ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವದಿಂದಾಗಿ ಮೇ ತಿಂಗಳಲ್ಲಿ ಪ್ರಾರಂಭವಾದ ಕಾಸ್ಟ್ಕಟ್ಟಿಂಗ್ ಭಾಗವಾಗಿ 350 ಉದ್ಯೋಗಿಗಳನ್ನು ವಜಾಗೊಳಿಸಲಾಗುತ್ತಿದೆ ಎಂದು ಆನ್ಲೈನ್ ಫುಡ್ ವಿತರಕ ಸ್ವಿಗ್ಗಿ ತಿಳಿಸಿದೆ.
ಮೇ ತಿಂಗಳಲ್ಲಿ ಸ್ವಿಗ್ಗಿ, ನಗರ ಮತ್ತು ಪ್ರಧಾನ ಕಚೇರಿಗಳಲ್ಲಿ ಕಾರ್ಯನಿರತ 1,100 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿತ್ತು. ಸಂಭಾವ್ಯ ವಿಭಾಗಗಳಲ್ಲಿ ಸಂಪನ್ಮೂಲಗಳನ್ನು ಮರುಹೊಂದಿಸುವ ಹಾಗೂ ಖರ್ಚು ನಿರ್ವಹಣೆಯನ್ನು ಸರಿದೂಗಿಸುವ ಭಾಗವಾಗಿ ಕಂಪನಿಯು ಉದ್ಯೋಗ ಕಡಿತದಂತಹ ನಿರ್ಧಾರ ತೆಗೆದುಕೊಂಡು ಬರುತ್ತಿದೆ.
ಈಗಾಗಲೇ ಉದ್ಯಮವು ಗರಿಷ್ಠ 50ರಷ್ಟು ಚೇತರಿಸಿಕೊಂಡಿದೆ. ದುರದೃಷ್ಟವಶಾತ್, ಸಂಪನ್ಮೂಲಗಳನ್ನು ಮರುಹೊಂದಿಸುವ ವ್ಯಾಯಾಮದೊಂದಿಗೆ ನಾವು ಇಂತಹ ನಿರ್ಧಾರಗಳೊಂದಿಗೆ ಮುಂದುವರಿಯಬೇಕಾಗಿದೆ. ಇದರಿಂದಾಗಿ 350 ಉದ್ಯೋಗಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಸ್ವಿಗ್ಗಿ ಪ್ರಕಟಣೆಯಲ್ಲಿ ತಿಳಿಸಿದೆ.
ನಮ್ಮ ನೌಕರರಿಗೆ ಗೌರವ ಮತ್ತು ಸಹಾನುಭೂತಿ ತೋರಿಸಲು ನಾವು ಬದ್ಧರಾಗಿದ್ದೇವೆ. ಮುಂದೆ ಇಂತಹ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ದೃಢವಾದ ಆರೈಕೆ ಪ್ಯಾಕೇಜ್ ಅನ್ನು ಉಳಿಸಿಕೊಳ್ಳುತ್ತೇವೆ ಎಂದು ಹೇಳಿದೆ.