ನವದೆಹಲಿ: ಸಾರ್ವಜನಿಕ ಸ್ವಾಮ್ಯದ ಭಾರತೀಯ ಉಕ್ಕು ಪ್ರಾಧಿಕಾರದ ಎಸ್‌ಎಐಎಲ್, 2020ರ ಡಿಸೆಂಬರ್ಗೆ ಕೊನೆಗೊಂಡ ಮೂರನೇ ತ್ರೈಮಾಸಿಕದಲ್ಲಿ 1,468 ಕೋಟಿ ರೂ. ಆದಾಯ ಗಳಿಸಿದೆ.
ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಕಂಪನಿಯು 343.57 ಕೋಟಿ ರೂ. ಲಾಭಂಶ ಕಂಡಿತ್ತು. ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಕಂಪನಿಯ ಒಟ್ಟು ಆದಾಯವು ಹಿಂದಿನ ವರ್ಷದ ಅವಧಿಯಲ್ಲಿ 16,714.87 ಕೋಟಿ ರೂ.ಗಳಿಂದ 19,997.31 ಕೋಟಿ ರೂ.ಗೆ ಏರಿದೆ.
ಒಟ್ಟಾರೆ ವೆಚ್ಚವು 16,406.81 ಕೋಟಿ ರೂ.ಗಳಾಗಿದ್ದು, ಒಂದು ವರ್ಷದ ಹಿಂದೆ 17,312.64 ಕೋಟಿ ರೂ.ಯಷ್ಟಿತ್ತು. ಸೈಲ್ 4.37 ಮಿಲಿಯನ್ ಟನ್ (ಎಂಟಿ) ಕಚ್ಚಾ ಉಕ್ಕು ಉತ್ಪಾದಿಸಿದ್ದ್ಉ, ಕಳೆದ ವರ್ಷ (ಸಿಪಿಎಲ್ವೈ) ಹೋಲಿಸಿದರೆ ಇದು ಶೇ 9ರಷ್ಟು ಬೆಳವಣಿಗೆ ದಾಖಲಿಸಿದೆ.
ಇದನ್ನೂ ಓದಿ: ಮುಂಬೈ ನಗರ ರೈಲು ಫೆ.1ರಿಂದ ಶುರು: 10 ತಿಂಗಳ ಬಳಿಕ ಮತ್ತೆ ಪ್ರಯಾಣಕ್ಕೆ ಜನ ಸಜ್ಜು
ಪರಿಶೀಲನೆಯ ತ್ರೈಮಾಸಿಕದಲ್ಲಿ ಕಂಪನಿಯು 4.15 ಮಿಲಿಯನ್ ಟನ್ ಮಾರಾಟವಾಗುವ ಉಕ್ಕನ್ನು ಉತ್ಪಾಸಿದ್ದು, ಇದು ಶೇ 6ರಷ್ಟು ಏರಿಕೆಯಾಗಿದೆ.
ಎಸ್‌ಐಎಲ್ ಅಧ್ಯಕ್ಷೆ ಸೋಮಾ ಮೊಂಡಾಲ್ ಮಾತನಾಡಿ, ಎಲ್ಲಾ ಸವಾಲುಗಳ ನಡುವೆಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ಎಸ್‌ಐಎಲ್ ಒಟ್ಟಾರೆ ಸುಧಾರಣೆ ಕಂಡಿದೆ. ಅವಕಾಶಗಳನ್ನು ಕಸಿದುಕೊಳ್ಳುವತ್ತ ಗಮನಹರಿಸುವುದರೊಂದಿಗೆ ಕ್ರಮೇಣ ಪ್ರಾರಂಭವಾದ ಕೂಡಲೇ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಉಕ್ಕಿನ ಬೇಡಿಕೆ ಪೂರೈಸಲು ಕಂಪನಿಯು ಸಜ್ಜಾಗಿದೆ ಎಂದರು.
ಸ್ಟೀಲ್ ಸಚಿವಾಲಯದ ಅಧೀನದಲ್ಲಿರುವ ಎಸ್‌ಐಎಲ್ ದೇಶದ ಅತಿದೊಡ್ಡ ಉಕ್ಕು ತಯಾರಕ ಸಂಸ್ಥೆಯಾಗಿದ್ದು, ವರ್ಷಕ್ಕೆ ಸುಮಾರು 21 ಮಿಲಿಯನ್ ಟನ್ (ಎಂಟಿಪಿಎ) ಉತ್ಪಾದನಾ ಸಾಮರ್ಥ್ಯ ಹೊಂದಿದೆ.