ನವದೆಹಲಿ: ಹಣಕಾಸಿನ ಬಿಕ್ಕಟ್ಟಿನಲ್ಲಿರುವ ಯೆಸ್ ಬ್ಯಾಂಕ್ನ ತಲಾ ಪ್ರತಿ ಷೇರಿಗೆ ₹ 10 ಯಂತೆ ಒಟ್ಟು 725 ಕೋಟಿ ಮೌಲ್ಯದ ಷೇರುಗನ್ನು ಖರೀದಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಕೇಂದ್ರ ಮಂಡಳಿಯ ಕಾರ್ಯಕಾರಿ ಸಮಿತಿಯು (ಇಸಿಸಿಬಿ) ಅನುಮತಿ ನೀಡಿದೆ.
ಖಾಸಗಿ ವಲಯದ ಯೆಸ್ ಬ್ಯಾಂಕ್ ಮರು ಚೇತರಿಸಿಕೊಂಡ ಬಳಿಕವೂ ಎಸ್ಬಿಐನ ಶೇ. 49 ಪಾಲುದಾರಿಕೆಯ ಮಿತಿ ಹೊಂದಿರಲಿದೆ. ಷೇರು ಖರೀದಿಯು ಇನ್ನು ನಿಯಂತ್ರಕ ಅನುಮೋದನೆಗೆ ಒಳಪಟ್ಟಿರುತ್ತದೆ ಎಂದು ರೆಗ್ಯೂಲೆಟರಿ ಫೈಲಿಂಗ್ನಲ್ಲಿ ತಿಳಿಸಿದೆ.
ಕೇಂದ್ರ ಮಂಡಳಿಯ ಕಾರ್ಯಕಾರಿ ಸಮಿತಿಯು ಮಾರ್ಚ್ 11ರಂದು ಸಭೆ ಸೇರಿತ್ತು. ಯೆಸ್ ಬ್ಯಾಂಕ್ ಲಿಮಿಟೆಡ್ನಿಂದ ಪ್ರತಿ ಷೇರಿಗೆ 10 ರೂ.ಯಂತೆ ಒಟ್ಟು 725 ಕೋಟಿ ಷೇರು ಖರೀದಿಸುವ ಮೂಲಕ ಒಟ್ಟು 7,250 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಗೆ ನೀಡಿದೆ.
ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ ಯೆಸ್ ಬ್ಯಾಂಕ್ ಪುನಶ್ಚೇತನಕ್ಕೆ ಹಾಗೂ ಹೂಡಿಕೆದಾರರ ಮತ್ತು ಗ್ರಾಹಕರ ಠೇವಣಿ ಭದ್ರತೆಗೆ ಆರ್ಬಿಐ, ನೂತನ ನೀತಿಯ ಕರಡು ಯೋಜನೆ ಜಾರಿಗೆ ತಂದಿತು.