ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್ನ (ಪಿಎನ್ಬಿ) ಆಡಳಿತಾಧಿಕಾರಿಗಳು ಬ್ಯಾಂಕ್ನ ನೈಜ ಸಾಲವನ್ನು ಮರೆಮಾಚಲು 21,000ಕ್ಕೂ ಅಧಿಕ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.
ಮುಂಬೈ ಪೊಲೀಸರು ಆರ್ಥಿಕ ಅಪರಾಧಗಳ ತನಿಖಾ ದಳ(ಇಒಡಬ್ಲ್ಯು)ಕ್ಕೆ ಸಲ್ಲಿಸಿದ ದೂರಿನ ಅನ್ವಯ, ಈ ತನಿಖೆ ನಡೆಸಲಾಗಿತ್ತು. ಬ್ಯಾಂಕ್ನ ನಿರ್ವಹಣೆಯ ನಿಷ್ಕ್ರಿಯ ಆಸ್ತಿಗಳನ್ನು ಮರೆಮಾಚಲಾಗಿದೆ. ಸಾಲಗಳನ್ನು ವಿತರಿಸದೆ ಅಂದಾಜು 4,389 ಕೋಟಿ ರೂ.ಯಷ್ಟು (616.5 ಮಿಲಿಯನ್ ಡಾಲರ್) ನಷ್ಟಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಈ ಬ್ಯಾಂಕಿಂಗ್ ವಂಚನೆ ಪ್ರಕರಣದಿಂದ ಠೇವಣಿ ಮತ್ತು ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ವಂಚಿಸಿದಂತಾಗಿದೆ.
ಬ್ಯಾಂಕ್ನ ನೈಜ ಹಣಕಾಸಿನ ಸ್ಥಿತಿ ಮರೆಮಾಚಲಾಗಿದೆ ಮತ್ತು ಹಣಕಾಸಿನ ವಹಿವಾಟುಗಳನ್ನು ದಾರಿ ತಪ್ಪಿಸುವ ಚಟುವಟಿಕೆಗಳು ನಡೆದಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಕಾಲ್ಪನಿಕ ಸಾಲ ಖಾತೆಗಳನ್ನು ಬ್ಯಾಂಕ್ನ ಪ್ರಮುಖ ಹಣಕಾಸು ವ್ಯವಸ್ಥೆಯಲ್ಲಿ ನಮೂದಿಸದಿರುವುದು, ಅಪರಾಧದ ಪ್ರಮುಖ ಅಂಶವಾಗಿದೆ. 2018ರಲ್ಲಿ ಇದೇ ಮಾದರಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ನಿಂದ ಸುಮಾರು 10 ಸಾವಿರ ಕೋಟಿ ರೂ.ಯಷ್ಟು ( 2 ಬಿಲಿಯನ್ ಡಾಲರ್) ವಂಚನೆ ನಡೆದದ್ದು ಬಹಿರಂಗಗೊಂಡಿತ್ತು.
ಬ್ಯಾಂಕ್ ಅಧ್ಯಕ್ಷ ವಾರಮ್ ಸಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಸೇರಿದಂತೆ ಬ್ಯಾಂಕ್ನ ಇತರೆ ಅಧಿಕಾರಿಗಳ ಹೆಸರಗಳನ್ನು ದೂರಿನಲ್ಲಿ ನಮೂದಿಸಲಾಗಿದೆ. ನಂಬಿಕೆಯ ಉಲ್ಲಂಘನೆ, ನಕಲಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿ ಆರೋಪ ಸಹ ಇವರ ವಿರುದ್ಧ ಕೇಳಿಬಂದಿದೆ.