ನವದೆಹಲಿ : ದೇಶದ ಆಟೋಮೊಬೈಲ್ ಅಗ್ರ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಮೋಟಾರ್ಸ್ ಟಿಯಾಗೊ ಶ್ರೇಣಿಯನ್ನು ವಿಸ್ತರಿಸಿದೆ. ಹೊಸ ಸ್ಪೋರ್ಟಿ ಟ್ರಿಮ್, ಟಿಯಾಗೊ ಎನ್ಆರ್‌ಜಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.
ಇದರ ಬೆಲೆ ರೂ. 6.57 ಲಕ್ಷ (ಎಕ್ಸ್ ಶೋ ರೂಂ ದೆಹಲಿ). ಹ್ಯಾಚ್‌ಬ್ಯಾಕ್‌ನ ಹೊಸ ಸ್ಪೋರ್ಟಿ ಆವೃತ್ತಿಯು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್, ದೊಡ್ಡ ಟೈರ್‌ಗಳು, ಬಾಡಿ ಕ್ಲಾಡಿಂಗ್ ಮತ್ತು ರೂಫ್ ರೇಲ್‌ಗಳೊಂದಿಗೆ ಎಸ್‌ಯುವಿ ಮಾದರಿಯಲ್ಲಿದೆ.
ಟಿಯಾಗೋ ಎನ್‌ಆರ್‌ಜಿ 1.2 ಲೀಟರ್ ಪೆಟ್ರೋಲ್ ಪವರ್‌ಟ್ರೇನ್ (86 ಪಿಎಸ್ ಪವರ್)ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಐದು ಸ್ಪೀಡ್ ಮ್ಯಾನುವಲ್ ಮತ್ತು ಎಎಮ್‌ಟಿ (ಆಟೋಮೇಟೆಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್) ಟ್ರಾನ್ಸ್‌ಮಿಷನ್ ಹೊಂದಿದೆ. ಈ ಮಾದರಿಯು ಗ್ಲೋಬಲ್ ಎನ್‌ಸಿಎಪಿಯಿಂದ 4 ಸ್ಟಾರ್ ಸುರಕ್ಷತಾ ರೇಟಿಂಗ್ ಹೊಂದಿದೆ.
ಹೆಸರಿನಂತೆಯೇ ನಿಜವಾಗಿಯೂ ಶಕ್ತಿಯುತವಾಗಿದೆ. ಎಸ್‌ಯುವಿ ಮಾದರಿಯ ವಾಹನಗಳು ಮಾರುಕಟ್ಟೆಯಲ್ಲಿ ಹೆಚ್ಚು ಆಕರ್ಷಣೆಯಾಗಿವೆ. ಹೀಗಾಗಿ, ಎನ್‌ಆರ್‌ಜಿ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಇದು ಹೊರಭಾಗದಲ್ಲಿ ಮಾತ್ರ ಪ್ರಬಲವಾಗಿದೆ. ಆದರೆ, ಒಳಾಂಗಣದಲ್ಲಿ ವೈಶಿಷ್ಟ್ಯ-ಲೋಡ್ ಮತ್ತು ಸ್ಟೈಲಿಶ್ ಆಗಿದೆ. ಒರಟಾದ ಭೂಪ್ರದೇಶಗಳಲ್ಲೂ ಚಲಿಸುವ ಸಾರ್ಥಮ್ಯ ಹೊಂದಿಗೆ ಎಂದು ಟಾಟಾ ಮೋಟಾರ್ಸ್ ಉಪಾಧ್ಯಕ್ಷ (ಮಾರಾಟ, ಮಾರ್ಕೆಟಿಂಗ್ ಮತ್ತು ಗ್ರಾಹಕ ಆರೈಕೆ) ರಾಜನ್ ಅಂಬಾ ತಿಳಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ 15ಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ
ಟಿಯಾಗೊ ಶ್ರೇಣಿಯನ್ನು ಮುಡಿಗೇರಿಸಿಕೊಂಡಿರುವ NRG, ಕಂಪನಿ ಬ್ರಾಂಡ್ ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ. ನಮ್ಮ ಗ್ರಾಹಕರು ಹೊಸ ಟಿಯಾಗೋ NRGಯನ್ನು ಅದರ ಹಿಂದಿನಂತೆ ಮೆಚ್ಚುತ್ತಾರೆ ಎಂಬ ವಿಶ್ವಾಸವಿದೆ ಎಂದು ಅಂಬಾ ಹೇಳಿದರು.
ಟಿಯಾಗೊ NRG 181 ಎಂಎಂ ಗ್ರೌಂಡ್ ಕ್ಲಿಯರೆನ್ಸ್, 15 ಇಂಚಿನ ಚಕ್ರಗಳು ಮತ್ತು ರಿಟೂನ್ಡ್ ಸಸ್ಪೆನ್ಶನ್ನೊಂದಿಗೆ ಬರುತ್ತಿದೆ. ಇತರ ವೈಶಿಷ್ಟ್ಯಗಳಲ್ಲಿ ಪುಶ್ ಬಟನ್ ಸ್ಟಾರ್ಟ್, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಟೋಫೋಲ್ಡ್ ಒಆರ್‌ವಿಎಂ, ಬ್ಲಾಕ್ ಇಂಟೀರಿಯರ್ಸ್, ಇಬಿಡಿಯೊಂದಿಗೆ ಎಬಿಎಸ್ ಮತ್ತು ರಿಯರ್ ವೈಪರ್‌ನೊಂದಿಗೆ ಡಿಫೋಗರ್ ಸೇರಿವೆ.
ಗ್ರಾಹಕರಿಂದ ಪ್ರತಿಕ್ರಿಯೆ ಪಡೆದ ನಂತರ ಈ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಅಂಬಾ ವಿವರಿಸಿದರು. ಹ್ಯಾಚ್‌ಬ್ಯಾಕ್‌ಗಳು ಪ್ರಸ್ತುತ ದೇಶದ ಒಟ್ಟಾರೆ ಪ್ರಯಾಣಿಕ ವಾಹನ ಮಾರಾಟಕ್ಕೆ ಶೇ.43ರಷ್ಟು ಕೊಡುಗೆ ನೀಡುತ್ತವೆ.
ಟಾಟಾ ಮೋಟಾರ್ಸ್‌ಗಾಗಿ ಅಂತಹ ಮಾದರಿಗಳು ಪ್ರಸ್ತುತ ಅದರ ಒಟ್ಟಾರೆ ಮಾರಾಟದಲ್ಲಿ ಶೇ.46ರಷ್ಟು ಕೊಡುಗೆ ನೀಡುತ್ತವೆ. ಈವರೆಗೆ ಆಟೋ ಪ್ರಮುಖ ದೇಶೀಯ ಮಾರುಕಟ್ಟೆಯಲ್ಲಿ ಸುಮಾರು 3.5 ಲಕ್ಷ ಯೂನಿಟ್ ಟಿಯಾಗೊ ಮಾರಾಟವಾಗಿದೆ.