ETV Bharat / business

ವಿಶ್ವದ ಟಾಪ್​ 500 ಕುಬೇರರಿಗೆ ನಷ್ಟವಾದರೂ ಭಾರತದ ಈ ಉದ್ಯಮಿಗೆ ಮಾತ್ರ ಲಾಭದಲ್ಲಿ!

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಫ್ರಾನ್ಸ್‌ನ ಎಲ್​ವಿಎಂಎಚ್​ ಸಿಇಒ ಬರ್ನಾರ್ಡ್ ಅರ್ನಾಲ್ಟ್, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಕುಸಿತ ದಾಖಲಿಸಿದ್ದರೇ ಭಾರ್ತಿ ಏರ್​​ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್​ ಅವರ ಕಂಪನಿಯ ಷೇರು ಗ್ರೀನ್​ ಮಾರ್ಕ್​ನಲ್ಲಿ ಮುಂದುವರಿದಿದೆ.

ಸಾಂದರ್ಭಿಕ ಚಿತ್ರ
author img

By

Published : Aug 7, 2019, 1:40 AM IST

ನವದೆಹಲಿ: ಮಂದಗತಿಯ ಜಾಗತಿಕ ಆರ್ಥಿಕತೆ ಹಾಗೂ ಚೀನಾ- ಅಮೆರಿಕ ನಡುವಿನ ವಾಣಿಜ್ಯ ಸಮರದಿಂದಾಗಿ ಸೋಮವಾರದ ಪೇಟೆಯಲ್ಲಿ ವಿಶ್ವದ ಅಗ್ರ 500 ಶ್ರೀಮಂತರ ಕಂಪನಿಗಳು ಋಣಾತ್ಮಕ ನಡೆ ಪ್ರದರ್ಶಿಸಿವೆ.

ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೋಸ್, ಫ್ರಾನ್ಸ್‌ನ ಎಲ್​ವಿಎಂಎಚ್​ ಸಿಇಒ ಬರ್ನಾರ್ಡ್ ಅರ್ನಾಲ್ಟ್, ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಕಂಪನಿಗಳ ಷೇರುಗಳ ಮೌಲ್ಯದಲ್ಲಿ ಕುಸಿತ ದಾಖಲಿಸಿದ್ದರೇ ಭಾರ್ತಿ ಏರ್​​ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್​ ಅವರ ಕಂಪನಿಯ ಷೇರು ಗ್ರೀನ್​ ಮಾರ್ಕ್​ನಲ್ಲಿ ಮುಂದುವರಿದಿದೆ.

ಭಾರತದ ಫವರ್​ಫುಲ್​ ವ್ಯಕ್ತಿಗಳ ಸಾಲಿನಲ್ಲಿ ಸುನೀಲ್​ ಮಿತ್ತಲ್ ಅವರು 20ನೇ ಸ್ಥಾನದಲ್ಲಿದ್ದಾರೆ. ಸುನೀಲ್​ ಅವರು ₹ 3,630 ಕೋಟಿಯಷ್ಟು ಸಂಪತ್ತು ಹೊಂದಿದ್ದು, ಅವರ ಮಾಲೀಕತ್ವದ ಭಾರ್ತಿ ಏರ್​ಟೆಲ್​ ಭಾರತದ 2ನೇ ಅತಿದೊಡ್ಡ ಮೊಬೈಲ್​ ನೆಟ್ವರ್ಕ್​ ಕಂಪನಿಯಾಗಿದೆ. 400 ಮಿಲಯನ್ ಗ್ರಾಹಕರು ಹಾಗೂ 16 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ಇಂದಿನ ಮುಂಬೈ ಷೇರುಪೇಟೆಯಲ್ಲಿ ಭಾರ್ತಿ ಏರ್​ಟೆಲ್​ನ ಪ್ರತಿ ಷೇರಿನ ಮೌಲ್ಯದಲ್ಲಿ ₹ 11.35 ಏರಿಕೆಯೊಂದಿಗೆ ಶೇ 3.18ರಷ್ಟು ಜಿಗಿತ ದಾಖಲಿಸಿದೆ. ಪ್ರತಿ ಷೇರಿನ ಬೆಲೆಯು 368.40ರಲ್ಲಿ ವಹಿವಾಟು ನಡೆಸಿತ್ತು.

Intro:Body:Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.