ಮುಂಬೈ: 2020-21ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ ಸೇರಿದಂತೆ ಗ್ರೂಪ್ನ ಜಾಗತಿಕ ಸಗಟು ಮಾರಾಟ 3,30,125 ಯುನಿಟ್‌ಗಳಿಗೆ ತಲುಪಿದ್ದು, ಕಂಪನಿಯು ಶೇ 43ರಷ್ಟು ಏರಿಕೆ ಕಂಡಿದೆ. ಗುರುವಾರದ ಆರಂಭಿಕ ವಹಿವಾಟಿನಲ್ಲಿ ಟಾಟಾ ಮೋಟಾರ್ಸ್‌ನ ಷೇರು ಬೆಲೆ ಮತ್ತಷ್ಟು ಏರಿಕೆಯಾಗಿದೆ.
ಕಂಪನಿಯ ವಾಣಿಜ್ಯ ವಾಹನಗಳ ಜಾಗತಿಕ ಸಗಟು ಮತ್ತು ಡೇವೂ ಶ್ರೇಣಿಯು 2020-21ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ 55 ಪ್ರತಿಶತದಷ್ಟು ಏರಿಕೆಯಾಗಿ 1,09,428ಕ್ಕೆ ತಲುಪಿದೆ ಎಂದು ಟಾಟಾ ಮೋಟಾರ್ಸ್ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಮಾರ್ಚ್‌ನಲ್ಲಿ ಭಾರತದ ಸಗಟು ಹಣದುಬ್ಬರ ಶೇ 7.39ಕ್ಕೆ ಏರಿಕೆ
ಕಂಪನಿಯು 2019-20ರ ನಾಲ್ಕನೇ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ನಾಲ್ಕನೇ ತ್ರೈಮಾಸಿಕದಲ್ಲಿ ತನ್ನ ಜಾಗತಿಕ ಪ್ರಯಾಣಿಕರ ವಾಹನ ಮಾರಾಟದಲ್ಲಿ ಶೇ 39ರಷ್ಟು ವೃದ್ಧಿಸಿಕೊಂಡು 2,20,697ಕ್ಕೆ ಹೆಚ್ಚಿಸಿಕೊಂಡಿದೆ. 2020-21ರ ಜನವರಿ - ಮಾರ್ಚ್ ತ್ರೈಮಾಸಿಕದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್‌ನ ಜಾಗತಿಕ ಸಗಟು ಮಾರಾಟ 1,36,461 ಯುನಿಟ್‌ಗಳಷ್ಟಿತ್ತು. ಈ ತ್ರೈಮಾಸಿಕದಲ್ಲಿ ಜಾಗ್ವಾರ್ ಸಗಟು 31,814 ವಾಹನಗಳಲ್ಲಿದ್ದರೆ, ಲ್ಯಾಂಡ್ ರೋವರ್ 1,04,647 ವಾಹನಗಳಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ.
ಮಧ್ಯಾಹ್ನ 1 ಗಂಟೆಗೆ ಟಾಟಾ ಮೋಟಾರ್ಸ್ ಷೇರುಗಳು ಬಿಎಸ್‌ಇಯಲ್ಲಿ ತಲಾ 302.40 ರೂ.ಗೆ ಫ್ಲಾಟ್ ವಹಿವಾಟು ನಡೆಸಿದೆ.