ವಾಷಿಂಗ್ಟನ್/ರಿಯಾದ್: ಇ- ಕಾಮರ್ಸ್ ದೈತ್ಯ ಅಮೆಜಾನ್ ಸಂಸ್ಥಾಪಕ/ ವಿಶ್ವದ ಆಗರ್ಭ ಶ್ರೀಮಂತ ಜೆಫ್ ಬೆಜೊಸ್ ತನ್ನ ಪತ್ನಿ ಮೆಕೆಂಜಿ ಬೆಜೊಸ್ಗೆ ನೀಡಿದ್ದ ವಿಚ್ಛೇದನದ ಜೀವನಾಂಶ ಮೊತ್ತ ಸಾಕಷ್ಟು ಸುದ್ದಿಮಾಡಿತ್ತು.
ಈಗ ಈ ಡಿವೋರ್ಸ್ ಹಿಂದೆ ಫೋನ್ ಕದ್ದಾಲಿಕೆ ಆಪಾದನೆ ಕೇಳಿಬಂದಿದೆ. ಸೌದಿ ದೊರೆ ಖಾತೆಯಿಂದ ಕಳುಹಿಸಲಾದ ವಾಟ್ಸ್ಆ್ಯಪ್ ಸಂದೇಶ ಮೂಲಕ ಜೆಫ್ ಬೆಜೊಸ್ ಅವರ ಫೋನ್ ಹ್ಯಾಕ್ ಮಾಡಲಾಗಿತ್ತು ಎಂಬ ಆರೋಪದ ವರದಿ ಪ್ರಕಟವಾಗಿದೆ.
ಈ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ ಸೌದಿ ಅರೇಬಿಯಾ ರಾಯಭಾರಿ ಕಚೇರಿ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದು, 'ಜೆಫ್ ಬಿಜೊಸ್ ಅವರ ಫೋನ್ ಹ್ಯಾಕಿಂಗ್ ಹಿಂದ ಸೌದಿ ಅರೇಬಿಯಾ ಕೈವಾಡ ಇದೆ ಎಂಬುದು ಅಸಂಬದ್ಧವಾದದ್ದು. ಈ ಬಗ್ಗೆ ಸತ್ಯಾಸತ್ಯತೆಗಳನ್ನು ಪತ್ತೆಹಚ್ಚಲು ತನಿಖೆಗೆ ಆದೇಶಿಸಿದ್ದೇವೆ. ಈ ಮೂಲಕ ಸತ್ಯವನ್ನು ಜಗತ್ತಿನ ಮುಂದೆ ಇಡುತ್ತೇವೆ' ಎಂದು ಹೇಳಿಕೆ ನೀಡಿದೆ.
-
Recent media reports that suggest the Kingdom is behind a hacking of Mr. Jeff Bezos' phone are absurd. We call for an investigation on these claims so that we can have all the facts out.
— Saudi Embassy (@SaudiEmbassyUSA) January 22, 2020 " class="align-text-top noRightClick twitterSection" data="
">Recent media reports that suggest the Kingdom is behind a hacking of Mr. Jeff Bezos' phone are absurd. We call for an investigation on these claims so that we can have all the facts out.
— Saudi Embassy (@SaudiEmbassyUSA) January 22, 2020Recent media reports that suggest the Kingdom is behind a hacking of Mr. Jeff Bezos' phone are absurd. We call for an investigation on these claims so that we can have all the facts out.
— Saudi Embassy (@SaudiEmbassyUSA) January 22, 2020
ದೊರೆ ಮೊಹಮ್ಮದ್ ಅವರದ್ದು ಎನ್ನಲಾದ ವಾಟ್ಸ್ಆ್ಯಪ್ ಖಾತೆಯಿಂದ ಮೆಸೇಜ್ ಬಂದ ಬಳಿಕ ಬೆಜೊಸ್ ಅವರ ಫೋನ್ ಹ್ಯಾಕ್ ಆಗಿದೆ. ಸಂದೇಶ ತಲುಪುತ್ತಿದ್ದಂತೆ ಮೊಬೈಲ್ನಲ್ಲಿದ್ದ ಸಾಕಷ್ಟು ದತ್ತಾಂಶ ಕದಿಯಲಾಗಿದೆ ಎಂದು ವಿಶ್ವ ಸಂಸ್ಥೆಯ ತನಿಖಾ ಸಮಿತಿ ವರದಿ ನೀಡಲಿದೆ ಎಂದು ಅಮೆರಿಕ ಮೂಲದ ಮಾಧ್ಯಮವೊಂದು ವರದಿ ಮಾಡಿದೆ.
ಜೆಫ್ ಬೆಜೊಸ್- ಮೆಕೆಂಜಿ ಬೆಜೊಸ್ ಅವರ ವಿಚ್ಛೇದನ ಜಗತ್ತಿನಲ್ಲಿ ಅತ್ಯಂತ ದುಬಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. 1993ರಲ್ಲಿ ಮದುವೆಯಾದ ಈ ಜೋಡಿ ಸುದೀರ್ಘ 26 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದರು. ಜೀವನಾಂಶವಾಗಿ ಜೆಫ್ ಅವರು ವಿಚ್ಛೇದಿತ ಪತ್ನಿಗೆ ₹ 2.6 ಲಕ್ಷ ಕೋಟಿ ( 38 ಬಿಲಿಯನ್ ಡಾಲರ್) ನೀಡಿದ್ದರು.