ಮುಂಬೈ: ಮುಂಬೈ ಷೇರುಪೇಟೆಯ ಗುರುವಾರದ ಬಿಎಸ್‌ಇಯ ಆರಂಭಿಕ ವಹಿವಾಟಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ (ಆರ್‌ಐಎಲ್) ಷೇರು ಬೆಲೆ 1,581.25 ರೂ.ಗೆ ತಲುಪಿದ ನಂತರ ಮಾರುಕಟ್ಟೆ ಬಂಡವಾಳ (ಎಂ-ಕ್ಯಾಪ್) ಮೌಲ್ಯವು 10 ಟ್ರಿಲಿಯನ್ ರೂ. ಏರಿಕೆಯಾಗಿದ್ದು, ಈ ಗುರಿ ಮುಟ್ಟಿದ ಮೊದಲ ಭಾರತೀಯ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಯಿಲ್ನಿಂದ ಟೆಲಿಕಾಂ ಸಮೂಹದವರೆಗೂ ಚಾಚಿಕೊಂಡಿರುವ ಷೇರುಪೇಟೆಯ ಆರ್‌ಐಎಲ್ ಎಂ-ಕ್ಯಾಪ್ ವಹಿವಾಟು ₹ 10,02,380 ಕೋಟಿಗೆ ಏರಿಕೆಯಾಗಿದೆ. ಕಳೆದ ಎಂಟು ವಹಿವಾಟಿನ ದಿನಗಳಲ್ಲಿ ಆರ್‌ಐಎಲ್ ಶೇ 8ರಷ್ಟು ಲಾಭ ಗಳಿಸುವ ಮೂಲಕ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿದೆ. ಕಂಪನಿಯ ಟೆಲಿಕಾಂ ವಿಭಾಗವಾದ ರಿಲಯನ್ಸ್ ಜಿಯೋ ಮುಂದಿನ ಕೆಲವು ವಾರಗಳಲ್ಲಿ ಡೇಟಾ ದರ ಹೆಚ್ಚಿಸುವುದಾಗಿ ಘೋಷಿಸಿದ ಬಳಿಕ ಬಿಎಸ್ಇನ ಎಸ್&ಪಿ ಶೇ 1ರಷ್ಟು ಏರಿಕೆಯಾಗಿದೆ.
ಒಂದೇ ವರ್ಷದಲ್ಲಿ ಆರ್ಐಎಲ್ನ ಷೇರುಮೌಲ್ಯ ಶೇ 40ರಷ್ಟು ಏರಿಕೆಯಾಗಿದೆ. ಟೆಲಿಕಾಂ ದರ ಏರಿಕೆ, ಅನಿಲ ಉತ್ಪಾದನಾ ಘಟಕ ಆರಂಭದಂತಹ ಉದ್ಯಮ ವಿಸ್ತರಣೆಯಿಂದ ಹೆಚ್ಚನ ಸಂಪತ್ತು ಶೇಖರಣೆ ಆಗುತ್ತಿದೆ. ಕರ್ನಾಟಕ ರಾಜ್ಯದ ಬಜೆಟ್ ₹ 2,18,488 ಕೋಟಿಯ ನಿರೀಕ್ಷಿತ ಬಜೆಟ್ ಗಾತ್ರದಲ್ಲಿ ಆರ್ಐಎಲ್ನ 10 ಲಕ್ಷ ಕೋಟಿ ರೂ. ಎಂ- ಕ್ಯಾಪ್ಲ್ಲಿ ಸುಮಾರು ನಾಲ್ಕು ವರ್ಷಗಳ ಆಯವ್ಯಯ ಮಂಡನೆ ಮಾಡಬಹುದು.
ರಿಲಯನ್ಸ್ ಬಳಿಕ ಟಿಸಿಎಸ್ ಎರಡನೇ ಸ್ಥಾನದಲ್ಲಿದ್ದು, ಎಚ್ಡಿಎಫ್ಸಿ ಬ್ಯಾಂಕ್, ಹಿಂದೂಸ್ಥಾನ ಯುನಿಲಿವರ್ ಮತ್ತು ಎಚ್ಡಿಎಫ್ಸಿ ನಂತರದಲ್ಲಿವೆ.