ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕಿಂಗ್ ದೈತ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಿಹಿ ಸಮಾಚಾರ ನೀಡಿದೆ.
ಗೃಹ ಸಾಲದ ಮೇಲಿನ ಬಡ್ಡಿದರಗಳನ್ನು ಕಡಿತಗೊಳಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಶೇ 6.70ರಿಂದ ಬಡ್ಡಿದರಗಳು ಪ್ರಾರಂಭವಾಗಲಿವೆ. ಮಹಿಳಾ ಸಾಲಗಾರರಿಗೆ ಇನ್ನೂ ಐದು ಬೇಸಿಸ್ ಪಾಯಿಂಟ್‌ಗಳವರೆಗೆ ರಿಯಾಯಿತಿ ನೀಡಲಾಗುವುದು ಎಂದಿದೆ.
ಗ್ರಾಹಕರು ಯೋನೊ ಅಪ್ಲಿಕೇಷನ್‌ನಿಂದ ಗೃಹ ಸಾಲ ಪಡೆಯಬಹುದು. ಬಡ್ಡಿದರವನ್ನು ಮತ್ತೊಂದು 5 ಬೇಸಿಸ್ ಪಾಯಿಂಟ್‌ಗಳಿಂದ ಕಡಿಮೆ ಮಾಡಲಾಗುತ್ತದೆ. ಇಂದಿನಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ಹೇಳಿದೆ.
ಎಸ್‌ಬಿಐ ಗೃಹ ಸಾಲ ಬಡ್ಡಿದರಗಳು 30 ಲಕ್ಷ ರೂ.ಗೆ ಶೇ 6.70ರಷ್ಟು, 30 ಲಕ್ಷದಿಂದ 75 ಲಕ್ಷ ರೂ.ವರೆಗಿನ ಸಾಲಗಳಿಗೆ ಶೇ 6.95 ಮತ್ತು 75 ಲಕ್ಷ ರೂ.ಗಿಂತ ಹೆಚ್ಚಿನ ಸಾಲಕ್ಕೆ ಶೇ 7.05ರಷ್ಟು ಬಡ್ಡಿದರ ಇದೆ ಎಂದು ಬ್ಯಾಂಕ್ ತಿಳಿಸಿದೆ.
ಫೆಬ್ರವರಿಯಲ್ಲಿ ಮಾತ್ರ ಬ್ಯಾಂಕ್ ಗೃಹ ಸಾಲ ಬಂಡವಾಳ 5 ಲಕ್ಷ ಕೋಟಿ ರೂ.ಯಷ್ಟಾಗಿದೆ. ಮುಂದಿನ ಐದು ವರ್ಷಗಳಲ್ಲಿ ಇದನ್ನು 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸುವ ಗುರಿ ಹೊಂದಿದೆ. 2024ರ ಆರ್ಥಿಕ ವರ್ಷದ ವೇಳೆಗೆ 7 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯಿದೆ ಎಂದಿದೆ.