ETV Bharat / business

ಆಮ್ಲಜನಕ ಅಭಾವ: ಜರ್ಮನಿಯಿಂದ 24 ಆಕ್ಸಿಜನ್​ ಕಂಟೇನರ್​ ತರಿಸುತ್ತಿರುವ ಟಾಟಾ, ಲಿಂಡೆ! - ಟಾಟಾ ಲಿಂಡೆ ಸಹಭಾಗಿತ್ವ

ಖಾಸಗಿ ಜರ್ಮನ್ ಕಂಪನಿ ಲಿಂಡೆ ಮತ್ತು ಟಾಟಾ ಜೊತೆಗೆ 24 ಆಮ್ಲಜನಕ ಟ್ಯಾಂಕ್‌ಗಳನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಗಿದೆ. ಉತ್ಪಾದನಾ ತಾಣಗಳಿಂದ ಕೋವಿಡ್‌-19 ಹಾಟ್​ಸ್ಪಾಟ್​ಗಳಿಗೆ ಸಾರಿಗೆ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಭಾರತಕ್ಕೆ ವಿಮಾನ ಹಾರಾಟದ ಮೂಲಕ ತರಲಾಗುವುದು ಎಂದು ಭಾರತದ ಜರ್ಮನ್ ರಾಯಭಾರಿ ಕಚೇರಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ತಿಳಿಸಿದೆ.

Tata
Tata
author img

By

Published : Apr 24, 2021, 3:21 PM IST

ನವದೆಹಲಿ: ಟಾಟಾ ಗ್ರೂಪ್ 24 ಆಮ್ಲಜನಕ ಸಾಗಣೆ ಟ್ಯಾಂಕ್‌ಗಳನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಗಿದ್ದು, ಉತ್ಪಾದನಾ ಸ್ಥಳಗಳಿಂದ ಕೋವಿಡ್ -19 ಆಸ್ಪತ್ರೆಗಳಿಗೆ ಆಮ್ಲಜನಕದ ಸಾಗಣೆ ಸಾಮರ್ಥ್ಯ ಹೆಚ್ಚಿಸಲು ಅವುಗಳನ್ನು ಭಾರತಕ್ಕೆ ತರಲಾಗುತ್ತದೆ.

ಈ ಉತ್ಸಾಹದಲ್ಲಿ ಖಾಸಗಿ ಜರ್ಮನ್ ಕಂಪನಿ ಲಿಂಡೆ ಮತ್ತು ಟಾಟಾ ಜೊತೆಗೆ 24 ಆಮ್ಲಜನಕ ಟ್ಯಾಂಕ್‌ಗಳನ್ನು ಭದ್ರಪಡಿಸುವಲ್ಲಿ ಯಶಸ್ವಿಯಾಗಿದೆ. ಉತ್ಪಾದನಾ ತಾಣಗಳಿಂದ ಕೋವಿಡ್‌-19 ಹಾಟ್​ಸ್ಪಾಟ್​ಗಳಿಗೆ ಸಾರಿಗೆ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಭಾರತಕ್ಕೆ ವಿಮಾನ ಹಾರಾಟದ ಮೂಲಕ ತರಲಾಗುವುದು ಎಂದು ಭಾರತದ ಜರ್ಮನ್ ರಾಯಭಾರಿ ಕಚೇರಿ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ನಲ್ಲಿ ತಿಳಿಸಿದೆ.

ಏಪ್ರಿಲ್ 21ರಂದು,ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿನ ಟಾಟಾ ಗ್ರೂಪ್, ಕೋವಿಡ್ -19 ವಿರುದ್ಧದ ಹೋರಾಟವನ್ನು ಬಲಪಡಿಸಲು ಸಾಧ್ಯವಾದಷ್ಟು ತೊಡಗಿಸಿಕೊಳ್ಳಲು ಬದ್ಧವಾಗಿದೆ. ಆಮ್ಲಜನಕ ಬಿಕ್ಕಟ್ಟನ್ನು ತಗ್ಗಿಸುವುದಾಗಿ ಹೇಳಿತ್ತು.

ಟಾಸ್ಕ್ ಫೋರ್ಸ್ ವಿಶೇಷವಾಗಿ ವೈದ್ಯಕೀಯ ಅವಶ್ಯಕತೆಗಳನ್ನು ಎದುರು ನೋಡುತ್ತಿದೆ. ಸಂಪನ್ಮೂಲಗಳ ವ್ಯವಸ್ಥೆಗೊಳಿಸಲು ಬರುವ ವಿನಂತಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದು ಸಮೂಹ ಅಧಿಕಾರಿಗಳು ತಿಳಿಸಿದ್ದಾರೆ.

ಕ್ವಾರಂಟೈನ್​ ಸೆಂಟರ್​ ಮತ್ತು ಆಸ್ಪತ್ರೆಯ ಬೆಡ್​ಗಳಂತಹ ಪ್ರಮುಖ ಸಂಪನ್ಮೂಲಗಳನ್ನು ವ್ಯವಸ್ಥೆಗೊಳಿಸುವ ಜವಾಬ್ದಾರಿ ವಹಿಸಿಕೊಂಡಿದೆ. ಜರ್ಮನಿಯಿಂದ ಆಮ್ಲಜನಕ ಕಂಟೇನರ್​ ಮತ್ತು ಉಪಕರಣಗಳನ್ನು ವಿಮಾನಯಾನದಲ್ಲಿ ತರಲು ಕೇಂದ್ರ ಸರ್ಕಾರವು ಭಾರತೀಯ ವಾಯುಪಡೆಯನ್ನು ನಿಯೋಜಿಸಿದೆ.

ಜೀವ ರಕ್ಷಕ ವಸ್ತುಗಳನ್ನು ಸಾಗಿಸಲು ಕಂಟೇನರ್‌ಗಳ ತೀವ್ರ ಕೊರತೆಯಿಂದಾಗಿ ಭಾರತವು ಆಮ್ಲಜನಕ ಸಾರಿಗೆ ಸಮಸ್ಯೆ ಎದುರಿಸುತ್ತಿದೆ. ಸರ್ಕಾರ ಎಲ್ಲಾ ಮಧ್ಯಸ್ಥಗಾರರೊಂದಿಗೆ ಮಾತುಕತೆ ನಡೆಸುತ್ತಿದೆ.

ಕೋವಿಡ್ -19 ಎರಡನೇ ಅಲೆಯು ಭಾರತವನ್ನು ಅಪ್ಪಳಿಸುತ್ತಿದ್ದಂತೆ, ರಾಷ್ಟ್ರ ರಾಜಧಾನಿ ಆಮ್ಲಜನಕ ಸಿಲಿಂಡರ್‌ ಮತ್ತು ಔಷಧಿಗಳ ಕೊರತೆ ಎದುರಿಸುತ್ತಿದ್ದಂತೆ ಆಕ್ಸಿಜನ್ ಸಿಲಿಂಡರ್‌, ನಿಯಂತ್ರಕಗಳು ಮತ್ತು ಅಗತ್ಯ ಔಷಧಿಗಳನ್ನು ಏರ್‌ಲಿಫ್ಟ್ ಮಾಡಲು ಕೇಂದ್ರದಿಂದ ಐಎಎಫ್ ತರಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.