ETV Bharat / business

'ಕ್ಯಾಶ್​ ಲೆಸ್​' ದುನಿಯಾ ಆಯ್ತು, ಇನ್ಮುಂದೆ 'ಡೆಬಿಟ್​ ಕಾರ್ಡ್​ ಲೆಸ್'​ ಜಮಾನ!

author img

By

Published : Aug 20, 2019, 8:29 PM IST

ವಾರ್ಷಿಕ ಫೈಬ್ಯಾಕ್​ ಸಮಾವೇಶ ಉದ್ದೇಶಿಸಿ ಮಾತನಾಡಿದ ಎಸ್​ಬಿಐ ಮುಖ್ಯಸ್ಥ ರಜನೀಶ್​ ಕುಮಾರ್ ಅವರು, ಎಸ್​ಬಿಐ ಗ್ರಾಹಕರು ಅತಿಯಾಗಿ ಡೆಬಿಟ್​ ಕಾರ್ಡ್​ಗಳನ್ನು ಯಥೇಚ್ಛವಾಗಿ ಹೊಂದಿರುವ ಹೊರತಾಗಿಯೂ ಬ್ಯಾಂಕ್​, ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಡೆಬಿಟ್​ ಕಾರ್ಡ್​ ವ್ಯವಸ್ಥೆಯಲ್ಲಿ ಅಂತ್ಯದ ಆರಂಭ ಎನ್ನಬಹುದು ಎಂದು ಹೇಳಿದರು.

ಸಾಂದರ್ಭಿಕ ಚಿತ್ರ

ಮುಂಬೈ: ಡಿಜಿಟಲ್​ ಪಾವತಿಗಳಿಗೆ ಹೆಚ್ಚಿನ ಮಹತ್ವ ನೀಡಲು ಬ್ಯಾಂಕಿಂಗ್ ವ್ಯವಸ್ಥೆಯಿಂದ ಡಿಜಿಟಲ್​ ಕಾರ್ಡ್​ಗಳನ್ನು ದೂರಗೊಳಿಸುವ ಉದ್ದೇಶವಿದೆ ಎಂದು ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ (ಎಸ್​ಬಿಐ) ಮುಖ್ಯಸ್ಥ ರಜನೀಶ್​ ಕುಮಾರ್ ಅವರು ಡೆಬಿಟ್​, ಕ್ರೆಡಿಟ್​ ಕಾರ್ಡ್​ಗಳ ವಿದಾಯದ ಮುನ್ಸೂಚನೆ ನೀಡಿದ್ದಾರೆ.

ವಾರ್ಷಿಕ ಫೈಬ್ಯಾಕ್​ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಎಸ್​ಬಿಐ ಗ್ರಾಹಕರು ಅತಿಯಾಗಿ ಡೆಬಿಟ್​ ಕಾರ್ಡ್​ಗಳನ್ನು ಯಥೇಚ್ಛವಾಗಿ ಹೊಂದಿರುವ ಹೊರತಾಗಿಯೂ ಬ್ಯಾಂಕ್​, ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ಡೆಬಿಟ್​ ಕಾರ್ಡ್​ ವ್ಯವಸ್ಥೆಯಲ್ಲಿ ಅಂತ್ಯದ ಆರಂಭ ಎನ್ನಬಹುದು ಎಂದು ಹೇಳಿದರು.

ಡೆಬಿಟ್​ ಕಾರ್ಡ್​ಗಳಿಗೆ ಅಂತ್ಯವಾಡುವುದು ನಮ್ಮ ಬಯಕೆ. ಇದನ್ನು ಖಂಡಿತವಾಗಿ ಮಾಡುತ್ತೇವೆ ಎಂಬ ಭರವಸೆ ಇದೆ. ದೇಶಾದ್ಯಂತ ಸುಮಾರು 90 ಕೋಟಿ ಡೆಬಿಟ್​ ಮತ್ತು 3 ಕೋಟಿ ಕ್ರೆಡಿಟ್​ ಕಾರ್ಡ್​ಗಳಿವೆ. ಯೋನೋ ಪ್ಲಾಟ್​ಫಾರ್ಮ್​​ನಂತಹ ಅಡ್ವಾನ್ಸಡ್​ ಡಿಜಿಟಲ್​ ಸಲ್ಯೂಶನ್ಸ್​ ಮುಖೇನ ಡೆಬಿಟ್​​ ಕಾರ್ಡ್​ ಮುಕ್ತ ದೇಶ ಸಾಧ್ಯ ಎಂದು ರಜನೀಶ್​ ಹೇಳಿದರು.

ಯೋನೋ ಮೂಲಕ ಎಟಿಎಂಗಳಿಂದ ಹಣ ಸ್ವೀಕರಿಸಬಹುದು. ಕಾರ್ಡ್​ ಇಲ್ಲದೆಯೇ ನಾನಾ ಕಡೆ ಖರೀದಿಗಳಿಗೆ ಪಾವತಿಸಬಹುದು. ಈಗಾಗಲೇ 68,000 ಯೋನೋ ಕ್ಯಾಶ್​ ಪಾಯಿಂಟ್​ ಸ್ಥಾಪಿಸಲಾಗಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಇಂತಹ 10 ಲಕ್ಷ ಪಾಯಿಂಟ್​ಗಳು ತಲೆ ಎತ್ತಲಿವೆ ಎಂದು ತಿಳಿಸಿದರು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.