ಮುಂಬೈ : ಜಾಗತಿಕ ಟೆಕ್ ಹೂಡಿಕೆದಾರರು ಮತ್ತು ಹಕ್ಕುಗಳ ವಿತರಣೆ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕೇವಲ 58 ದಿನಗಳಲ್ಲಿ 1,68,818 ಕೋಟಿ ರೂ. ಬಂಡವಾಳ ಹೆಚ್ಚಿಸಿಕೊಂಡಿದೆ.
ಅಲ್ಪಾವಧಿಯಲ್ಲಿ ಹೆಚ್ಚು ಬಂಡವಾಳ ಪಡೆದುಕೊಳ್ಳುವ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್ ಭಾರತೀಯ ಕಾರ್ಪೊರೇಟ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಇದರ ಜೊತೆಗೆ ಪೆಟ್ರೋಲಿಯಂ ಮತ್ತು ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ಪೆಟ್ರೋಲಿಯಂಗೆ ಷೇರುಗಳ ಮಾರಾಟ ಮಾಡಿ 1.75 ಲಕ್ಷ ಕೋಟಿ ರೂ. ನಿಧಿ ಸಂಗ್ರಹಿಸಿದೆ. ರಿಲಯನ್ಸ್ ನಿವ್ವಳ ಸಾಲವು 31 ಮಾರ್ಚ್ 2020 ರ ವೇಳೆಗೆ 1,61,035 ಕೋಟಿ ರೂ. ಇತ್ತು. ಈ ಹೂಡಿಕೆಗಳೊಂದಿಗೆ ಈಗ ನಿವ್ವಳ ಸಾಲ ಮುಕ್ತವಾಗಿದೆ.
ಜಿಯೋ ಪ್ಲಾಟ್‌ಫಾರ್ಮ್‌ಗಳು, ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಎಡಿಐಎ, ಟಿಪಿಜಿ, ಎಲ್ ಕ್ಯಾಟರ್ಟನ್ ಮತ್ತು ಪಿಐಎಫ್ ಸೇರಿದಂತೆ ಪ್ರಮುಖ ಜಾಗತಿಕ ಹೂಡಿಕೆದಾರರಿಂದ 1,15,693.95 ಕೋಟಿ ರೂ.ಗಳನ್ನು 22 ಏಪ್ರಿಲ್ 2020 ರಿಂದ ಸಂಗ್ರಹಿಸಿದೆ.
ಆರ್ಐಎಲ್ನ 1.59 ಕೋಟಿ ರೂ. ಹಕ್ಕುಗಳ ಹಂಚಿಕೆ ಕಳೆದ 10 ವರ್ಷಗಳಲ್ಲಿ ಹಣಕಾಸೇತರ ಸಂಸ್ಥೆಯ ಭಾರತದಲ್ಲಿ ಮಾತ್ರವಲ್ಲದೇ ಇಡಿ ವಿಶ್ವದಲ್ಲೇ ದೊಡ್ಡ ಸಂಸ್ಥೆಯಾಗಿ ಮಾರ್ಪಾಡಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖೇಶ್ ಅಂಬಾನಿ, 31 ಮಾರ್ಚ್ 2021 ರ ವೇಳಾಪಟ್ಟಿಗೆ ಮುಂಚಿತವಾಗಿ ರಿಲಯನ್ಸ್ ನಿವ್ವಳ ಸಾಲ ಮುಕ್ತವಾಗಿ ಮಾಡುವ ಮೂಲಕ ಷೇರುದಾರರಿಗೆ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ ಎಂದು ಘೋಷಿಸಲು ನಾನು ಸಂತೋಷ ಪಡುತ್ತೇನೆ ಎಂದು ಹೇಳಿದ್ದಾರೆ.