ETV Bharat / business

ಪಡೆದ ಸಾಲಕ್ಕೆ ಯಾವುದೇ ವೈಯಕ್ತಿಕ ಗ್ಯಾರಂಟಿ ನೀಡಿಲ್ಲ ಎಂದ ಅನಿಲ್​ ಅಂಬಾನಿ :  ಯುಕೆ ನ್ಯಾಯಾಲಯಕ್ಕೆ ಖಡಕ್​ ಉತ್ತರ

author img

By

Published : Jun 24, 2020, 1:34 AM IST

Updated : Jun 24, 2020, 5:19 AM IST

ಚೀನಾದ ಮೂರು ಬ್ಯಾಂಕ್‌ಗಳಿಗೆ 717 ದಶಲಕ್ಷ ಡಾಲರ್‌ (4,965 ಕೋಟಿ ರೂ.) ಸಾಲಕ್ಕೆ ಅನಿಲ್‌ ಅಂಬಾನಿ ವೈಯಕ್ತಿಕ ಖಾತ್ರಿ ನೀಡಿದ್ದಾರೆ ಎಂಬ ಸಂಬಂಧ ಅವರು ಯುಕೆ ಕೋರ್ಟ್​ನಿಂದ ವಿಚಾರಣೆ ಎದುರಿಸುತ್ತಿದ್ದಾರೆ. 717 ಮಿಲಿಯನ್ ಡಾಲರ್ ಪಾವತಿಸುವಂತೆ ಯುಕೆ ನ್ಯಾಯಾಲಯದ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

Anil Ambani
ಅನಿಲ್​ ಅಂಬಾನಿ

ಮುಂಬೈ: ಉದ್ಯಮಿ ಅನಿಲ್ ಅಂಬಾನಿ ಅವರು ಚೀನಾದ ಮೂರು ಬ್ಯಾಂಕ್​ಗಳಿಂದ ರಿಲಯನ್ಸ್ ಕಮ್ಯುನಿಕೇಷನ್ಸ್ (ಆರ್‌ಕಾಮ್) ಎರವಲು ಪಡೆದ ಸಾಲಕ್ಕೆ ಯಾವುದೇ ವೈಯಕ್ತಿಕ ಗ್ಯಾರಂಟಿ ನೀಡಿಲ್ಲ ಎಂದು ಇಂಗ್ಲೆಂಡ್​ (ಯುಕೆ) ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ.

ಚೀನಾದ ಮೂರು ಬ್ಯಾಂಕ್‌ಗಳ 717 ದಶಲಕ್ಷ ಡಾಲರ್‌ (4,965 ಕೋಟಿ ರೂ.) ಸಾಲಕ್ಕೆ ಅನಿಲ್‌ ಅಂಬಾನಿ ವೈಯಕ್ತಿಕ ಖಾತ್ರಿ ನೀಡಿದ್ದಾರೆ ಎಂಬ ಸಂಬಂಧ ಅವರು ಯುಕೆ ಕೋರ್ಟ್​ನಿಂದ ವಿಚಾರಣೆ ಎದುರಿಸುತ್ತಿದ್ದಾರೆ. 717 ಮಿಲಿಯನ್ ಡಾಲರ್ ಪಾವತಿಸುವಂತೆ ಯುಕೆ ನ್ಯಾಯಾಲಯದ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ.

ಭಾರತದ ಅತಿದೊಡ್ಡ ಸಾಲದಾತ ಎಸ್‌ಬಿಐಗೆ ವೈಯಕ್ತಿಕ ಗ್ಯಾರಂಟಿ ನೀಡಿದ್ದಾರೆ. ಎಸ್‌ಬಿಐ 1,200 ಕೋಟಿ ರೂ. ಸಾಲ ವಸೂಲಿಗಾಗಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿ (ಎನ್ ಸಿಎಲ್ ಟಿ) ಮೆಟ್ಟಿಲೇರಿದೆ. ಈ ಎರಡೂ ಪ್ರಕರಣಗಳಲ್ಲಿ ಎಸ್‌ಬಿಐ ಮತ್ತು ಚೀನೀ ಬ್ಯಾಂಕ್​ಗಳು ಸಾಲವನ್ನು ಗುಂಪು ಕಂಪನಿಯೊಂದು ಮಾಡಿದೆ. ಅದು ವೈಯಕ್ತಿಕವಲ್ಲ ಎಂದು ಕೋರ್ಟ್​ಗೆ ಪ್ರತಿಕ್ರಿಯಿಸಿದರು.

