ETV Bharat / business

ಮಲ್ಯ ಗಡಿಪಾರು ವಿಳಂಬದ ರಹಸ್ಯ ಸುಪ್ರೀಂಕೋರ್ಟ್​ ಮುಂದೆ ಬಿಚ್ಚಿಟ್ಟ ಮೋದಿ ಸರ್ಕಾರ - ಮಲ್ಯ ಹಸ್ತಾಂತರ ವಿಳಂಬ

ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರ ನ್ಯಾಯಪೀಠವು ಮಾರ್ಚ್ 15ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಿಕೆ ಮಾಡಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಲ್ಯ ಅವರನ್ನು ಹಸ್ತಾಂತರಿಸುವ ಸ್ಥಿತಿಯ ಬಗ್ಗೆ ವರದಿ ಸಲ್ಲಿಸಲು ಸ್ವಲ್ಪ ಸಮಯ ಕೋರಿದರು.

Vijay Mallya
ಮಲ್ಯ
author img

By

Published : Jan 18, 2021, 4:19 PM IST

ನವದೆಹಲಿ: ನಾನಾ ಬ್ಯಾಂಕ್​ಗಳಿಂದ 9,000 ಕೋಟಿ ರೂ. ಸಾಲ ಪಡೆದು ಮರುಪಾವತಿಸಿದೆ ಬ್ರಿಟನ್​ಗೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸಲು ಎಲ್ಲಾ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಿದೆ. ಕಾನೂನು ಸಮಸ್ಯೆಗಳಿಂದ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್​ಗೆ ತಿಳಿಸಿದೆ.

ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಅಶೋಕ್ ಭೂಷಣ್ ಅವರ ನ್ಯಾಯಪೀಠವು ಮಾರ್ಚ್ 15ರಂದು ಹೆಚ್ಚಿನ ವಿಚಾರಣೆಗೆ ಮುಂದೂಡಿಕೆ ಮಾಡಿತು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಲ್ಯ ಅವರನ್ನು ಹಸ್ತಾಂತರಿಸುವ ಸ್ಥಿತಿಯ ಬಗ್ಗೆ ವರದಿ ಸಲ್ಲಿಸಲು ಸ್ವಲ್ಪ ಸಮಯ ಕೋರಿದರು.

ಮಲ್ಯ ಅವರನ್ನು ಇಂಗ್ಲೆಂಡ್​ನಿಂದ ಹಸ್ತಾಂತರಿಸುವ ಸ್ಥಿತಿಯ ಕುರಿತು ವಿದೇಶಾಂಗ ಸಚಿವಾಲಯದ ಅಧಿಕಾರಿ ದೇವೇಶ್ ಉತ್ತಮ್ ಅವರಿಗೆ ಬರೆದ ಪತ್ರವನ್ನು ಮೆಹ್ತಾ ಅವರು ನ್ಯಾಯಪೀಠದ ಮುಂದೆ ಹಂಚಿಕೊಂಡಿದ್ದಾರೆ.

ವಿದೇಶಾಂಗ ಸಚಿವಾಲಯ (ಎಂಇಎ) ಯುಕೆ ಸರ್ಕಾರದೊಂದಿಗೆ ಹಸ್ತಾಂತರದ ವಿಷಯ ಪ್ರಸ್ತಾಪಿಸಿದೆ. ಮಲ್ಯವನ್ನು ಹಸ್ತಾಂತರಿಸಲು ಕೇಂದ್ರವು ಎಲ್ಲಾ ವಿಧದ ಗಂಭೀರ ಪ್ರಯತ್ನಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ.

ಸರ್ಕಾರವು ತನ್ನ ಅತ್ಯುತ್ತಮವಾಗಿ ಪ್ರಯತ್ನಪಡುತ್ತಿದೆ. ಆದರೆ, ಸ್ಥಾನಮಾನ ಒಂದೇ ಆಗಿರುತ್ತದೆ. ರಾಜಕೀಯ ಕಾರ್ಯನಿರ್ವಾಹಕ ಮಟ್ಟದಿಂದ ಆಡಳಿತಾತ್ಮಕ ಹಂತದವರೆಗೆ ಈ ವಿಷಯ ಪದೇ ಪದೇ ಪರಿಶೀಲಿಸಲಾಗುತ್ತಿದೆ ಎಂದರು. ಇದಕ್ಕೆ ಪ್ರತಿಯಾಗಿ ನ್ಯಾಯಪೀಠ ಪತ್ರವನ್ನು ದಾಖಲೆಯಾಗಿ ತೆಗೆದುಕೊಂಡಿತು.

ಇದನ್ನೂ ಓದಿ: ಮಿಂಚಿನ ವೇಗದ ಕನ್ಸ್​​ಸ್ಟ್ರಕ್ಷನ್​: ಭಾರತದಲ್ಲಿ ಗಂಟೆಗೆ 3.17 km ರಾಷ್ಟ್ರೀಯ ಹೆದ್ದಾರಿ ನಿರ್ಮಾಣ... ವಾರಕ್ಕೆಷ್ಟು?

