ನವದೆಹಲಿ: ಸಾರ್ವಜನಿಕ ವಲಯದಲ್ಲಿನ ದೇಶದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಟಿಎಂ ವಿತ್ ಡ್ರಾ ಮಿತಿ ಸೇರಿದಂತೆ ಇತರ ಬ್ಯಾಂಕಿಂಗ್ ಸೇವೆಗಳ ಶುಲ್ಕವನ್ನು ಪರಿಷ್ಕರಿಸಿದೆ. ನೂತನ ಶುಲ್ಕ ದರವು ಅಕ್ಟೋಬರ್ನಿಂದ ಜಾರಿಗೆ ಬಂದಿದೆ.
* ಉಳಿತಾಯ ಖಾತೆದಾರರು ಮಾಸಿಕ 3 ಅಥವಾ ವಾರ್ಷಿಕ 36 ಬಾರಿ ಠೇವಣಿ ಇರಿಸುವುದರ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ. ಇದಕ್ಕೂ ಹೆಚ್ಚಿನ ಪ್ರತಿ ವಹಿವಾಟಿನ ಮೇಲೆ ₹ 50 + ಜಿಎಸ್ಟಿ ಶುಲ್ಕ ಒಳಗೊಂಡಿರುತ್ತಿದೆ.
* ಉಚಿತವಾಗಿ ತಿಂಗಳಿಗೆ ಎರಡು ಬಾರಿ ಅಥವಾ ವಾರ್ಷಿಕ 24 ಬಾರಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾದ ಶಾಖೆಗಳಿಂದ ಹಣ ವಿತ್ ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.
* ಎಸ್ಬಿಐ ಎಟಿಎಂಗಳಿಂದ ತಿಂಗಳಿಗೆ 5 ಬಾರಿ ಅಥವಾ ವಾರ್ಷಿಕ 60 ಬಾರಿ ವಿತ್ ಡ್ರಾ ಮಾಡಬಹುದಾಗಿದೆ. ಇನ್ನಿತರ ಬ್ಯಾಂಕ್ಗಳ ಎಟಿಎಂಗಳಿಂದ ಮಾಸಿಕ 5 ಬಾರಿ (ಟೈರ್- 2 ಸಿಟಿ)/3 ಬಾರಿ ಮೆಟ್ರೋ ಸಿಟಿ ಅಥವಾ ವಾರ್ಷಿಕ 36 ಬಾರಿ/ 60 ಬಾರಿ ಉಚಿತವಾಗಿ ವಿತ್ ಡ್ರಾ ಮಾಡಿಕೊಳ್ಳಬಹುದು.
* ಎಸ್ಬಿಐ ಗ್ರಾಹಕರು ತಿಂಗಳಿಗೆ 28 ವಹಿವಾಟುಗಳಿಗೆ ಯಾವುದೇ ಶುಲ್ಕವಿಲ್ಲ. ಈ ತಿಂಗಳಲ್ಲಿ 13 ಬಾರಿ ಹಣ ವರ್ಗಾವಣೆ (ಠೇವಣಿ, ಹಣ ಸ್ವೀಕಾರ, ಸ್ವಂತ ಬ್ಯಾಂಕ್ ಎಟಿಎಂ, ಇತರ ಬ್ಯಾಂಕ್ ಎಟಿಎಂ) ಸೇವೆಗಳನ್ನು ಮೆಟ್ರೋ ಸಿಟಿಗಳಲ್ಲಿ ಪಡೆಯಬಹುದು. ಇತರ ನಗರಗಳಲ್ಲಿ 15 ವಹಿವಾಟಿಗಳಿಗೆ ವಿನಾಯಿತಿ ನೀಡಲಾಗಿದೆ.
* ಡೆಬಿಟ್ ಕಾರ್ಡ್ ಫ್ರೀ ಗ್ರಾಹಕರಿಗೆ ಕ್ಯಾಶ್ ಡೆಪಾಸಿಟ್ ಮಷಿನ್ (ಸಿಡಿಎಂ) ಸೇವೆಗಳ ಮೇಲೆ ಯಾವುದೇ ಶುಲ್ಕ ವಿಧಿಸುತ್ತಿಲ್ಲ.