ಗುರುಗ್ರಾಮ್: ಇತ್ತೀಚೆಗೆ ಬಿಡುಗಡೆಯಾದ ಬಹುನಿರೀಕ್ಷಿತ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್-20 ಸರಣಿಯು ಭಾರತದಲ್ಲಿ ₹ 66,999 ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ. ಗ್ರಾಹಕರು ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮುಂಗಡವಾಗಿ ಕಾಯ್ದಿರಿಸಬಹುದು ಎಂದು ಸ್ಯಾಮ್‌ಸಂಗ್ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತದಲ್ಲಿ ಗ್ಯಾಲಕ್ಸಿ ಎಸ್ 20 ಸ್ಮಾರ್ಟ್‌ಫೋನ್ ₹ 66,999, ಎಸ್ 20 ಪ್ಲಸ್ ₹ 73,999 ಹಾಗೂ ಗ್ಯಾಲಕ್ಸಿ ಎಸ್ 20 ಅಲ್ಟ್ರಾ ₹ 92,999 ದರ ನಿಗದಿಪಡಿಸಲಾಗಿದೆ. ಮುಂಗಡ ಬುಕ್ಕಿಂಗ್ ಮಾಡುವ ಭಾರತೀಯ ಗ್ರಾಹಕರಿಗೆ 2020ರ ಮಾರ್ಚ್ 6ರಂದು ಸ್ಮಾರ್ಟ್ಫೋನ್ಗಳು ಕೈಸೇರಲಿವೆ.
ಗ್ಯಾಲಕ್ಸಿ ಎಸ್ 20 ಅನ್ನು ಮುಂಗಡ ಕಾಯ್ದಿರಿಸಿದ ಗ್ರಾಹಕರು ಹೊಸ ಗ್ಯಾಲಕ್ಸಿ ಬಡ್ಸ್ ಅನ್ನು 2,999 ರೂ.ಗೆ ಖರೀದಿಸಬಹುದು. ಗ್ಯಾಲಕ್ಸಿ ಎಸ್ 20 ಮತ್ತು ಗ್ಯಾಲಕ್ಸಿ ಎಸ್ 20 ಅಲ್ಟ್ರಾ ಮೊಬೈಲ್ ಅನ್ನು ಪ್ರಿ ಬುಕ್ಕಿಂಗ್ ಮಾಡಿದರೆ ಗ್ಯಾಲಕ್ಸಿ ಬಡ್ಸ್ ಅನ್ನು ಕೇವಲ 1,999 ರೂ.ಗೆ ಖರೀದಿಸಲಿದ್ದಾರೆ. ಸ್ಯಾಮ್‌ಸಂಗ್ ಸ್ಯಾಮ್‌ಸಂಗ್ ಕೇರ್ ಅನ್ನು 1,999 ರೂ.ಗೆ ಯಾವುದೇ ಮೂರು ಸ್ಮಾರ್ಟ್‌ಫೋನ್‌ಗಳಲ್ಲಿ ಮುಂಗಡ ಬುಕ್ಕಿಂಗ್‌ನಲ್ಲಿ ಪಡೆಯಬಹುದು.
ಗ್ಯಾಲಕ್ಸಿ ಎಸ್ 20 ಕಾಸ್ಮಿಕ್ ಗ್ರೇ, ಕ್ಲೌಡ್ ನೀಲಿ, ಕ್ಲೌಡ್ ಗುಲಾಬಿ ಬಣ್ಣಗಳಲ್ಲಿ ಲಭ್ಯವಿದ್ದರೇ ಗ್ಯಾಲಕ್ಸಿ ಎಸ್ 20 ಕಾಸ್ಮಿಕ್ ಗ್ರೇ, ಕ್ಲೌಡ್ ಬ್ಲೂ, ಕಾಸ್ಮಿಕ್ ಬ್ಲ್ಯಾಕ್ ಮತ್ತು ಗ್ಯಾಲಕ್ಸಿ ಎಸ್ 20 ಅಲ್ಟ್ರಾ ಕಾಸ್ಮಿಕ್ ಗ್ರೇ, ಕಾಸ್ಮಿಕ್ ಬ್ಲ್ಯಾಕ್ ಬಣ್ಣದಲ್ಲಿವೆ.
ಗ್ಯಾಲಕ್ಸಿ ಎಸ್ 20 ಸರಣಿಯು 25W ವೇಗದ (ಎಸ್ 20 ಅಲ್ಟ್ರಾ 45W ಸೂಪರ್ಫಾಸ್ಟ್ ಚಾರ್ಜಿಂಗ್) ಬ್ಯಾಟರಿ ಚಾರ್ಜಿಂಗ್ ಹೊಂದಿದೆ. ಎಸ್ 20 4000 ಎಮ್ಎಹೆಚ್ ಬ್ಯಾಟರಿ, ಎಸ್ 20 4,500ಎಮ್ಎಹೆಚ್ ಬ್ಯಾಟರಿಯನ್ನು ಹೊಂದಿದ್ದರೇ ಅಲ್ಟ್ರಾ 5,000 ಎಮ್ಎಹೆಚ್ ಬ್ಯಾಟರಿಯನ್ನು ಸಾಮರ್ಥ್ಯವಿದೆ.
ಎಸ್ 20 ಮತ್ತು ಎಸ್ 20 ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಅಳವಡಿಸಲಾಗಿದೆ. ಮುಖ್ಯ ಕ್ಯಾಮೆರಾ 64 ಎಂಪಿ ಕ್ಯಾಮೆರಾ ಮತ್ತು 10 ಎಂಪಿ ಸೆಲ್ಫಿ ಶೂಟರ್ ಹೊಂದಿದ್ದರೆ ಎಸ್ 20 ಅಲ್ಟ್ರಾ 108 ಎಂಪಿ ಕ್ಯಾಮೆರಾ ಮತ್ತು 40 ಎಂಪಿ ಫ್ರಂಟ್ ಕ್ಯಾಮೆರಾವಿದೆ.