ETV Bharat / business

ಜಾಗತಿಕ ಸಾಂಕ್ರಾಮಿಕ ರೋಗ ಕೊರೊನಾ ಅಂತ್ಯದ ಭವಿಷ್ಯ ನುಡಿದ ಬಿಲ್​ ಗೇಟ್ಸ್

author img

By

Published : Mar 27, 2021, 4:23 PM IST

ಸಾಂಕ್ರಾಮಿಕ ರೋಗವು ನಂಬಲಾಗದ ದುರಂತ ಎಂದ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಲೋಕೋಪಕಾರಿ ಗೇಟ್ಸ್​, ವೈರಸ್ ಅನ್ನು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಹತೋಟಿಗೆ ತರಬಹುದು. ಕೋವಿಡ್ -19 ಲಸಿಕೆಗಳಿಗೆ ಧನ್ಯವಾದಗಳು, 2022ರ ಅಂತ್ಯದ ವೇಳೆಗೆ ಜಗತ್ತು ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.

Bill Gates
Bill Gates

ವಾರ್ಸಾ: ಕೋವಿಡ್​-19 ಸಾಂಕ್ರಾಮಿಕ ರೋಗ ನಿವಾರಣೆಯಾಗಿ 2022ರ ಅಂತ್ಯದ ವೇಳೆಗೆ ಜಗತ್ತು ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬರುತ್ತದೆ ಎಂದು ಬಿಲ್ ಗೇಟ್ಸ್ ಭವಿಷ್ಯ ನುಡಿದಿದ್ದಾರೆ.

ಸಾಂಕ್ರಾಮಿಕ ರೋಗವು ನಂಬಲಾಗದ ದುರಂತ ಎಂದ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಮತ್ತು ಲೋಕೋಪಕಾರಿ ಗೇಟ್ಸ್​, ವೈರಸ್ ಅನ್ನು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಹತೋಟಿಗೆ ತರಬಹುದು. ಕೋವಿಡ್ -19 ಲಸಿಕೆಗಳಿಗೆ ಧನ್ಯವಾದಗಳು, 2022ರ ಅಂತ್ಯದ ವೇಳೆಗೆ ಜಗತ್ತು ಸಾಮಾನ್ಯ ಸ್ಥಿತಿಗೆ ಬರಲಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ಯಾನ್ ಕಾರ್ಡ್-ಆಧಾರ್‌ ಲಿಂಕ್​ ಮಾಡಲು ಐದೇ ದಿನ ಬಾಕಿ

ಇದು ನಂಬಲಾಗದ ದುರಂತ. ಲಸಿಕೆಗಳ ಚಾಲನೆಯಲ್ಲಿ ಇರುವುದು ಮಾತ್ರ ಒಂದೊಳ್ಳೆಯ ಸುದ್ದಿ. 2022ರ ಅಂತ್ಯದ ವೇಳೆಗೆ ನಾವು ಮೂಲತಃ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಬೇಕು ಎಂದರು.

2014ರಲ್ಲಿ ಮೈಕ್ರೋಸಾಫ್ಟ್​ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಕೋಟ್ಯಾಧಿಪತಿ ಗೇಟ್ಸ್, ತನ್ನ ಲೋಕೋಪಕಾರಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಮೂಲಕ ಕೋವಿಡ್​-19 ಸಾಂಕ್ರಾಮಿಕ ರೋಗದ ಜಾಗತಿಕ ಪ್ರತಿಕ್ರಿಯೆಗೆ ಕನಿಷ್ಠ 1.75 ಶತಕೋಟಿ ಡಾಲರ್​ ನೀಡಿದರು. ಲಸಿಕೆಗಳ ಅಭಿವೃದ್ಧಿ, ರೋಗನಿರ್ಣಯ ಮತ್ತು ಸಂಭಾವ್ಯ ಚಿಕಿತ್ಸೆಗಳ ಕೆಲವು ತಯಾರಕರಿಗೆ ಬೆಂಬಲ ನೀಡುವುದು ಈ ನಿಧಿಯ ಉದ್ದೇಶವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.