ETV Bharat / business

SBI ಗ್ರಾಹಕರಿಗೆ ಸಿಹಿ ಸುದ್ದಿ: ಗೃಹ ಸಾಲ ಬಡ್ಡಿದರ ಕಡಿತ, ಸಂಸ್ಕರಣಾ ಶುಲ್ಕವೂ ಮನ್ನಾ! - ಎಸ್​ಬಿಐ ಸಾಲದ ಬಡ್ಡಿ

ಉತ್ತಮ ಮರುಪಾವತಿ ಕಾಯ್ದುಕೊಳ್ಳುವ ಗ್ರಾಹಕರಿಗೆ ಉತ್ತಮ ದರ ವಿಸ್ತರಿಸಲಾಗುವುದು. 75 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಶೇ 6.7ರಷ್ಟು ಬಡ್ಡಿ ಮತ್ತು 75 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳಿಗೆ ಶೇ 6.75ರಿಂದ ಬಡ್ಡಿದರ ಪ್ರಾರಂಭವಾಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

SBI
SBI
author img

By

Published : Mar 1, 2021, 3:01 PM IST

ಮುಂಬೈ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಗೃಹ ಸಾಲದ ಮೇಲೆ 70 ಬೇಸಿಸ್ ಪಾಯಿಂಟ್‌ಗಳ ಬಡ್ಡಿ ರಿಯಾಯತಿ ಕಡಿಮೆ ಮಾಡುವ ಮೂಲಕ ಬಡ್ಡಿದರಗಳನ್ನು ಶೇ 6.7ರಿಂದ ಪ್ರಾರಂಭಿಸಿದೆ.

ಮಾರ್ಚ್ 31ರ ತನಕದ ಸಂಸ್ಕರಣಾ ಶುಲ್ಕದ ಮೇಲೆ ಶೇ 100ರಷ್ಟು ಮನ್ನಾ ಆಫರ್​ ನೀಡುವುದಾಗಿ ದೇಶದ ಅತಿದೊಡ್ಡ ಸಾಲದಾತ ತಿಳಿಸಿದೆ. ಬಡ್ಡಿ ರಿಯಾಯತಿ ಸಾಲದ ಮೊತ್ತ ಮತ್ತು ಸಾಲಗಾರನ ಸಿಬಿಲ್ ಸ್ಕೋರ್ ಆಧರಿಸಿರುತ್ತದೆ.

ಉತ್ತಮ ಮರುಪಾವತಿ ಕಾಯ್ದುಕೊಳ್ಳುವ ಗ್ರಾಹಕರಿಗೆ ಉತ್ತಮ ದರ ವಿಸ್ತರಿಸಲಾಗುವುದು. 75 ಲಕ್ಷ ರೂ.ವರೆಗಿನ ಗೃಹ ಸಾಲಕ್ಕೆ ಶೇ 6.7ರಷ್ಟು ಬಡ್ಡಿ ಮತ್ತು 75 ಲಕ್ಷ ರೂ.ಗಿಂತ ಹೆಚ್ಚಿನ ಸಾಲಗಳಿಗೆ ಶೇ 6.75ರಿಂದ ಬಡ್ಡಿದರ ಪ್ರಾರಂಭವಾಗುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಮಿಂಚಿನ ವೇಗದಲ್ಲಿ ಮುನ್ನುಗುತ್ತಿರುವ ವಿಶ್ವದ 2ನೇ ಶ್ರೀಮಂತ ಎಲೋನ್​ಗೆ ಮುಖೇಶ್ ಅಂಬಾನಿ ಬಿಗ್ ಬ್ರೇಕ್!

ಎಸ್‌ಬಿಐ, ಗೃಹ ಹಣಕಾಸು ಕ್ಷೇತ್ರದಲ್ಲಿ ಮಾರುಕಟ್ಟೆ ಲೀಡರ್ ಆಗಿದ್ದು, ಗ್ರಾಹಕರ ಭಾವನೆಗಳನ್ನು ಹೆಚ್ಚಿಸುವಲ್ಲಿ ಮಾಲೀಕತ್ವ ತೆಗೆದುಕೊಳ್ಳುತ್ತಿದೆ. ಸಮಾನ ಕೊಡುಗೆಯ ಮಾಸಿಕ ಕಂತುಗಳು ಕಡಿಮೆ ಆಗುವುದರಿಂದ ಗ್ರಾಹಕರ ಕೈಗೆಟುಕುವಿಕೆಯು ಕೊಡುಗೆಗಳು ಅಗಾಧವಾಗಿ ಹೆಚ್ಚಾಗುತ್ತದೆ ಎಂದಿದೆ.

5 ಬೇಸಿಸ್ ಪಾಯಿಂಟ್‌ಗಳ ಹೆಚ್ಚುವರಿ ಬಡ್ಡಿ ರಿಯಾಯಿತಿ ಪಡೆಯಲು ಗ್ರಾಹಕರು ಯೋನೊ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದು. ಅಂತಾರಾಷ್ಟ್ರೀಯ ಮಹಿಳಾ ದಿನದ ಮುನ್ನಾ ಮಹಿಳಾ ಸಾಲಗಾರರಿಗೆ ವಿಶೇಷ 5 ಬೇಸಿಸ್ ಪಾಯಿಂಟ್ ರಿಯಾಯಿತಿ ನೀಡಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.