ರಿಲಯನ್ಸ್ ಇನ್​ಫ್ರಾಸ್ಟ್ರಕ್ಚರ್ ಗ್ರೂಪ್​ನ (ಆರ್​ಇನ್​ಫ್ರಾ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅಂಬಾನಿ, ಈಗ ದಿವಾಳಿಯಾದ ಆರ್‌ಕಾಮ್ ಹಣ ಸಾಲ ಪಡೆದಾಗ ಚೀನಾದ ಬ್ಯಾಂಕ್​ಗಳಿಗೆ ಸಂಬಂಧಿಸಿದ ಪತ್ರವಾದ ಕಾರ್ಯಗತಗೊಳಿಸುವ ಸೀಮಿತ ಪವರ್ ಆಫ್ ಅಟಾರ್ನಿಗೆ 2012ರಲ್ಲಿ ಸಹಿ ಹಾಕಿದ್ದೇನೆ ಎಂದಿದ್ದಾರೆ.

ಯಾವ ಆಧಾರದ ಮೇಲೆ ಹಕ್ಕು ಪಡೆಯಲಾಗಿದೆ ಎಂಬ ಖಾತರಿಯನ್ನು ಅವರು ಸಹಿ ಮಾಡಿಲ್ಲ ಎಂದು ಕಂಪನಿಯು ಪ್ರಕಟಣೆಯಲ್ಲಿ ಅಧ್ಯಕ್ಷ ಅನಿಲ್​ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

ಯುಕೆ ನ್ಯಾಯಾಲಯದ ಆದೇಶದ ಪ್ರಕಾರ, ಆರ್‌ಕಾಮ್ ದಿವಾಳಿತನ ಪರಿಹಾರ ಪ್ರಕ್ರಿಯೆಯ ಫಲಿತಾಂಶದ ಆಧಾರದ ಮೇಲೆ ಆಪಾದಿತ ಖಾತರಿಯಡಿಯಲ್ಲಿ ನೀಡಬೇಕಾದ ಅಂತಿಮ ಮೊತ್ತವನ್ನು ನಿರ್ಣಯಿಸಲಾಗುತ್ತದೆ ಎಂದು ಅನಿಲ್ ಅಂಬಾನಿ ಹೇಳಿದ್ದಾರೆ.

ಇಂಡಸ್ಟ್ರಿಯಲ್‌ ಆ್ಯಂಡ್‌ ಕಮರ್ಷಿಯಲ್‌ ಬ್ಯಾಂಕ್‌ ಆಫ್‌ ಚೀನಾ(ಐಸಿಬಿಸಿ), ಚೀನಾ ಡೆವಲಪ್‌ಮೆಂಟ್‌ ಬ್ಯಾಂಕ್‌ ಮತ್ತು ಎಕ್ಸ್‌ ಪೋರ್ಟ್‌-ಇಂಪೋರ್ಟ್‌ ಬ್ಯಾಂಕ್‌ ಆಫ್‌ ಚೀನಾ, ಅನಿಲ್‌ ಅಂಬಾನಿ ವಿರುದ್ಧ ದೂರು ದಾಖಲಿಸಿದ್ದವು. 2012ರಲ್ಲಿ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ ಲಿಮಿಟೆಡ್‌ಗೆ 925.2 ಮಿಲಿಯನ್ ಅಮೆರಿಕನ್ ಡಾಲರ್ ಸಾಲ ನೀಡಲು ಒಪ್ಪಿಕೊಂಡಿದ್ದವು. ಈ ವರ್ಷ ಮೇ 22 ರಂದು ನ್ಯಾಯಾಲಯವು 717 ಮಿಲಿಯನ್ ಡಾಲರ್ ಪಾವತಿಸಲು ಅಂಬಾನಿಗೆ ನಿರ್ದೇಶನ ನೀಡಿತ್ತು.

Last Updated : Jun 24, 2020, 5:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.