ಮುಂಬೈ: ಭಾರತೀಯ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), 2019ರ ಹಣಕಾಸು ವರ್ಷದಲ್ಲಿ ವಸೂಲಾಗದ ಸಾಲದ ಮೊತ್ತ ₹ 11,932 ಕೋಟಿಯಷ್ಟಿದೆ.
ವಸೂಲಾಗದ ಸಾಲದ ಜೊತೆಗೆ ₹ 12,036 ಕೋಟಿಯಷ್ಟು ಅನುತ್ಪಾದಕ ಆಸ್ತಿ (ಎನ್‌ಪಿಎ) ಇದೆ. ಈ ವರ್ಷದಲ್ಲಿ ₹ 862 ಕೋಟಿಯಷ್ಟು ಆದಾಯದ ಇದ್ದರೇ ₹ 6,968 ಕೋಟಿಯಷ್ಟು ನಿವ್ವಳ ನಷ್ಟ ಅನುಭವಿಸಿದೆ ಎಂದು ಎಸ್ಬಿಐನ ತನ್ನ ವಾರ್ಷಿಕ ಫೈಲಿಂಗ್ನಲ್ಲಿ ತಿಳಿಸಿದೆ.
2020ರ ಹಣಕಾಸಿನ ವರ್ಷದ 3ನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ಎನ್‌ಪಿಎ ₹ 3,143 ಕೋಟಿ ಇರಲಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿಯು (ಸೆಬಿ) ಅಕ್ಟೋಬರ್ನಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್ಗಳು ಬ್ಯಾಂಕಿಂಗ್ ನಿಯಂತ್ರಕರಿಂದದ ಅಂತಿಮ ವರದಿ ಸ್ವೀಕರಿಸಿದ ಒಂದು ದಿನದೊಳಗೆ ಆರ್‌ಬಿಐನ ಮೌಲ್ಯಮಾಪನದ ವಸೂಲಾಗದ ಸಾಲದ ಪ್ರಮಾಣ ಬಹಿರಂಗಪಡಿಸುವಂತೆ ಕೇಳಿತ್ತು. ಇದರ ಜೊತೆಗೆ ಆಸ್ತಿ ಗುಣಮಟ್ಟದ ಬಹಿರಂಗಪಡಿಸುವಿಕೆಯ ಮಾನದಂಡಗಳನ್ನು ಬಿಗಿಗೊಳಿಸಿದೆ.