ETV Bharat / business

ಅನಿಲ್​ ಅಂಬಾನಿಯ ಆರ್​ಕಾಮ್​ಗೆ No ಇನ್​ಕಮ್:​ ಮಲ್ಯ, ನೀರವ್​ಗಿಂತ ಅತ್ಯಧಿಕ ಸಾಲದ ಹೊರೆ! - ರಿಲಯನ್ಸ್ ಕಮ್ಯುನಿಕೇಷನ್ಸ್ ಹಣಕಾಸು ಬಿಕ್ಕಟ್ಟು

ಸಾಲದಾತರು ನೇಮಿಸಿದ ರೆಸಲ್ಯೂಶನ್ ತಜ್ಞರು ಪರಿಶೀಲಿಸಿದ ಅಂಕಿ- ಅಂಶಗಳ ಪ್ರಕಾರ, ಎನ್‌ಸಿಎಲ್‌ಟಿಗೆ ಸಲ್ಲಿಸುವ ದಿನಾಂಕದಂದು ಆರ್‌ಕಾಂ ಗ್ರೂಪ್​, ಭಾರತೀಯ ಬ್ಯಾಂಕ್​​ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸುಮಾರು 26,000 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಪ್ರಕಟಣೆಯಲ್ಲಿ ತಿಳಿಸಿದೆ.

anil Ambani
ಅನಿಲ್​ ಅಂಬಾನಿ
author img

By

Published : Dec 30, 2020, 9:06 PM IST

ನವದೆಹಲಿ: ಭಾರತೀಯ ಬ್ಯಾಂಕ್​ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸುಮಾರು 26,000 ಕೋಟಿ ರೂ. ನೀಡಬೇಕಿದೆ ಎಂದು ಸಾಲದ ಟೆಲಿಕಾಂ ಸಂಸ್ಥೆ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಂ) ತಿಳಿಸಿದೆ.

ಪ್ರಸ್ತುತ ದಿವಾಳಿತನ ಪ್ರಕ್ರಿಯೆಯ ಮೂಲಕ ಸಾಗುತ್ತಿರುವ ಕಂಪನಿಯ ಮೇಲೆ ಭಾರತೀಯ ಬ್ಯಾಂಕ್​ಗಳು, ಮಾರಾಟಗಾರರು ಮತ್ತು ಇತರ ಸಾಲಗಾರರು ಸುಮಾರು 86,000 ಕೋಟಿ ರೂ. ಸಾಲ ನೀಡಬೇಕಿದೆ ಎಂದು ಆರೋಪಿಸಿದ್ದಾರೆ.

ಸಾಲದಾತರು ನೇಮಿಸಿದ ರೆಸಲ್ಯೂಶನ್ ತಜ್ಞರು ಪರಿಶೀಲಿಸಿದ ಅಂಕಿ- ಅಂಶಗಳ ಪ್ರಕಾರ, ಎನ್‌ಸಿಎಲ್‌ಟಿಗೆ ಸಲ್ಲಿಸುವ ದಿನಾಂಕದಂದು ಆರ್‌ಕಾಂ ಗ್ರೂಪ್​, ಭಾರತೀಯ ಬ್ಯಾಂಕ್​​ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಸುಮಾರು 26,000 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಪ್ರಕಟಣೆಯಲ್ಲಿ ತಿಳಿಸಿದೆ.

ಒಂದು ಲೆಕ್ಕಾಚಾರದಲ್ಲಿ ದೇಶ ಬಿಟ್ಟು ಪರಾರಿಯಾದ ಮದ್ಯದ ಉದ್ಯಮಿ ವಿಜಯ್ ಮಲ್ಯರ 9,000 ಕೋಟಿ ರೂ. ಹಾಗೂ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ 13,500 ಕೋಟಿ ರೂ. ಸಾಲ ವಂಚನೆ ಎಸಗಿದ ವಜ್ರದ ವ್ಯಾಪಾರಿ ನೀರವ್ ಮೋದಿಯ ಸಾಲಕ್ಕಿಂತ ಅತ್ಯಧಿಕವಾಗಿದೆ.

ಸಾಲದಾರರು ಆರ್‌ಕಾಮ್‌ನಲ್ಲಿ ಸುಮಾರು 49,000 ಕೋಟಿ ರೂ., ರಿಲಯನ್ಸ್ ಟೆಲಿಕಾಂನಲ್ಲಿ 24,000 ಕೋಟಿ ರೂ. ಮತ್ತು ರಿಲಯನ್ಸ್ ಇನ್ಫ್ರಾಟೆಲ್‌ 12,600 ಕೋಟಿ ರೂ. ಸಾಲ ಇರುವುದಾಗಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮುಂದೆ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: ಕೇಂದ್ರಕ್ಕೆ ತುಸು ಸಮಾಧಾನ: ಚಾಲ್ತಿ ಖಾತೆಯ ಕೊರತೆ ಮಿಗತಿ ಅಲ್ಪ ಇಳಿಕೆ!

ಕೆಲವು ಬ್ಯಾಂಕ್​ಗಳ ಆಪಾದಿನೆಯ 'ವಂಚನೆ'ಯು ನ್ಯಾಯಸಮ್ಮತವಲ್ಲದ ಮತ್ತು ಅನಗತ್ಯವಾಗಿದೆ. ದೆಹಲಿ ಹೈಕೋರ್ಟ್ ಮಧ್ಯಂತರ ಆದೇಶವನ್ನು ಸದ್ಯಕ್ಕೆ ಪಾಲಿಸುವಂತೆ ನಿರ್ದೇಶಿಸಿದೆ. ಈ ವಿವಾದವು ಈಗ ಕೋರ್ಟ್​ ಆವರಣದಲ್ಲಿದೆ ಎಂದು ಹೇಳಿದೆ.

ಟೆಲಿಕಾಂ ವಲಯದಲ್ಲಿನ ಆರ್ಥಿಕ ಒತ್ತಡ, ಅನಿಯಮಿತ ಉಚಿತ ಕೊಡುಗೆದಾರರ 2016ರಲ್ಲಿ ಉದ್ಯಮಕ್ಕೆ ಕಾಲಿಟ್ಟಾಗಿನಿಂದ ಆರ್​ಕಾಮ್​ಗೆ ಸಾಕಷ್ಟು ನಷ್ಟವಾಯಿತು. ಇದರಿಂದ ಇಡೀ ಉದ್ಯಮ ನಾಶವಾಗಿ ಏರ್‌ಸೆಲ್, ಸಿಸ್ಟೇಮಾ, ವಿಡಿಯೋಕಾನ್, ಟಾಟಾ ಡೊಕೊಮೊ ಮತ್ತು ಹಲವಾರು ಟೆಲಿಕಾಂಪನಿಗಳು ಕೊಳ್ಳುವುದರಿಂದ ಹಿಂದೆ ಸರಿದವು. ವೊಡಾಫೋನ್ ನಂತಹ ಜಾಗತಿಕ ದೈತ್ಯ ಸಂಸ್ಥೆ ಸಹ ನಷ್ಟದಿಂದ ಸಂಕಷ್ಟಕ್ಕೆ ಸಿಲುಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.