ನವದೆಹಲಿ: ಗ್ರಾಹಕರ ಚಾಲ್ತಿ ಖಾತೆಗಳ ನಿರ್ವಹಣೆ ಮತ್ತು ನಿಧಿಯ ಬಳಕೆಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಏಳು ಬ್ಯಾಂಕ್ಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ₹ 11 ಕೋಟಿಯಷ್ಟು ದಂಡ ವಿಧಿಸಿದೆ.
ಅಲಹಾಬಾದ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಮಹಾರಾಷ್ಟ್ರಗೆ ತಲಾ 2 ಕೋಟಿ ರೂ. ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ತಲಾ 1.5 ಕೋಟಿ ರೂ. ದಂಡ ಹೇರಲಾಗಿದೆ ಎಂದು ಆರ್ಬಿಐ ತಿಳಿಸಿದೆ.
ದಂಡ ವಿಧಿಸಲು ಕಾರಣ:
ಚಾಲ್ತಿ ಖಾತೆಗಳ ತೆರೆಯುವ ಮತ್ತು ನಿರ್ವಹಿಸುವ ನೀತಿ ಸಂಹಿತೆ, ಶಿಸ್ತಿನ ಅವಶ್ಯಕತೆಗೆ ಬ್ಯಾಂಕ್ಗಳ ಚಾಲ್ತಿ ಖಾತೆಗಳನ್ನು ತೆರೆಯುವುದು, ಡಿಸ್ಕೌಂಟಿಂಗ್ ಅಥವಾ ರಿಡಿಸ್ಕೌಂಟಿಂಗ್ ಆಫ್ ಬಿಲ್ಸ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿರ್ದೇಶನ 2016, ನಿಧಿಗಳ ಅಂತಿಮ ಬಳಕೆಯ ಮಾನಿಟರಿಂಗ್ ಮತ್ತು ಬ್ಯಾಲೆನ್ಸ್ ಶೀಟ್ ದಿನಾಂಕದ ಮೇಲಿನ ಠೇವಣಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಒಟ್ಟು 11 ಕೋಟಿ ರೂ ದಂಡ ಹಾಕಲಾಗಿದೆ ಎಂದು ಸ್ಪಷ್ಟನೆ ನೀಡಿದೆ.