ETV Bharat / business

ಸಣ್ಣ ಡೀಸೆಲ್​ ಕಾರು ತಯಾರಿಕೆಗೆ ಟಾಟಾ ಮೋಟರ್ಸ್​ ಕೊಕ್​..! - undefined

ಮುಂಬರುವ ದಿನಗಳಲ್ಲಿ ಬಿಎಸ್‌-6 ಗುಣಮಟ್ಟಕ್ಕೆ ಹೊಂದುವಂಥ ವಾಹನಗಳ ತಯಾರಿಕೆ ಮಾಡುವುದು ಕಡ್ಡಾಯವಾಗಿದೆ. ಈ ಮಾದರಿ ತಯಾರಿಕೆಯಿಂದ ಕಾರುಗಳ ಬೆಲೆ ಏರಿಕೆಯಾಗಲಿದ್ದು, ಬೇಡಿಕೆಯ ಪ್ರಮಾಣ ತಗ್ಗಲಿದೆ. ಹೀಗಾಗಿ, ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದೆ.

ಚಿತ್ರ ಕೃಪೆ ಟ್ವಿಟ್ಟರ್​
author img

By

Published : May 5, 2019, 11:02 PM IST

ನವದೆಹಲಿ: ಮುಂದಿನ ದಿನಗಳಲ್ಲಿ ಟಾಟಾ ಮೋಟಾರ್ಸ್​ ತನ್ನ ಸಣ್ಣ ಡೀಸೆಲ್ ಕಾರುಗಳ ಉತ್ಪನ್ನದ ಮೇಲಿನ ಬಂಡವಾಳವನ್ನು ಹಿಂತೆಗೆದುಕೊಳ್ಳಲು ಮುಂದಾಗಿದೆ.

ಮುಂಬರುವ ದಿನಗಳಲ್ಲಿ ಬಿಎಸ್‌-6 ಗುಣಮಟ್ಟಕ್ಕೆ ಹೊಂದುವಂಥ ವಾಹನಗಳ ತಯಾರಿಕೆ ಮಾಡುವುದು ಕಡ್ಡಾಯವಾಗಿದೆ. ಈ ಮಾದರಿ ತಯಾರಿಕೆಯಿಂದ ಕಾರುಗಳ ಬೆಲೆ ಏರಿಕೆಯಾಗಲಿದ್ದು, ಬೇಡಿಕೆಯ ಪ್ರಮಾಣ ತಗ್ಗಲಿದೆ. ಹೀಗಾಗಿ, ಬಂಡವಾಳವನ್ನು ಹಿಂತೆಗೆದುಕೊಳ್ಳಲಾಗುತ್ತಿದೆ ಎಂದು ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ ಇಂಡಿಯಾ (ಎಂಎಸ್​ಐ), ಡೀಸೆಲ್​ ಕಾರುಗಳ ಉತ್ಪನ್ನ ಸ್ಥಗಿತಗೊಳಿಸುವುದಾಗಿ ಕಳೆದ ತಿಂಗಳಾಂತ್ಯದಲ್ಲಿ ಘೋಷಿಸಿತ್ತು.

ಕಾರ್ಬನ್​ ಮಟ್ಟ ತಗ್ಗಿಸಿ ವಾಯುಮಾಲಿನ್ಯ ನಿಯಂತ್ರಿಸಲು ಕೇಂದ್ರ ಸರ್ಕಾರವು 'ಭಾರತ್ ಸ್ಟೇಜ್​' ಮಾಲಿನ್ಯ ನಿಯಮಾವಳಿಗಳನ್ನು ರೂಪಿಸಿದೆ. ಸದ್ಯ ಬಿಎಸ್​-4 ವ್ಯವಸ್ಥೆ ಜಾರಿಯಲ್ಲಿದ್ದು, ಬಿಎಸ್​-5 ಬದಲಿಗೆ ಬಿಎಸ್​-6 ಗುಣಮಟ್ಟದ ವಾಹನಗಳು ಮಾರಾಟ ವ್ಯವಸ್ಥೆಯನ್ನು 2021ರ ವೇಳೆಗೆ ಪರಿಚಯಿಸಲಾಗುತ್ತಿದೆ. ಬಿಎಸ್​-6 ನಿಯಮಗಳಿಗೆ ತಕ್ಕಂತ ವಾಹನಗಳನ್ನಷ್ಟೇ ಕಂಪನಿಗಳು ತಯಾರಿಸಬೇಕಾಗಿದೆ. 2020ರ ಏಪ್ರಿಲ್​ 1ರಿಂದ ದೇಶಾದ್ಯಂತ ಭಾರತ್ ಸ್ಟೇಜ್​-4 ವಾಹನಗಳನ್ನು ಮಾರಾಟ ಹಾಗೂ ನೋಂದಣಿ ಮಾಡದಂತೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಈ ನಿಯಮ ಪಾಲನೆಗೆ ಕಂಪನಿಗಳು ಆರ್ಥಿಕವಾಗಿ ಹೊರೆಯಾಗುವ ಉತ್ಪನ್ನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿವೆ.

ಟಾಟಾ ಮೋಟಾರ್ಸ್​ 1 ಲೀಟರ್​ ಡೀಸೆಲ್​ ಇಂಜಿನ್ ಸಾಮರ್ಥ್ಯದ 'ಟಿಯಾಗೋ', ಸೆಡನ್ ಶ್ರೇಣಿಯ 1.05 ಲೀಟರ್​ನ 'ಟಿಗೊರ್​' ಹಾಗೂ ಹಳೆ ಮಾದರಿಯ 'ಬೋಲ್ಟಾ' ಮತ್ತು 'ಝೆಸ್ಟ್​'ನಂತಹ ಕಾರುಗಳ ಉತ್ಪನ್ನ ಸ್ಥಗಿತವಾಗಲಿದೆ.

ಸಣ್ಣ ಮತ್ತು ಮಧ್ಯಮ ಗಾತ್ರದ ಕಾರುಗಳ ತಯಾರಿಕೆಗೆ ಅಗತ್ಯವಾದ ಸುಧಾರಿತ ಇಂಜಿನ್​ ಅಭಿವೃದ್ಧಿಪಡಿಸುವುದು ದುಬಾರಿ ಆಗಲಿದೆ. ಒಂದೇ ತಯಾರಿಸಿದ್ದರೂ ಈ ಕಾರುಗಳಿಗೆ ಹೆಚ್ಚಿನ ದರ ವಿಧಿಸಬೇಕಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಕುಸಿಯಲಿದೆ. ಹೀಗಾಗಿ, ಸಣ್ಣ ಕಾರುಗಳ ಮೇಲಿನ ಬಂಡವಾಳ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ ಎಂದು ಟಾಟಾ ಮೋಟಾರ್ಸ್​ನ ಪ್ಯಾಸೆಂಜರ್ ವಾಹನಗಳ ಅಧ್ಯಕ್ಷ ಮಾಯಾಂಕ್ ಪಾರೀಕ್ ಹೇಳಿದ್ದಾರೆ.

ಈ ಮಾದರಿಯ ವಾಹನಗಳಲ್ಲಿ ಶೇ 80ರಷ್ಟು ಬೇಡಿಕೆ ಪೆಟ್ರೋಲ್​ ಚಾಲಿತ ಇಂಜಿನ್​ಗಳಿಗೆ ಬರುತ್ತಿದೆ. ಅಗತ್ಯಕ್ಕಿಂತ ಹೆಚ್ಚುವರಿ ಬಂಡವಾಳ ಹೂಡುವುದು ಕಾರ್ಯಸಾಧ್ಯ ಆಗುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.