ತನ್ನ ನಿಷ್ಕ್ರಿಯ ಕಿಂಗ್‌ಫಿಶರ್ ಏರ್‌ಲೈನ್ಸ್ ಒಳಗೊಂಡ 9,000 ಕೋಟಿ ರೂ. ಬ್ಯಾಂಕ್ ಸಾಲ ಡೀಫಾಲ್ಟ್ ಪ್ರಕರಣದ ಆರೋಪಿ ಮಲ್ಯ 2016ರ ಮಾರ್ಚ್‌ನಿಂದ ಯುಕೆಯಲ್ಲಿದ್ದಾರೆ. ಮೂರು ವರ್ಷಗಳ ಹಿಂದೆ ಸ್ಕಾಟ್ಲೆಂಡ್ ಯಾರ್ಡ್‌ನಿಂದ 2017ರ ಏಪ್ರಿಲ್ 18ರಿಂದ ಹಸ್ತಾಂತರ ವಾರಂಟ್‌ನ ಜಾಮೀನಿನಲ್ಲಿದ್ದಾರೆ.

ಕಾನೂನು ಅಧಿಕಾರಿ ಸಲ್ಲಿಸಿದ ಪತ್ರದಲ್ಲಿ, “ಮಲ್ಯ ಅವರನ್ನು ಹಸ್ತಾಂತರಿಸುವ ಮೊದಲು ಇನ್ನೂ ಹೆಚ್ಚಿನ ಕಾನೂನು ಸಮಸ್ಯೆ ಇದೆ ಎಂದು ವಿದೇಶಾಂಗ ಸಚಿವಾಲಯಕ್ಕೆ ಯುಕೆ ಸರ್ಕಾರವು ತಿಳಿಸಿದೆ” ಎಂದು ಕೋರ್ಟ್​ ಗಮನಕ್ಕೆ ತಂದರು.

ಬ್ರಿಟನ್​ ಕಾನೂನಿನ ಪ್ರಕಾರ, ಅದನ್ನು ಪರಿಹರಿಸುವವರೆಗೆ ಹಸ್ತಾಂತರ ನಡೆಯುವುದಿಲ್ಲ. ಇದು ನ್ಯಾಯಾಂಗ ಸ್ವರೂಪದಲ್ಲಿ ಇರುವುದರಿಂದ ಈ ವಿಷಯವು ಗೌಪ್ಯವಾಗಿರುತ್ತದೆ. ಹರ್​ ಮೆಜೆಸ್ಟಿ (ಯುಕೆ) ಸರ್ಕಾರವು ಹೆಚ್ಚಿನ ವಿವರಗಳನ್ನು ನೀಡಲು ಸಾಧ್ಯವಿಲ್ಲ ಎಂದು ನೀವು ಅರ್ಥಮಾಡಿಕೊಳ್ಳಬೇಕು. ಈ ಸಮಸ್ಯೆಯನ್ನು ಪರಿಹರಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದನ್ನು ನಾವು ಅಂದಾಜಿಸಲು ಸಾಧ್ಯವಿಲ್ಲ. ಹರ್ ಮೆಜೆಸ್ಟಿ ಸರ್ಕಾರವು ಭಾರತ ಸರ್ಕಾರಕ್ಕೆ ಈ ಪ್ರಕರಣದ ಮಹತ್ವವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದೆ. ಸರ್ಕಾರವು ಈ ಸಮಸ್ಯೆಯನ್ನು ಸಾಧ್ಯವಾದಷ್ಟು ಬೇಗ ಎದುರಿಸಲು ಪ್ರಯತ್ನಿಸುತ್ತಿದೆ ಎಂದು ನಾನು ಭರವಸೆ ನೀಡಬಲ್ಲೆ ಎಂದು ಪತ್ರದಲ್ಲಿ ಉಲ್ಲೇಖಿಸಿದೆ.

ವಿಜಯ್ ಮಲ್ಯ ಅವರನ್ನು ಶೀಘ್ರವಾಗಿ ಹಸ್ತಾಂತರಕ್ಕೆ ಪಡೆಯಲು ಭಾರತ ಸರ್ಕಾರ ಸತತ ಪ್ರಯತ್ನಗಳನ್ನು ಮಾಡುತ್ತಿದೆ. 2020ರ ನವೆಂಬರ್​​ನಲ್ಲಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಗ್ಲಾ ಅವರು ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಯುಕೆ ಕಾನೂನು ಸಂಕೀರ್ಣತೆಗಳು ವಿಜಯ್ ಮಲ್ಯ ಅವರನ್ನು ಶೀಘ್ರವಾಗಿ ಹಸ್ತಾಂತರಿಸುವುದನ್ನು ತಡೆಯುತ್ತಿವೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.