ನವದೆಹಲಿ: ಸಾಮಾಜಿಕ ಜಾಲ ತಾಣವೆಂಬುದು ನೆರೆಹೊರೆಯ ಗೆಳೆಯರಷ್ಟೇ ಅಲ್ಲದೇ ಸಾಗರದಾಚೆಯ ದೇಶ- ವಿದೇಶಗಳ ಗೆಳೆಯರನ್ನೂ ಸಂಪರ್ಕಿಸುವ ಮಾಯಾಜಾಲವಾಗಿದೆ.
ಯುವಪೀಳಿಗೆ ಬದುಕಿನ ಅಂಗವೇ ಆಗಿರುವ ಸಾಮಾಜಿಕ ಜಾಲತಾಣಗಳು ಮಾಹಿತಿ, ಅಭಿಪ್ರಾಯಗಳ ಹಂಚಿಕೊಳ್ಳಲು ವೇದಿಕೆ. ಸುಳ್ಳು ಸುದ್ದಿಗಳ ಹರಿದಾಟ. ಜೀವ ಬೆದರಿಕೆಗಳ ತುಣುಕುಗಳ ವಿಡಿಯೋ, ಸಂದೇಶ. ವ್ಯಕ್ತಿ ಮಾನಹಾನಿ, ಧರ್ಮ ನಿಂದನೆ, ಸಮುದಾಯದ ಟೀಕೆಗಳಿಗೂ ದಾರಿಯಾಗಿದೆ.
ಸಮಾಜದ ಸುತ್ತಲೂ ನಡೆದ, ನಡೆಯುತ್ತಿರುವ ಮತ್ತು ನಡೆಯಲಿರುವ ಘಟನೆ, ಹೇಳಿಕೆ, ವಿದ್ಯಮಾನಗಳಿಗೆ ತಕ್ಷ ಣ ಪರ ಅಥವಾ ವಿರೋಧಗಳಿಗೂ ಧ್ವನಿಯೆತ್ತುವ ಮುಕ್ತ ಮಾಧ್ಯಮವಾಗಿದೆ.
ನಿತ್ಯದ ಬದುಕಿನಲ್ಲಿ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಟ್ವಿಟ್ಟರ್, ಯೂಟ್ಯೂಬ್, ವಾಟ್ಸ್‌ಆ್ಯಪ್, ಟಿಕ್ಟಾಕ್ ನಂತಹ ಜನಪ್ರಿಯ ಸೋಷಿಯಲ್ ಮೀಡಿಯಾಗಳು ಯುವಕರು ಇವುಗಳನ್ನು ಬಿಟ್ಟು ದೂರ ಉಳಿಯಲು ಸಾಧ್ಯವಿಲ್ಲ ಎನ್ನುವ ಮಟ್ಟಕ್ಕೆ ಬೆಳೆದು ಬಿಟ್ಟಿವೆ. ಈ ಶತಮಾನದಲ್ಲಿ ತಂತ್ರಜ್ಞಾನದ ಬಹುದೊಡ್ಡ ಕೊಡುಗೆಯಾದ ಸೋಷಿಯಲ್ ಮೀಡಿಯಾ ಬಳಸುವ ಭಾರತೀಯರ ಸಂಖ್ಯೆ ಇಲ್ಲಿದೆ.