ನವದೆಹಲಿ: ಹೆಚ್‌ಸಿಎಲ್ ಟೆಕ್ನಾಲಜೀಸ್ ಅಧ್ಯಕ್ಷರಾದ ಶಿವ ನಾಡಾರ್ ಅವರ ಪುತ್ರಿ ರೋಶ್ನಿ ನಾಡಾರ್ ಮಲ್ಹೋತ್ರಾ ಅವರನ್ನು ಕಂಪನಿಯ ನಿರ್ದೇಶಕರ ಮಂಡಳಿಯ ಹೊಸ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಶಿವ ನಾಡಾರ್ ಅವರು ಕಂಪನಿಯ ಎಂಡಿ ಆಗಿ ಮುಂದುವರಿಯಲಿದ್ದಾರೆ ಎಂದು ರೆಗ್ಯುಲೇಟರಿ ಫೈಲಿಂಗ್ ಹೆಚ್‌ಸಿಎಲ್ ತಿಳಿಸಿದೆ.
ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಚ್ಛೆಯನ್ನು ಶಿವ ನಾಡಾರ್ ಅವರು ವ್ಯಕ್ತಪಡಿಸಿದ್ದರು. 2020ರ ಜುಲೈ 17ರಂದು ನಿರ್ದೇಶಕರ ಮಂಡಳಿ ಮತ್ತು ಕಂಪನಿಯ ಅಧ್ಯಕ್ಷರಾಗಿ ಕಾರ್ಯನಿರ್ವಾಹಕ ನಿರ್ದೇಶಕರಾದ ರೋಶ್ನಿ ನಾಡಾರ್ ಮಲ್ಹೋತ್ರಾ ಅವರನ್ನು ನಿರ್ದೇಶಕರ ಮಂಡಳಿ ನೇಮಿಸಿದೆ. ಕಂಪನಿಯ ಮುಖ್ಯ ಕಾರ್ಯತಂತ್ರದ ಅಧಿಕಾರಿಯಾಗಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಶಿವ ನಾಡಾರ್ ಮುಂದುವರಿಯುತ್ತಾರೆ ಎಂದು ಹೇಳಿದೆ.
ರೋಶ್ನಿ ಅವರನ್ನು ಸಾಫ್ಟ್‌ವೇರ್ ರಫ್ತು ಮಾಡುವ ಮೇಜರ್ ಬೋರ್ಡ್‌ನಲ್ಲಿ ಹೆಚ್ಚುವರಿ ನಿರ್ದೇಶಕರಾಗಿ 2013ರಲ್ಲಿ ಸೇರ್ಪಡೆಯಾದರು. ಹೆಚ್‌ಸಿಎಲ್ ಟೆಕ್ನಾಲಜೀಸ್ ಶುಕ್ರವಾರ ತನ್ನ ನಿವ್ವಳ ಲಾಭದ ವರದಿ ಪ್ರಕಟಿಸಿದ್ದು, ಶೇ.31.7ರಷ್ಟು ಏರಿಕೆ ಕಂಡು 2,925 ಕೋಟಿ ರೂ. ತಲುಪಿದೆ.