ETV Bharat / business

ರಿಲಯನ್ಸ್​ ಮಾರುಕಟ್ಟೆ ಮೌಲ್ಯ 16 ಲಕ್ಷ ಕೋಟಿ ರೂ.ಗೆ ಏರಿಕೆ: ಒಂದೇ ವರ್ಷದಲ್ಲಿ ಶೇ 93ರಷ್ಟು ಜಿಗಿತ

ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ 2,368 ರೂ.ಗೆ ತಲುಪಿದ ಬಳಿಕ ಈ ಸಾಧನೆಗೈದ ದೇಶದ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಆರ್‌ಐಎಲ್‌ನ ಷೇರು ಬೆಲೆ ಬಿಎಸ್‌ಇನಲ್ಲಿ ಹಿಂದಿನ 2,317 ರೂ.ಗೆ ಹೋಲಿಸಿದರೆ ಶೇ 2.2ರಷ್ಟು ಏರಿಕೆ ಕಂಡು 2,368 ರೂ.ಗೆ ತಲುಪಿತು.

author img

By

Published : Sep 16, 2020, 10:32 PM IST

Mukesh Ambani
ಮುಖೇಶ್ ಅಂಬಾನಿ

ಮುಂಬೈ: ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್​ಐಎಲ್) ಬುಧವಾರದ ಆರಂಭಿಕ ವಹಿವಾಟಿನಲ್ಲಿ 16 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಮೌಲ್ಯ ಗಳಿಸಿದ ಮೊದಲ ಭಾರತೀಯ ಸಂಸ್ಥೆಯಾಗಿದೆ.

ಮಾರುಕಟ್ಟೆಯಲ್ಲಿ ರಿಲಯನ್ಸ್ ಷೇರು ದಿನದ ವಹಿವಾಟು ಸಾರ್ವಕಾಲಿಕ ಗರಿಷ್ಠ 2,368 ರೂ.ಗೆ ತಲುಪಿದ ಬಳಿಕ ಈ ಸಾಧನೆಗೈದ ದೇಶದ ಪ್ರಪ್ರಥಮ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಆರ್‌ಐಎಲ್‌ನ ಷೇರು ಬೆಲೆ ಬಿಎಸ್‌ಇನಲ್ಲಿ ಹಿಂದಿನ ವಹಿವಾಟಿನದ 2,317 ರೂ.ಗೆ ಹೋಲಿಸಿದರೆ ಶೇ 2.2ರಷ್ಟು ಏರಿಕೆ ಕಂಡು 2,368 ರೂ.ಗೆ ತಲುಪಿತು.

ಬಿಗ್​ ಕ್ಯಾಪ್ ಸ್ಟಾಕ್ ಕಳೆದ ಎರಡು ದಿನಗಳಲ್ಲಿ ಶೇ 1.57ರಷ್ಟು ಗಳಿಕೆ ಕಂಡಿವೆ. ಆರ್‌ಐಎಲ್‌ನ ಮಾರುಕಟ್ಟೆ ಕ್ಯಾಪ್ 16 ಲಕ್ಷ ಕೋಟಿ ರೂ. ದಾಟಿದ ಮೊದಲ ಭಾರತೀಯ ಅತ್ಯಮೂಲ್ಯ ಕಂಪನಿಯಾಗಿದೆ.

ಆರ್​​ಐಎಲ್​​ನ ಷೇರು ಬೆಲೆ ಒಂದು ವಾರದಲ್ಲಿ ಶೇ 8.27ರಷ್ಟು ಮತ್ತು ಒಂದು ತಿಂಗಳಲ್ಲಿ ಶೇ 10.69ರಷ್ಟು ಗಳಿಕೆಯಾಗಿದೆ. ಈ ವರ್ಷದ ಆರಂಭದಿಂದ ಷೇರು ಮೌಲ್ಯದಲ್ಲಿ ಶೇ 54.55ರಷ್ಟು ಗಳಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಶೇ 93.26ರಷ್ಟು ಏರಿಕೆಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.