ನವದೆಹಲಿ: ಕೋವಿಡ್ -19 ವಿರುದ್ಧದ ಹೋರಾಟದಲ್ಲಿ ದೇಶದ ಅತಿದೊಡ್ಡ ಸಾಲಗಾರರಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ಸುಮಾರು 2,56,000 ಉದ್ಯೋಗಿಗಳು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಎರಡು ದಿನಗಳ ವೇತನವನ್ನು ನೀಡಲು ನಿರ್ಧರಿಸಿದ್ದಾರೆ.
ಎಸ್‌ಬಿಐ ನೌಕರರ ಈ ಸಾಮೂಹಿಕ ಪ್ರಯತ್ನದಿಂದ ಕರೋನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಚಿಸಲಾದ ಪಿಎಂ ಕೇರ್ಸ್ ನಿಧಿಗೆ 100 ಕೋಟಿ ರೂ. ನೀಡಿದೆ.
ಕಳೆದ ವಾರ ಎಸ್‌ಬಿಐ ತನ್ನ ಸಿಎಸ್‌ಆರ್ ಚಟುವಟಿಕೆಗಳ ಭಾಗವಾಗಿ ಕೋವಿಡ್-19 ವಿರುದ್ಧ ಹೋರಾಡಲು 2019-20ನೇ ಸಾಲಿನ ವಾರ್ಷಿಕ ಲಾಭದ ಶೇ 0.25ರಷ್ಟು ನೀಡುವುದಾಗಿ ಹೇಳಿತ್ತು.
ನಮ್ಮ ಎಲ್ಲಾ ನೌಕರರು ತಮ್ಮ ಎರಡು ದಿನಗಳ ವೇತನವನ್ನು ಪಿಎಂ ಕೇರ್ಸ್ ಫಂಡ್‌ಗೆ ನೀಡಲು ಸ್ವಯಂಪ್ರೇರಣೆಯಿಂದ ಮುಂದಾಗಿದ್ದಾರೆ. ಇದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಹೆಮ್ಮೆಯ ಸಂಗತಿಯಾಗಿದೆ. ನಾವೆಲ್ಲರೂ ಒಗ್ಗೂಡಿ ಹೋರಾಡಬೇಕಾದ ಸಮಯ ಇದು. ಒಗ್ಗಟ್ಟಿನ ಪ್ರಯತ್ನಗಳೊಂದಿಗೆ ಕೋವಿಡ್ -19 ಸಾಂಕ್ರಾಮಿಕ ರೋಗ ಹತ್ತಿಕಬೇಕಿದೆ. ಸರ್ಕಾರದ ಎಲ್ಲ ನಿರ್ಧಾರಗಳಿಗೆ ಎಸ್‌ಬಿಐ ಬೆಂಬಲಿಸಲಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದರು.