ETV Bharat / business

ಎಕ್ಸ್​ಕ್ಸಾನ್​​ ಮೊಬಿಲ್ ಹಿಂದಿಕ್ಕಿ ರಿಲಯನ್ಸ್​ ಇಂಡಸ್ಟ್ರೀಸ್ ವಿಶ್ವದ 2ನೇ ಅತಿದೊಡ್ಡ ಇಂಧನ ಕಂಪನಿ!

ಅತಿದೊಡ್ಡ ರಿಫೈನರಿ ಸಂಕೀರ್ಣ ನಿರ್ವಹಿಸುವ ರಿಲಯನ್ಸ್ ಶುಕ್ರವಾರ ಮುಂಬೈಯಲ್ಲಿ ಶೇ 4.3ರಷ್ಟು ಗಳಿಸಿ ತನ್ನ ಮಾರುಕಟ್ಟೆ ಮೌಲ್ಯಕ್ಕೆ 8 ಬಿಲಿಯನ್ ಡಾಲರ್​ ಸೇರ್ಪಡೆ ಮಾಡಿಕೊಂಡು 189 ಬಿಲಿಯನ್​ ಡಾಲರ್​ಗೆ ತಲುಪಿತು. ಎಕ್ಸಾನ್‌ನ ಷೇರು ಮೌಲ್ಯದ ಶೇ 39ರಷ್ಟು ಕುಸಿತಕ್ಕೆ ಹೋಲಿಸಿದರೆ ಈ ವರ್ಷ ರಿಲಯನ್ಸ್‌ನ ಷೇರು ಮೌಲ್ಯದಲ್ಲಿ ಶೇ 43ರಷ್ಟು ಏರಿಕೆಯಾಗಿದೆ. 1.76 ಟ್ರಿಲಿಯನ್ ಮಾರುಕಟ್ಟೆ ಬಂಡವಾಳ ಹೊಂದಿರುವ ಅರಾಮ್ಕೊ ವಿಶ್ವದ ಅತಿದೊಡ್ಡ ಇಂಧನ ಕಂಪನಿಯಾಗಿದೆ.

Energy Company
ಇಂಧನ
author img

By

Published : Jul 27, 2020, 4:53 PM IST

ನವದೆಹಲಿ: ಏಷ್ಯಾದ ಶ್ರೀಮಂತ ಉದ್ಯಮಿಯ ನಿಯಂತ್ರಣದಲ್ಲಿರುವ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಸೌದಿ ಅರಾಮ್ಕೊ ನಂತರ ವಿಶ್ವದ ಅತಿದೊಡ್ಡ ಇಂಧನ ಕಂಪನಿಯಾದ ಎಕ್ಸ್​ಕ್ಸಾನ್​​ ಮೊಬಿಲ್ ಕಾರ್ಪೊರೇಷನ್​ (ExxonMobil Corp) ಅನ್ನು ಹಿಂದಿಕ್ಕಿದೆ ಎರಡನೇ ಸ್ಥಾನ ಪಡೆದಿದೆ.

ಅತಿದೊಡ್ಡ ರಿಫೈನರಿ ಸಂಕೀರ್ಣ ನಿರ್ವಹಿಸುವ ರಿಲಯನ್ಸ್ ಶುಕ್ರವಾರ ಮುಂಬೈಯಲ್ಲಿ ಶೇ 4.3ರಷ್ಟು ಗಳಿಸಿ ತನ್ನ ಮಾರುಕಟ್ಟೆ ಮೌಲ್ಯಕ್ಕೆ 8 ಬಿಲಿಯನ್ ಡಾಲರ್​ ಸೇರ್ಪಡೆ ಮಾಡಿಕೊಂಡು 189 ಬಿಲಿಯನ್​ ಡಾಲರ್​ಗೆ ತಲುಪಿತು. ಎಕ್ಸಾನ್‌ನ ಷೇರು ಮೌಲ್ಯದ ಶೇ 39ರಷ್ಟು ಕುಸಿತಕ್ಕೆ ಹೋಲಿಸಿದರೆ, ಈ ವರ್ಷ ರಿಲಯನ್ಸ್‌ನ ಷೇರು ಮೌಲ್ಯದಲ್ಲಿ ಶೇ 43ರಷ್ಟು ಏರಿಕೆಯಾಗಿದೆ. 1.76 ಟ್ರಿಲಿಯನ್ ಮಾರುಕಟ್ಟೆ ಬಂಡವಾಳ ಹೊಂದಿರುವ ಅರಾಮ್ಕೊ ವಿಶ್ವದ ಅತಿದೊಡ್ಡ ಇಂಧನ ಕಂಪನಿಯಾಗಿದೆ.

ಈ ವರ್ಷದ ಮಾರ್ಚ್ 31ಕ್ಕೆ ಕೊನೆಗೊಂಡ ಅವಧಿಯಲ್ಲಿ ರಿಲಯನ್ಸ್‌ನ ಇಂಧನ ವ್ಯವಹಾರದ ಆದಾಯ ಶೇ 80ರಷ್ಟು ಹೊಂದಿದೆ. ಈ ವರ್ಷ ಅಂಬಾನಿಯ ಸಂಪತ್ತಿಗೆ 22.3 ಬಿಲಿಯನ್ ಡಾಲರ್​ ಸಂಪತ್ತು ಸೇರ್ಪಡೆಯಾಗಿದೆ. ಬ್ಲೂಮ್‌ಬರ್ಗ್ ಬಿಲಿಯನೇರ್‌ಗಳ ಸೂಚ್ಯಂಕದಲ್ಲಿ ಅಂಬಾನಿ ಈಗ ಐದನೇ ಸ್ಥಾನಕ್ಕೆ ತಲುಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.