ಗುರುಗ್ರಾಮ್: ಸ್ಯಾಮ್‌ಸಂಗ್ ಕಂಪನಿಯು ಗುರುವಾರ ನೂತನ ಕೊಡುಗೆ ಘೋಷಿಸಿದ್ದು, ಗ್ಯಾಲಕ್ಸಿ ಎ20 ಸೀರಿಸ್ಗೆ ಹಳೆಯ ಸ್ಮಾರ್ಟ್ಫೋನ್ ಎಕ್ಸ್ಚೇಂಜ್ ಮಾಡಿಕೊಂಡರೆ ₹ 5,000 ವರೆಗೂ ರಿಯಾಯಿತಿ ದೊರೆಯಲಿದೆ.
ಭಾರತದಲ್ಲಿ ಗ್ಯಾಲಕ್ಸಿ ಎಸ್20 ಸ್ಮಾರ್ಟ್ಫೋನ್ ಬೆಲೆ ₹ 66,999, ಎಸ್20+ ದರ ₹ 73,999 ಮತ್ತು ಗ್ಯಾಲಕ್ಸಿ ಎಸ್20 ಅಲ್ಟ್ರ ಫೋನ್ ₹ 92,999ಗೆ ಮಾರಾಟ ಆಗುತ್ತಿದೆ.
ಗ್ಯಾಲಕ್ಸಿ ಎಸ್ 20 ಮತ್ತು ಎಸ್ 20 ಅಲ್ಟ್ರಾ ಮೊಬೈಲ್ ಅನ್ನು ಮುಂಗಡವಾಗಿ ಕಾಯ್ದಿರಿಸುವ ಸಂಭಾವ್ಯ ಗ್ರಾಹಕರು ಗ್ಯಾಲಕ್ಸಿ ಬಡ್ಸ್ 1,999 ರೂ.ಗೆ ಖರೀದಿಸಬಹುದು. ಗ್ಯಾಲಕ್ಸಿ ಎಸ್ 20 ಖರೀದಿಸುವರು ಅವುಗಳನ್ನು 2,999 ರೂ. ಕೊಂಡುಕೊಳ್ಳಬಹುದಾಗಿದೆ.
ಸ್ಯಾಮ್‌ಸಂಗ್ ಕೇರ್ (ಆಕಸ್ಮಿಕ ಮತ್ತು ದ್ರವ ಹಾನಿ ರಕ್ಷಣೆ) ಅನ್ನು ಕೇವಲ 1,999 ರೂ.ಯಲ್ಲಿ (ಮೂಲ ಬೆಲೆ ₹ 3,999) ದೊರೆಯಲಿದೆ. ಸ್ಯಾಮ್‌ಸಂಗ್ ಕೇರ್ ಯಾವುದೇ ರೀತಿಯ ಹಾನಿ ಅಥವಾ ದ್ರವ್ಯತ ಹಾನಿಯಿಂದ ಫೋನ್‌ಗೆ ಸಂಪೂರ್ಣ ರಕ್ಷಣೆ ನೀಡುತ್ತದೆ. ಇದು ಮುಂಭಾಗದಲ್ಲಿ ಪರದೆ ಹೊಂದಿದ್ದು, ಒಂದು ವರ್ಷದ ವಾಯ್ದೆ ಸಹ ಒಳಗೊಂಡಿದೆ.
ಸ್ಯಾಮ್‌ಸಂಗ್ ಸ್ಮಾರ್ಟ್ಫೋನ್ ತಯಾರಕರ ಜೊತೆಗೆ ನೆಟವರ್ಕ್ ಸೇವೆ ನೀಡುವಂತಹ ರಿಲಯನ್ಸ್ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್- ಐಡಿಯಾ ಗ್ಯಾಲಕ್ಸಿ ಎಸ್20 ಮೇಲೆ ಹೆಚ್ಚುವರಿ ಕೊಡುಗೆಗಳನ್ನು ನೀಡುತ್ತಿವೆ.