ನವದೆಹಲಿ: ಡಿಜಿಟಲ್ ಪಾವತಿ ಸಂಸ್ಥೆ ಪೇಟಿಎಂ 2020-21ರಲ್ಲಿ 1,704 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದು, ದಿನಕ್ಕೆ ಸುಮಾರು 4.65 ಕೋಟಿ ರೂ. ನಷ್ಟ ಅನುಭವಿಸಿದಂತಾಗಿದೆ.
ಕಂಪನಿಯ ಇತ್ತೀಚಿನ ವಾರ್ಷಿಕ ವರದಿಯ ಪ್ರಕಾರ, 2019-20ರಲ್ಲಿ 2,943.32 ಕೋಟಿ ರೂ. ನಷ್ಟವಾಗಿತ್ತು. ಈ ಬಾರಿ ನಷ್ಟವು ಸುಮಾರು 1,240 ಕೋಟಿ ರೂ. ಕಡಿಮೆಯಾಗಿದೆ.
ಕಂಪನಿಯ ಒಟ್ಟು ಆದಾಯವು 2020-21ರಲ್ಲಿ ಶೇಕಡಾ 10ರಷ್ಟು ಕುಸಿದು 3,186 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷ ಇದು 3,540.77 ಕೋಟಿ ರೂ. ಇತ್ತು.
"ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ನಮ್ಮ ವ್ಯಾಪಾರಿ ಪಾಲುದಾರರ ವ್ಯವಹಾರದಲ್ಲಿ ಗಮನಾರ್ಹ ಅಡ್ಡಿ ಉಂಟಾಗಿದ್ದರೂ, ಬಳಿಕ ಚೇತರಿಕೆಯಿಂದಾಗಿ ನಷ್ಟದ ಪ್ರಮಾಣದಲ್ಲಿ ಕಡಿಮೆಯಾಗಿದೆ" ಎಂದು ಪೇಟಿಎಂ ವಕ್ತಾರರು ಹೇಳಿದ್ದಾರೆ.
ಕಂಪನಿಯ ಅಧಿಕೃತ ಷೇರು ಬಂಡವಾಳವು 104.1 ಕೋಟಿ ರೂ.ಗಳಾಗಿದ್ದು, ತಲಾ 10 ರೂ.ಗಳ 10.41 ಲಕ್ಷಕ್ಕೂ ಹೆಚ್ಚಿನ ಷೇರುಗಳನ್ನು ಒಳಗೊಂಡಿದೆ.