ETV Bharat / business

ಭಾರತಕ್ಕೆ ಬಂತು ಸೂಪರ್​ಸ್ಪೀಡ್​ನ 5G ಸ್ಮಾರ್ಟ್​ಫೋನ್... ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ..! - ಎಕ್ಸ್​50 ಪ್ರೊ 5ಜಿ

ನೂತನ 5ಜಿ ಸ್ಮಾರ್ಟ್​ಫೋನ್​ ಎರಡು ಕಲರ್ ಮತ್ತು ಮೂರು ಶೈಲಿಯಲ್ಲಿ ಮೊಬೈಲ್​ ಪ್ರಿಯರಿಗೆ ಲಭ್ಯವಾಗಲಿದೆ. 6ಜಿಬಿ + 128ಜಿಬಿಯ ಮೊಬೈಲ್​ ₹ 37,999, 8ಜಿಬಿ+128ಜಿಬಿ ಹಾಗೂ 8ಜಿಬಿ + 256ಜಿಬಿಯ ಸಾಮರ್ಥ್ಯ ಹೊಂದಿದ್ದು, ಕ್ರಮವಾಗಿ ₹ 39,999 & ₹ 44,999 ಫ್ಲಿಪ್​ಕಾರ್ಟ್​ ಮತ್ತು ರಿಯಲ್​ಮಿ.ಕಾಮ್​ನಲ್ಲಿ ಸಂಜೆ 6 ಗಂಟೆಯಿಂದ ಮಾರಾಟಕ್ಕೆ ಸಿಗಲಿದೆ.

5G smartphone
5G ಸ್ಮಾರ್ಟ್​ಫೋನ್
author img

By

Published : Feb 24, 2020, 5:20 PM IST

ನವದೆಹಲಿ: ಚೀನಾದ ಸ್ಮಾರ್ಟ್​ಫೋನ್ ತಯಾರಿಕ ಕಂಪನಿಯಾದ ರಿಯಲ್​ಮಿ, ಇದೇ ಪ್ರಥಮ ಬಾರಿಗೆ ಭಾರತೀಯ ಮಾರುಕಟ್ಟೆಗೆ 'ಎಕ್ಸ್​50 ಪ್ರೊ 5ಜಿ' ಸ್ಮಾರ್ಟ್​ಫೋಪನ್​ ಅನ್ನು ಪರಿಚಯಿಸಿದೆ.

ಈ ಸ್ಮಾರ್ಟ್​ಫೋನ್​ ಎರಡು ಕಲರ್ ಮತ್ತು ಮೂರು ಶೈಲಿಯಲ್ಲಿ ಮೊಬೈಲ್​ ಪ್ರಿಯರಿಗೆ ಲಭ್ಯವಾಗಲಿದೆ. 6ಜಿಬಿ + 128ಜಿಬಿಯ ಮೊಬೈಲ್​ ₹ 37,999, 8ಜಿಬಿ+128ಜಿಬಿ ಹಾಗೂ 8ಜಿಬಿ + 256ಜಿಬಿಯ ಸಾಮರ್ಥ್ಯದ್ದು ಕ್ರಮವಾಗಿ ₹ 39,999 & ₹ 44,999 ಫ್ಲಿಪ್​ಕಾರ್ಟ್​ ಮತ್ತು ರಿಯಲ್​ಮಿ.ಕಾಮ್​ನಲ್ಲಿ ಸಂಜೆ 6 ಗಂಟೆಯಿಂದ ಮಾರಾಟಕ್ಕೆ ಸಿಗಲಿದೆ.

ಭಾರತದ ಮೊದಲ 5 ಜಿ ಸೂಪರ್​ಫಾಸ್ಟ್ ಪರ್ಫಾರ್ಮೆನ್ಸ್ ಚಾಲಿತ ಸ್ಮಾರ್ಟ್​ಫೋನ್ ರಿಯಲ್​ಮಿ ಎಕ್ಸ್ 50 ಪ್ರೊ 5ಜಿ ಮೊಬೈಲ್​ ಅನ್ನು ಭಾರತೀಯ ಮೊಬೈಲ್​ ಪ್ರಿಯರಿಗಾಗಿ ಬಿಡುಗಡೆ ಮಾಡಲು ಖುಷಿ ಆಗುತ್ತಿದೆ. ಕಾರ್ಯಕ್ಷಮತೆ, ವಿನ್ಯಾಸ ಮತ್ತು ಗುಣಮಟ್ಟದಲ್ಲಿ ಅತ್ಯುತ್ತಮವಾದ ಸ್ಪೋರ್ಟಿಂಗ್ ಹೊಂದಿರುವ ರಿಯಲ್​ಮಿಎಕ್ಸ್ 50 ಪ್ರೊ 5ಜಿ, ಭವಿಷ್ಯದ ಟ್ರೆಂಡ್​ಸೆಟರ್​ ಆಗಲಿದೆ. ಎಂದು ರಿಯಲ್​ಮಿ ಇಂಡಿಯಾದ ಸಿಇಒ ಮಾಧವ್ ಶೆತ್ ತಿಳಿಸಿದರು.

ಸ್ಮಾರ್ಟ್ಫೋನ್ 6.44-ಇಂಚಿನ ಸೂಪರ್-ಅಲ್ಮೋಡ್​​ ಡಿಸ್​ಪ್ಲೇ ಹೊಂದಿದ್ದು, ಇದು 20: 9ರ ಆಕಾರ ಅನುಪಾತವಿದೆ. ಶೇ 92ರಷ್ಟು ಸ್ಕ್ರೀನ್-ಟು-ಬಾಡಿ ಅನುಪಾತ ಸಹ ಹೊಂದಿದೆ.

ಫೋನ್ ಅನ್ನು ಕ್ವಾಲ್ಕಾಮ್ ಸ್ನಾಪ್​ಡ್ರಾಗನ್ 865 ಪ್ರೊಸೆಸರ್ ಅಡ್ರಿನೊ 650 ಜಿಪಿಯು ಜೊತೆ ಜೋಡಿಸಲಾಗಿದೆ. ಆಂಡ್ರಾಯ್ಡ್ 10 ಆಧಾರಿತ ಹೊಚ್ಚ ಹೊಸ ರಿಯಲ್​​ಮಿ ಯುಐನೊಂದಿಗೆ ರವಾನಿಸಲಾಗಿದೆ. ಹಿಂಭಾಗದಲ್ಲಿ 64 ಎಂಪಿ ಕ್ವಾಡ್ ಕ್ಯಾಮೆರಾ ಮತ್ತು ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ವಿವಿಧ ರೀತಿಯ ಟೆಕ್-ಟ್ರೆಂಡಿ ಕಾರ್ಯಗಳನ್ನು ನವೀಕರಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.