ಮುಂಬೈ: ಮುಂಬೈ ಮೂಲದ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ (ಪಿಎಂಸಿ) ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಾರ್ಯಾಚರಣೆಯ ನಿರ್ಬಂಧ ವಿಧಿಸಿದ್ದು, ಈ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಆರ್ರಬಿಐ ಅಧಿಕಾರಿಗಳು ಸಹ ಖಾತೆ ಹೊಂದಿದ್ದಾರೆ.
ಭಾರತದಾದ್ಯಂತ ಸಾಲದ ಅಗತ್ಯಗಳನ್ನು ಬ್ಯಾಂಕ್ಗಳಿಗೆ ಪೂರೈಸುವ ಮತ್ತು ಬಡ್ಡಿ ದರವನ್ನು ನಿರ್ಧಿಸುವ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಸಹಕಾರಿ ಕ್ರೆಡಿಟ್ ಸಹಕಾರಿ ಬ್ಯಾಂಕ್ಗಳಲ್ಲಿ ನಿಶ್ಚಿತ ಠೇವಣಿ ಇರಿಸಿದ್ದಾರೆ. ಸೆಪ್ಟೆಂಬರ್ 23ರಂದು ಪಿಎಂಸಿ ಬ್ಯಾಂಕ್ ಮೇಲೆ ಹಲವು ನಿರ್ಬಂಧಗಳನ್ನು ಹೇರಿದ ಆರ್ಬಿಐ, ಈ ಬ್ಯಾಂಕ್ನಲ್ಲಿ ಹಲವು ಅಧಿಕಾರಿಗಳು ₹ 105 ಕೋಟಿ ಮೊತ್ತದಷ್ಟು ನಿಶ್ಚಿತ ಠೇವಣಿ ಇರಿಸಿದ್ದಾರೆ.
2019ರ ಹಣಕಾಸು ವರ್ಷದ ವಾರ್ಷಿಕ ವರದಿ ಅನ್ವಯ, ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಪಿಎಂಸಿ ಬ್ಯಾಂಕ್ನಲ್ಲಿ 105 ಕೋಟಿ ರೂ. ಸೇರಿದಂತೆ ಇತರ ನಾನಾ ಸಹಕಾರಿ ಬ್ಯಾಂಕ್ಗಳಲ್ಲಿ ಒಟ್ಟು ₹ 478.64 ಕೋಟಿಗಳಷ್ಟು ಸ್ಥಿರ ಅಥವಾ ಅಲ್ಪಾವಧಿಯ ಠೇವಣಿ ಇರಿಸಿದ್ದಾರೆ. ಭಾರತ್ ಸಹಕಾರಿ ಬ್ಯಾಂಕ್ನಲ್ಲಿ ₹ 100 ಕೋಟಿ ಸ್ಥಿರ ಠೇವಣಿ, ಥಾಣೆ ಭರತ್ ಸಹಕಾರಿ ಬ್ಯಾಂಕ್ನಲ್ಲಿ ₹ 85 ಕೋಟಿ, ಸೋಲಾಪುರ್ ಜನತಾ ಸಹಕಾರಿ ಬ್ಯಾಂಕ್ ಮತ್ತು ಅಪ್ನಾ ಸಹಕಾರಿ ಬ್ಯಾಂಕ್ನಲ್ಲಿ ಕ್ರಮವಾಗಿ ₹ 50 ಕೋಟಿ ಹಾಗೂ ₹ 85 ಕೋಟಿ ನಿಶ್ಚಿತ ಠೇವಣಿ ಹೊಂದಿದ್ದಾರೆ.