ETV Bharat / business

SBI ಗ್ರಾಹಕರ ಗಮನಕ್ಕೆ: ನಿಮಗೆ ಈ ಮೆಸೇಜ್ ಬಂದ್ರೆ ಬ್ಯಾಂಕ್​ಗೆ ತಿಳಿಸಿ! - SBI latest news

ಬಳಕೆದಾರರು ಎಟಿಎಂಗೆ ಹೋಗಿ ತಮ್ಮ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಇಚ್ಛಿಸಿದರೆ ಎಸ್‌ಬಿಐ ಎಸ್‌ಎಂಎಸ್ ಕಳುಹಿಸುವ ಮೂಲಕ ಎಚ್ಚರಿಸಲಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಹೆಚ್ಚುತ್ತಿರುವ ಎಟಿಎಂ ವಂಚನೆಗಳನ್ನು ತಡೆಯಲು ಈ ಸೌಲಭ್ಯ ನೆರವಾಗಲಿದೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿ ವಿನಂತಿ ಮಾಡುತ್ತಿದೆ.

SBI
ಎಟಿಎಂ
author img

By

Published : Sep 2, 2020, 3:12 PM IST

ನವದೆಹಲಿ: ಎಟಿಎಂ ಸಂಬಂಧಿತ ವಂಚನೆಗಳು ಹೆಚ್ಚುತ್ತಿರುವುದನ್ನು ಗಂಭೀರವಾಗಿ ಗಣನೆಗೆ ತೆಗೆದುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ತನ್ನ ಗ್ರಾಹಕರ ಸುರಕ್ಷತೆಗೆ ಹೊಸ ವೈಶಿಷ್ಟ್ಯ ಪರಿಚಯಿಸಿದೆ. ಬಳಕೆದಾರರು ಎಟಿಎಂಗೆ ಹೋಗಿ ತಮ್ಮ ಬ್ಯಾಲೆನ್ಸ್ ಅಥವಾ ಮಿನಿ ಸ್ಟೇಟ್‌ಮೆಂಟ್ ಪರಿಶೀಲಿಸಲು ಇಚ್ಛಿಸಿದರೆ ಎಸ್‌ಬಿಐ ಎಸ್‌ಎಂಎಸ್ ಕಳುಹಿಸುವ ಮೂಲಕ ಎಚ್ಚರಿಸಲಿದೆ. ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ಹೆಚ್ಚುತ್ತಿರುವ ಎಟಿಎಂ ವಂಚನೆಗಳನ್ನು ತಡೆಯಲು ಈ ಸೌಲಭ್ಯ ನೆರವಾಗಲಿದೆ.

ಬ್ಯಾಂಕ್ ತನ್ನ ಗ್ರಾಹಕರಿಗೆ ಜಾಗರೂಕರಾಗಿರುವಂತೆ ಎಚ್ಚರಿಕೆ ನೀಡಿ ವಿನಂತಿ ಮಾಡುತ್ತಿದೆ. ಸಮತೋಲಿತ ವಿಚಾರಣೆ ಅಥವಾ ಮಿನಿ-ಸ್ಟೇಟ್‌ಮೆಂಟ್‌ಗೆ ಸಂಬಂಧಿಸಿದ ಎಸ್‌ಎಂಎಸ್ ಎಚ್ಚರಿಕೆಗಳನ್ನು ನಿರ್ಲಕ್ಷಿಸದಂತೆ ಸೂಚಿಸಿದೆ.

