ETV Bharat / business

ಸರಕು ಸಾಗಣೆಯಲ್ಲಿ ಅಧಿಪತ್ಯ ಸ್ಥಾಪಿಸಲು ರಣತಂತ್ರ ಹೆಣೆದ ರೈಲ್ವೆ! - ಭಾರತೀಯ ರೈಲ್ವೆ

ರೈಲ್ವೆ ಸರಕು ಸಾಗಣೆ ವ್ಯವಹಾರದ ಬಹುಪಾಲು ಕಲ್ಲಿದ್ದಲು, ಕಬ್ಬಿಣ ಮತ್ತು ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಆಹಾರ ಧಾನ್ಯಗಳು, ರಸಗೊಬ್ಬರ ಮತ್ತು ಪಾತ್ರೆ ಸೇರಿದಂತೆ ಉಕ್ಕಿನ ಕಚ್ಚಾ ವಸ್ತುಗಳನ್ನು ಸಾಗಿಸಿಕೊಂಡು ಬರುತ್ತದೆ. ಒಂದು ಕಾಲದಲ್ಲಿ ರೈಲ್ವೆಯು ದೇಶದ ಸರಕು ಸಾಗಣೆಯ ಬಹುಪಾಲು ಪಾಲು ಹೊಂದಿತ್ತು. ಈಗ ಒಟ್ಟು ಸರಕು ವ್ಯವಹಾರದ ಮೂರನೇ ಒಂದು ಭಾಗದಷ್ಟು ಮಾತ್ರ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ.

Railway
ರೈಲ್ವೆ
author img

By

Published : Aug 21, 2020, 3:56 PM IST

ನವದೆಹಲಿ: ಭಾರತೀಯ ರೈಲ್ವೆಯು ಸರಕು ಸಾಗಣೆಯಲ್ಲಿ ತನ್ನ ಹಿಡಿತವನ್ನು ಮರುಳಿ ಪಡೆಯಲು ಬಹು ದೂರ, ಹೆಚ್ಚಿನ ಪ್ರಮಾಣದ, ಬಹು - ಆವರ್ತನೆಯ ಮತ್ತು ಅಲ್ಪದೂರದ ಮಾರ್ಗಗಳ ಸಮೀಕ್ಷೆಯನ್ನು ಪ್ರಾರಂಭಿಸಿದೆ.

ದೇಶದಲ್ಲಿ ಸರಕು ಸಾಗಣೆಯಲ್ಲಿ ಮುಂಚೂಣಿ ಸ್ಥಾನದಲ್ಲಿತ್ತು. ಇತ್ತೀಚಿನ ರಸ್ತೆ ಸಾರಿಗೆಯಲ್ಲಿನ ತ್ವರಿತಗತಿ ಬೆಳವಣಿಗೆ, ರೈಲ್ವೆ ಸರಕು ಸಾಗಣೆ ವಲಯಕ್ಕೆ ಅಲ್ಪ ಹಿನ್ನಡೆ ಆಗುವಂತೆ ಮಾಡಿದೆ. ತನ್ನ ಹಿಂದಿನ ಸ್ಥಾನವನ್ನು ಮರಳಿ ಪಡೆಯಲು ಈಗ ರೈಲ್ವೆ ಪ್ರಯತ್ನ ಆರಂಭಿಸಿದೆ.

ನಮ್ಮ ಸರಕು ವ್ಯವಹಾರ ಅಭಿವೃದ್ಧಿ ಘಟಕಗಳ ದಟ್ಟಣೆಯ ಪ್ರಮಾಣ ಅಧಿಕವಾಗಿರುವ ಅಲ್ಪ - ದೂರದ ಮಾರ್ಗಗಳ ಸಮೀಕ್ಷೆಯನ್ನು ಪ್ರಾರಂಭಿಸಿದ್ದೇವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಈಟಿವಿ ಭಾರತಗೆ ತಿಳಿಸಿದರು.

