ನವದೆಹಲಿ: ಮುಕೇಶ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಇಂಡಸ್ಟ್ರೀಸ್ ಅಸಾಧಾರಣ ಆದಾಯ ಗಳಿಸಿದ್ದು, ಜೂನ್ ತ್ರೈಮಾಸಿಕದಲ್ಲಿ 13,248 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ ಎಂದು ವರದಿಗಳು ತಿಳಿಸಿವೆ.
ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ನಿವ್ವಳ ಲಾಭ 10,141 ಕೋಟಿ ರೂ.ಯಷ್ಟು ಇತ್ತು ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
ಷೇರು ಮಾರಾಟದಿಂದ 4,966 ಕೋಟಿ ರೂ. ಹೆಚ್ಚುವರಿ ಲಾಭ ಬಂದಿದೆ ಎಂದು ಕಂಪನಿ ತಿಳಿಸಿದೆ.