ಈಗ ನಾವು ಎಟಿಎಂಗಳ ಮೂಲಕ ಬ್ಯಾಲೆನ್ಸ್ ಎನ್‌ಕ್ವೈರಿ ಅಥವಾ ಮಿನಿ ಸ್ಟೇಟ್‌ಮೆಂಟ್‌ಗೆ ವಿನಂತಿ ಸ್ವೀಕರಿಸುವಾಗ, ನಾವು ಎಸ್‌ಎಂಎಸ್ ಕಳುಹಿಸುವ ಮೂಲಕ ನಮ್ಮ ಗ್ರಾಹಕರನ್ನು ಎಚ್ಚರಿಸುತ್ತೇವೆ. ಇದರಿಂದಾಗಿ ಅವರು ವಹಿವಾಟು ಪ್ರಾರಂಭಿಸದಿದ್ದರೆ ತಕ್ಷಣವೇ ಅವರ ಡೆಬಿಟ್ ಕಾರ್ಡ್ ನಿರ್ಬಂಧಿಸಬಹುದು ಎಂದು ದೇಶದ ಅತಿ ದೊಡ್ಡ ಸಾಲದಾತ ಬ್ಯಾಂಕ್​ ಟ್ವಿಟರ್​ ಮೂಲಕ ತಿಳಿಸಿದೆ.

ಎಸ್‌ಬಿಐ ತನ್ನ ಗ್ರಾಹಕರಿಗೆ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದು, ಬ್ಯಾಲೆನ್ಸ್, ಮಿನಿ ಸ್ಟೇಟ್ಮೆಂಟ್ ವಿನಂತಿಗಳ ಅಧಿಕೃತ ಬಳಕೆದಾರರು ಮಾಡಿರದಿದ್ದರೆ ತಕ್ಷಣವೇ ಬ್ಯಾಂಕ್​ಗೆ ತಿಳಿಸಬೇಕು. ಇದು ಹಣಕ್ಕಾಗಿ ನಿಮ್ಮ ಬ್ಯಾಂಕ್ ಖಾತೆ ಪರಿಶೀಲಿಸುವ ವಂಚನೆಯ ಪ್ರಯತ್ನ ಆಗಿರಬಹುದು. ತಕ್ಷಣವೇ ನಿಮ್ಮ ಕಾರ್ಡ್‌ ಫ್ರೀಜ್ ಮಾಡಲು ನಿಮ್ಮ ಬ್ಯಾಂಕ್‌ಗೆ ಮಾಹಿತಿ ನೀಡಿ ಎಂದು ಕೋರಿದೆ.

ಈ ಹಿಂದೆ ಎಸ್‌ಬಿಐ ತನ್ನ ಗ್ರಾಹಕರನ್ನು ಎಲ್ಲಾ ಎಸ್‌ಬಿಐ ಎಟಿಎಂಗಳಲ್ಲಿ ಅನಧಿಕೃತ ವಹಿವಾಟಿನಿಂದ ರಕ್ಷಿಸಲು ಕಾರ್ಡ್‌ಲೆಸ್ ನಗದು ಪಡೆಯುವ ಸೌಲಭ್ಯ ಪರಿಚಯಿಸಿತ್ತು. ಈ ಹೊಸ ಸೌಲಭ್ಯವು 2020ರ ಆರಂಭದಿಂದಲೂ ಸಕ್ರಿಯವಾಗಿದೆ. ಎಟಿಎಂ ಕಾರ್ಡ್​ದಾರರಿಗೆ ಒನ್ ಟೈಮ್ ಪಾಸ್‌ವರ್ಡ್ (ಒಟಿಪಿ) ಸಹಾಯದಿಂದ ಹಣ ಪಡೆಯಲು ಅನುವು ಮಾಡಿಕೊಡುತ್ತದೆ. ರಾತ್ರಿ 8ರಿಂದ ಬೆಳಿಗ್ಗೆ 8ರ ನಡುವೆ ₹ 10,000ಕ್ಕಿಂತ ಹೆಚ್ಚು ಹಣ ಪಡೆಯಲು ಎಸ್‌ಬಿಐ ಗ್ರಾಹಕರು ಡೆಬಿಟ್ ಕಾರ್ಡ್ ಪಿನ್ ಜೊತೆಗೆ ಒಟಿಪಿ ಒದಗಿಸಬೇಕಾಗುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.