಾ ಮರು ಅಭಿವೃದ್ಧಿ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಿರುವ ಕಟ್ಟಡಕ್ಕೆ ಹತ್ತಿರದಲ್ಲಿ ನಿರ್ಮಿಸಲಾಗುವುದು. ಇದು 21 ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಕೇಂದ್ರ ಲೋಕೋಪಯೋಗಿ ಇಲಾಖೆ (ಸಿಪಿಡಬ್ಲ್ಯುಡಿ) ಪ್ರಕಾರ, ಹೊಸ ಕಟ್ಟಡವು ಪಾರ್ಲಿಮೆಂಟ್ ಹೌಸ್ ಎಸ್ಟೇಟ್​ನ 118ನೇ ಪ್ಲಾಟ್​​​ನಲ್ಲಿ ಬರಲಿದೆ. ಯೋಜನೆ ಕಾರ್ಯಗತಗೊಂಡು ಸಂಪೂರ್ಣವಾಗಿ ಮುಗಿಯುವ ತನಕ ಅಸ್ತಿತ್ವದಲ್ಲಿರುವ ಸಂಸತ್ತಿನ ಕಟ್ಟಡವು ಕಾರ್ಯನಿರ್ವಹಿಸುತ್ತಿದೆ.

ಹೇಗಿಲಿದೆ ನೂತನ ಕಟ್ಟಡ?

ಸಂಸತ್ತಿನ ಪ್ರಸ್ತಾವಿತ ಹೊಸ ಕಟ್ಟಡವು ನೆಲಮಾಳಿಗೆಯೊಂದಿಗೆ ಎರಡು ಅಂತಸ್ತಿನ ಕಟ್ಟಡವಾಗಿರಲಿದೆ. ಭಾರತವು ಸ್ವಾತಂತ್ರ್ಯ ಪಡೆದು 75ನೇ ವಾರ್ಷಿಕೋತ್ಸವವನ್ನು ಆಚರಿಸುವ 2022ರ ವೇಳೆಗೆ ಹೊಸ ಸಂಸತ್ ಕಟ್ಟಡ ಸಿದ್ಧಗೊಳಿಸುವ ಯೋಜನೆಯನ್ನ ಕೇಂದ್ರ ಸರ್ಕಾರ ಇರಿಸಿಕೊಂಡಿದೆ.

ನೂತನ ಸಂಸತ್​ ಭವನ ತ್ರಿಕೋನ ಆಕಾರದಲ್ಲಿ ಇರಲಿದೆ. ಪ್ರತಿ ಸಂಸದರಿಗೂ ಇಬ್ಬರು ಕುಳಿತುಕೊಳ್ಳಲು ಅವಕಾಶ ಇರುವಷ್ಟು ವಿಶಾವಾದ 'ಎರಡು ಆಸನದ' ಬೆಂಚ್​ ಇರಲಿದೆ. ಸಂಸದರು ತಮ್ಮ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರತ್ಯೇಕ ಡೆಸ್ಕ್‌ ಸಹ ಹೊಂದಿರಲಿದ್ದಾರೆ. ಲೋಕಸಭೆಯ 900 ಸಂಸದರು ಕೂಡಬಹುದಾದಷ್ಟು ದೊಡ್ಡದಾಗಿರಲಿದೆ. ಒಂದು ವೇಳೆ ಸಂಸತ್ತಿನ ಜಂಟಿ ಅಧಿವೇಶನ ನಡೆದರೆ ರಾಜ್ಯಸಭಾ ಸದಸ್ಯರು ಸೇರಿ 1,300ಕ್ಕೂ ಅಧಿಕ ಸಂಸದರು ಕುರಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.