ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವೆಚ್ಚ ಕಡಿತ, ಸಮರ್ಥನೀಯ ಮತ್ತು ಕಾರ್ಯಪಡೆಯ ಮರುಕೌಶಲ್ಯ ಮತ್ತು ಸಿಬ್ಬಂದಿ ಉತ್ಪಾದಕತೆ ಸುಧಾರಣೆ ತಂದುಕೊಳ್ಳಲಿದೆ. ಕಚೇರಿಗಳ ಆಡಳಿತದಿಂದ ಮಾರಾಟದ ಮರು ನಿಯೋಜನೆಯ ಮೂಲಕ ವ್ಯವಹಾರದ ಮೇಲೆ ಕೋವಿಡ್-19 ಬೀರಿದ ಪ್ರಭಾವವನ್ನು ತಗ್ಗಿಸಲಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ತಮ್ಮ ಷೇರುದಾರರಿಗೆ ಅಭಯ ನೀಡಿದರು.
ಭಾರತದ ಅತಿ ದೊಡ್ಡ ಸಾಲದಾತ ಬ್ಯಾಂಕ್ ಎಸ್‌ಬಿಐ, ವೆಚ್ಚ ಆಪ್ಟಿಮೈಸೇಷನ್ ಮೂಲಕ 1,000 ಕೋಟಿ ರೂ. ಉಳಿಸಲಿದೆ ಎಂದು ಸಾಂಕ್ರಾಮಿಕ ರೋಗದಿಂದಾಗಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆದ ಬ್ಯಾಂಕಿನ 65ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಷೇರುದಾರರಿಗೆ ತಿಳಿಸಿದರು.
ನಮ್ಮ ಸಾಲಗಾರ ಗ್ರಾಹಕರಿಗೆ ನೆರವಾಗಲು ಮತ್ತು ಆಸ್ತಿ ಗುಣಮಟ್ಟ ಕಾಪಾಡಿಕೊಳ್ಳಲು ಬ್ಯಾಂಕ್ ಉದಯೋನ್ಮುಖ ಒತ್ತಡದ ಬಗ್ಗೆ ನಿರಂತರ ಜಾಗರೂಕತೆ ವಹಿಸುತ್ತದೆ. ಇದಕ್ಕಾಗಿ ಪೂರ್ವಭಾವಿ ಕ್ರಮ ತೆಗೆದುಕೊಳ್ಳುತ್ತದೆ. ಎಸ್‌ಬಿಐ ಅಧ್ಯಕ್ಷರ ಮೂರು ವರ್ಷಗಳ ಅವಧಿ ಈ ವರ್ಷಾಂತ್ಯದಲ್ಲಿ ಕೊನೆಗೊಳ್ಳುತ್ತದೆ. ಕೋವಿಡ್-19ರ ಕಾರಣದಿಂದಾಗಿ 2021ರ ಹಣಕಾಸು ವರ್ಷವು ಸವಾಲಿನ ವರ್ಷವಾಗಲಿದೆ. ಆದರೆ, ಎಸ್‌ಬಿಐನ ಬಲವಾದ ಹೊಣೆಗಾರಿಕೆ ಫ್ರ್ಯಾಂಚೈಸ್ 44 ಕೋಟಿಗೂ ಹೆಚ್ಚು ಗ್ರಾಹಕರ ನೆಲೆ ಹೊಂದಿದೆ. ವೈವಿಧ್ಯಮಯ ಸಾಲ ಬಂಡವಾಳ, ಡಿಜಿಟಲ್ ಬ್ಯಾಂಕಿಂಗ್ ಚಾನೆಲ್ ಈಗಿನ ಒತ್ತಡವನ್ನು ನಿಭಾಯಿಸಲು ಸಹಾಯಕ್ಕೆ ಬರಲಿದೆ ಎಂದರು.
ಅನುಷ್ಠಾನದಲ್ಲಿರುವ ಎಲ್ಲಾ ಯೋಜನೆಗಳ ಮೇಲ್ವಿಚಾರಣೆಯನ್ನು ಬ್ಯಾಂಕ್ ಚುರುಕುಗೊಳಿಸಿದೆ. ಎಸ್‌ಬಿಐ ತನ್ನ ಯೋನೊ ಡಿಜಿಟಲ್ ಬ್ಯಾಂಕಿಂಗ್ ಆ್ಯಪ್ ಅನ್ನು ಮತ್ತಷ್ಟು ವಿಸ್ತರಣೆ ಮಾಡಲಿದೆ. ಮುಂದಿನ ಆರು ತಿಂಗಳಲ್ಲಿ ಬಳಕೆದಾರರ ನೋಂದಣಿ ದ್ವಿಗುಣಗೊಳಿಸುವ ಗುರಿ ಹೊಂದಿದೆ. ಎಂಡ್ ಟು ಎಂಡ್ ಗೃಹ ಸಾಲ, ಪೂರ್ವ ಅನುಮೋದಿತ ಕಾರು ಸಾಲ ಮತ್ತು ವೈಯಕ್ತಿಕ ಚಿನ್ನದ ಸಾಲಗಳನ್ನು ಹೊಸ ಸೇರ್ಪಡೆ ಮಾಡಲಾಗಿದೆ ಎಂದು ಕುಮಾರ್ ಹೇಳಿದರು.
ಬ್ಯಾಂಕ್ 2020ರ ಹಣಕಾಸು ವರ್ಷದಲ್ಲಿ ಶೇ 11.34ರಷ್ಟು ಠೇವಣಿ ಬೆಳವಣಿಗೆಯು 32.42 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಹಿಂದಿನ ವರ್ಷದ 29.11 ಲಕ್ಷ ಕೋಟಿ ರೂ.ಗಳಿಂದ ತನ್ನ ಮಾರುಕಟ್ಟೆ ಪಾಲನ್ನು 46 ಬೇಸಿಸ್ ಪಾಯಿಂಟ್ಗಳಿಂದ ಶೇ 22.84ರಷ್ಟು ಹೆಚ್ಚಿಸಿದೆ. 2020ರ ಹಣಕಾಸು ವರ್ಷದಲ್ಲಿ ಒಟ್ಟು ಸಾಲ ಶೇ 5.64ರಷ್ಟು ಹೆಚ್ಚಳವಾಗಿ 24.23 ಲಕ್ಷ ಕೋಟಿ ರೂ.ಗೆ ತಲುಪಿದೆ. ಇದು ಹಿಂದಿನ ವರ್ಷದ 22.93 ಲಕ್ಷ ಕೋಟಿ ರೂ.ಗಳಿಂದ ವೈಯಕ್ತಿಕ ಸಾಲಗಳಲ್ಲಿ ಶೇ 15.40ರಷ್ಟು ಬೆಳವಣಿಗೆಯಾಗಿದೆ.