ETV Bharat / business

ಡೆಲ್ಲಿ ಏರ್​ಪೋರ್ಟ್​-ಏರ್‌ ಇಂಡಿಯಾ-ಇಂಡಿಗೋ.. ತ್ರಿಕೋನ ಪ್ರೇಮ ಕಹಾನಿಗೆ ನೆಟ್ಟಿಗರು ಫಿದಾ.. - ಏರ್ ಇಂಡಿಯಾ

ವಿಮಾನ ನಿಲ್ದಾಣ ಹಾಗೂ ವಿಮಾನಯಾನ ಸಂಸ್ಥೆಗಳ ನಡುವಿನ ಸಂಭಾಷಣೆಗಳು ಯುವ ಪ್ರೇಮಿಗಳಿಗಿಂತ ಯಾವುದೇ ವಿಧದಲ್ಲೂ ಕಡಿಮೆ ಇಲ್ಲ. ಇವುಗಳ ನಡುವಿನ ತ್ರಿಕೋನ ಪ್ರಣಯದ ಮಾತುಗಳಿಗೆ ನೆಟ್ಟಿಗರು ಶರಣಾಗಿದ್ದಾರೆ.

Airport
ವಿಮಾನ ನಿಲ್ದಾಣ
author img

By

Published : Feb 14, 2020, 6:21 PM IST

ನವದೆಹಲಿ:ಪ್ರೇಮಿಗಳ ದಿನದಂದು ತನ್ನ ಪ್ರೇಮಿಯನ್ನು ಒಲಿಸಿಕೊಳ್ಳಲು ಪ್ರಿಯತಮ ಅಥವಾ ಪ್ರಿಯತಮೆ ಪ್ರೇಮ ನಿವೇದನೆ ಮಾಡಿಕೊಳ್ಳುವುದು ಸಹಜ. ಆದರೆ, ಇಲ್ಲಿಂದು ತ್ರಿಕೋನ ಪ್ರೇಮ ಕಹಾನಿ ಯುವ ಜೋಡಿಗಳ ಬದಲಿಗೆ ವಿಮಾನ ನಿಲ್ದಾಣ ಹಾಗೂ ವಿಮಾನಯಾನ ಸಂಸ್ಥೆಗಳ ನಡುವೆ ಉಂಟಾಗಿದೆ.

Twitted
ಟ್ವಿಟ್ಟರ್​ ಸಂಭಾಷಣೆ

ಪ್ರೇಮಿಗಳ ದಿನದಂದು ದೆಹಲಿ ವಿಮಾನ ನಿಲ್ದಾಣ ಮತ್ತು ಇಂಡಿಗೋ ಮತ್ತು ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗಳ ನಡುವೆ ಪ್ರೇಮಾಂಕುರವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಇವುಗಳ ನಡುವಿನ ಸಂಭಾಷಣೆ ನೆಟ್ಟಿಗರ ಮನಸ್ಸಿಗೆ ಕಿಚ್ಚು ಹಾಯಿಸಿವೆ.

ಶುಕ್ರವಾರ ಬೆಳ್ಳಂಬೆಳಗ್ಗೆ ಒಂದು ಟ್ವೀಟ್‌ನಲ್ಲಿ ದೆಹಲಿ ವಿಮಾನ ನಿಲ್ದಾಣವು ಇಂಡಿಗೋ ಸಂಸ್ಥೆಗೆ ಭಾವನಾತ್ಮಕ ಪೋಸ್ಟ್ ಮಾಡಿ, 'ಹೇ ಇಂಡಿಗೋ 6ಇ, ನನ್ನ ರನ್​ವೇಯಿಂದ ನೀನು ಎಂದಿಗೂ ಓಡಿಹೋಗುವುದಿಲ್ಲ ಎಂದು ನನಗೆ ಭರವಸೆ ಕೊಡು. ದೆಹಲಿ ಲವ್ಸ್​ ಯು ವ್ಯಾಲೆಂಟೆನ್ಸ್​ ಡೇ-2020' ಕೋರಿಕೊಂಡಿದೆ.

ಏರೋನಾಟಿಕಲ್ ಹಾಸ್ಯದೊಂದಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಪ್ರತ್ಯುತ್ತರ ಕೊಟ್ಟ ಇಂಡಿಗೋ, 'ಡಾರ್ಲಿಂಗ್ ದೆಹಲಿ ಏರ್​ಪೋರ್ಟ್​, ನಿನ್ನ ಒಲವು ನನ್ನನ್ನು ಯಾವಾಗಲೂ ಸರಿಯಾದ ಸಮಯಕ್ಕೆ ಕರೆತರುತ್ತದೆ. ದೆಹಲಿ ಲವ್ಸ್​ ಯು ವ್ಯಾಲೆಂಟೆನ್ಸ್​ ಡೇ2020' ಎಂದು ಲಲನೆಯಿಂದ ಭರವಸೆ ಕೊಟ್ಟಿದೆ.

'ನನ್ನ ಪ್ರೀತಿಯ ಇಂಡಿಗೋ 6ಇ, ನನ್ನಲ್ಲಿ ಸಾಕಷ್ಟು ಭವಿಷ್ಯದ ಕನಸುಗಳಿವೆ..!'

ಶಾರುಖ್​ ಖಾನ್​- ಕಾಜೋಲ್​ ಜೋಡಿ ನಟನೆಯ ಕುಚ್ ಕುಚ್ ಹೋತಾ ಹೈ ಸಿನಿಮಾ ಶೈಲಿಯಲ್ಲಿ ರೀಪ್ಲೇ ಕೊಟ್ಟ ಇಂಡಿಗೋ.. 'ದೆಹಲಿ.. ನೀನು ಹೇಳಿದಾಗೆಲ್ಲಾ ಕುಚ್ ಕುಚ್ ಹೋತಾ ಹೈ (ಏನೋ ಸಂಭವಿಸುತ್ತದೆ)'

ನಾನು ನಿಮ್ಮ ಬಗ್ಗೆ ವಿಮಾನ ಹುಚ್ಚನಾಗಿದ್ದೇನೆ ಎಂಬ ದೆಹಲಿ ನಿಲ್ದಾಣದ ವೇದನೆಗೆ, 'ನಿಮ್ಮ ಪ್ರೇಮ ಸಂಬಂಧ ಎಲ್ಲವನ್ನೂ ಮೀರಿದೆ ಎಂಬುದು ನನಗೆ ತಿಳಿದಿದೆ! ಎಂದು ಇಂಡಿಗೋ ಸಾಂತ್ವನದಿ ನುಡಿಯಿತು.

ಈ ಎರಡರ ನಡುವಿನ ಒಲವಿನ ಸಂಭಾಷಣೆ ನಡುವೆ ವಿರಹದಿ ಮಧ್ಯ ಪ್ರವೇಶಿಸಿದ ಏರ್​ ಇಂಡಿಯಾ, 'ನಿನ್ನ ನಾಭಿಯಲ್ಲಿ ವಿಶೇಷ ಸ್ಥಾನ ಪಡೆದಿರುವವ ನಾನೇ ಧನ್ಯ ಎಂಬ ಆತ್ಮೀಯತೆಗೆ ಕರಗಿ ದೆಹಲಿ ವಿಮಾನ ನಿಲ್ದಾಣ, 'ನಿನ್ನ ಸಮಾನ ಮತ್ತು ಸರಳತೆಗೆ ನನ್ನ ಪ್ರೀತಿ ಸೋತಿದೆ ಎಂದು ಅಷ್ಟೇ ಅಂತಃಕರಣದಿಂದ ಸಂತೈಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.