ರೈಲ್ವೆ ಸರಕು ಸಾಗಣೆ ವ್ಯವಹಾರದ ಬಹುಪಾಲು ಕಲ್ಲಿದ್ದಲು, ಕಬ್ಬಿಣ ಮತ್ತು ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಆಹಾರ ಧಾನ್ಯಗಳು, ರಸಗೊಬ್ಬರ ಮತ್ತು ಪಾತ್ರೆ ಸೇರಿದಂತೆ ಉಕ್ಕಿನ ಕಚ್ಚಾ ವಸ್ತುಗಳನ್ನು ಸಾಗಿಸಿಕೊಂಡು ಬರುತ್ತದೆ. ಒಂದು ಕಾಲದಲ್ಲಿ ರೈಲ್ವೆಯು ದೇಶದ ಸರಕು ಸಾಗಣೆಯ ಬಹುಪಾಲು ಪಾಲು ಹೊಂದಿತ್ತು. ಈಗ ಒಟ್ಟು ಸರಕು ವ್ಯವಹಾರದ ಮೂರನೇ ಒಂದು ಭಾಗದಷ್ಟು ಮಾತ್ರ ತನ್ನ ಹಿಡಿತದಲ್ಲಿ ಇರಿಸಿಕೊಂಡಿದೆ.

ಸರಕು ವ್ಯವಹಾರದಲ್ಲಿ ತನ್ನ ಮಾರುಕಟ್ಟೆ ಪಾಲು ಸುಧಾರಿಸಲು ಭಾರತೀಯ ರೈಲ್ವೆ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಕಾರ್ಯನಿರ್ವಹಿಸುತ್ತಿದೆ. ದೆಹಲಿ ಮತ್ತು ಮುಂಬೈ ನಡುವಿನ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಡಬ್ಲ್ಯುಡಿಎಫ್‌ಸಿ) ಮತ್ತು ಈಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ (ಇಡಿಎಫ್‌ಸಿ) ಯೋಜನೆಗಳು ಮುಂದಿನ ವರ್ಷ ಜೂನ್ ವೇಳೆಗೆ ಲುಧಿಯಾನ ಮತ್ತು ಕೋಲ್ಕತಾ ನಡುವೆ ಕಾರ್ಯಗತಗೊಳ್ಳಲಿವೆ.

ಇದರ ಜೊತೆಗೆ ಮುಂದಿನ 10 ವರ್ಷಗಳಲ್ಲಿ ಒಟ್ಟು 4,000 ಕಿ.ಮೀ. ಉದ್ದದ ಹೊಸ ಮೂರು ಸರಕು ಕಾರಿಡಾರ್‌ಗಳನ್ನು ನಿರ್ಮಿಸಲಿದೆ. ಈ ಸರಕು ಕಾರಿಡಾರ್‌ಗಳು ಸಾರ್ವಜನಿಕ - ಖಾಸಗಿ ಸಹಭಾಗಿತ್ವದಡಿ (ಪಿಪಿಪಿ) ಅಭಿವೃದ್ಧಿಪಡಿಸಲಾಗುವುದು. ರೈಲ್ವೆ ತನ್ನ ರೋರೊ ಸೇವೆಯನ್ನು ಹೆಚ್ಚು ಪರಿಣಾಮಕಾರಿ ಆಗಿಸಲು ತನ್ನ ವ್ಯಾಗನ್‌ಗಳಿಗೆ ಅಲ್ಪ-ದೂರದ ಹೆಚ್ಚಿನ-ಪ್ರಮಾಣದ ವ್ಯವಹಾರ ನಡೆಸಲು ಪ್ರಯತ್ನಿಸುತ್ತಿದೆ. ರೈಲ್ವೆ ಕೆಲವು ಕ್ಲಸ್ಟರ್‌ಗಳಲ್ಲಿ ರೋಲ್-ಆನ್ ಮತ್ತು ರೋಲ್-ಆಫ್ (ರೋರೊ) ಸೇವೆಯನ್ನು ಸಹ ಆರಂಭಿಸಿದೆ.

ನಾವು ಟ್ರಕ್‌ಗಳನ್ನು ಲೋಡ್ ಮಾಡುವ ಬದಲು ನಮ್ಮ ರೋಲ್-ಆನ್ ರೋಲ್-ಆಫ್ ಸೇವೆಗಳಿಗೆ ಕಂಟೇನರ್ ಆಧಾರಿತ ಸರಕು ಸಾಗಲು ಪ್ರಯತ್ನಿಸುತ್ತಿದ್ದೇವೆ. ಈ ಬಗ್ಗೆ ಟ್ರಕ್ ಆಪರೇಟರ್‌ಗಳ ಜತೆ ಮಾತನಾಡುತ್ತಿದ್ದೇವೆ. ಅವರು ಕಂಟೇನರ್ ಆಧಾರಿತ ಮಾದರಿಗೆ ಬದಲಾಗಬಹುದು ಎನ್ನುತ್ತಾರೆ ವಿಕೆ ಯಾದವ್.

-ಕೃಷ್ಣಾನಂದ ತ್ರಿಪಾಠಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.